ಮೈಸೂರು: ‘ಉದ್ಯೋಗ ವಲಯದಲ್ಲಿ ಕೃತಕ ಬುದ್ಧಿಮತ್ತೆ (ಎಐ)ಯನ್ನು ಬಳಸಿ ಕೆಲಸದ ಕ್ಷಮತೆ ಹೆಚ್ಚಿಸುವ ಬಗ್ಗೆ ಚಿಂತಿಸಬೇಕು. ನೇರವಾಗಿ ಅದರಿಂದ ಮಾಹಿತಿ ಎರವಲು ಪಡೆಯುವುದು ಸಲ್ಲದು’ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ನಿರ್ದೇಶಕ ಪ್ರೊ.ಯು.ದಿನೇಶ್ ಕುಮಾರ್ ತಿಳಿಸಿದರು.

ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಆಯೋಜಿಸಿದ್ದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಪದವಿ ಪ್ರದಾನ ದಿನ ಉದ್ಘಾಟಿಸಿ ಮಾತನಾಡಿದರು.

‘ಕಾಲೇಜು ಶಿಕ್ಷಣ ಮುಗಿಸಿ ಹೊಸ ದಾರಿಯಲ್ಲಿ ಹೆಜ್ಜೆ ಇಡಲು ಆರಂಭಿಸಿದ್ದೀರಿ. ಮುಂದೆ ಉದ್ಯೋಗ ಹಾಗೂ ವೈಯಕ್ತಿಕ ಜೀವನ ಎರಡನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಜವಾಬ್ದಾರಿ ಇದೆ. ಉದ್ಯೋಗ ವಲಯದಲ್ಲಿ ಎಐ ಪರಿಣಾಮಕಾರಿ ಬೆಳವಣಿಗೆ ಹೊಂದಿದೆ. ಉದ್ಯೋಗಿಗಳೂ ಅದಕ್ಕೆ ಹೊಂದಿಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ ಅದರಲ್ಲಿನ ಸೂಕ್ಷ್ಮ ವಿಚಾರಗಳ ಬಗ್ಗೆ ತಿಳಿದುಕೊಳ್ಳಬೇಕು. ಹಾಗಿದ್ದಾಗ ಇತರರಿಗಿಂತ ಉನ್ನತ ಸ್ಥಾನ ಪಡೆಯಬಹುದು’ ಎಂದು ಸಲಹೆ ನೀಡಿದರು.

‘ತಂತ್ರಜ್ಞಾನ ನಮ್ಮ ಕೆಲಸದ ಕ್ಷಮತೆ ಹೆಚ್ಚಿಸಬೇಕು. ಅದರಿಂದ ನಾವು ಆಲಸಿಗಳಾಗಬಾರದು. ವೈಯಕ್ತಿಕ ಜೀವನದಲ್ಲಿ ಸಹಾನುಭೂತಿ ಹೊಂದಿರಬೇಕು. ಕಾಲೇಜಿನ ಬಳಿಕ ಸ್ನೇಹಿತರು ಸಿಗುವುದು ವಿರಳ. ಕೆಲಸದ ಒತ್ತಡ ವೈಯಕ್ತಿಕ ಬದುಕಿಗೆ ತೊಂದರೆ ನೀಡದಂತೆ ಕಾರ್ಯನಿರ್ವಹಿಸಬೇಕು. ಈಗಿನ ಸ್ನೇಹಿತರ ಸಂಪರ್ಕ ಇಟ್ಟುಕೊಳ್ಳಬೇಕು. ನಮ್ಮ ಬೆಳವಣಿಗೆಯಲ್ಲಿ ಸಹಾಯ ಮಾಡಿದವರನ್ನು ಸದಾ ನೆನಪಿಸಿಕೊಳ್ಳಬೇಕು’ ಎಂದರು.

ಮೈಸೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಫ್ರಾನ್ಸಿಸ್ ಸೆರಾವೊ ಅವರು ಉನ್ನತ ಸ್ಥಾನ ಪಡೆದ 35 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ ನಗದು ಬಹುಮಾನ, 52 ಜನರಿಗೆ ವಿದ್ಯಾರ್ಥಿ ವೇತನ ಹಾಗೂ ಮೂವರಿಗೆ ಟಿ.ತುಂಬೊಚೆಟ್ಟಿ ಪ್ರಾಯೋಜಿತ ದತ್ತಿನಿಧಿ ವಿತರಿಸಿದರು. ಒಟ್ಟು 572 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಕಾಲೇಜಿನ ರೆಕ್ಟರ್ ಲೂರ್ದು ಪ್ರಸಾದ್ ಜೋಸೆಫ್, ಕಾಲೇಜಿನ ಪ್ರಾಂಶುಪಾಲ ಜೆ.ಡಿ. ರವಿ ಸಲ್ಡಾನ, ರೀನಾ ಫ್ರಾನ್ಸಿಸ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260429-39-1485267994

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.