ಗುರುವಾರ , ಜುಲೈ 29, 2021
23 °C

ಕೈಗೆಟಕುವ ಬೆಲೆಗೆ 'ಟೆಕ್ನೊ ಸ್ಪಾರ್ಕ್‌ ಗೊ': ಏನಿದರ ವಿಶೇಷತೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಮಾರ್ಟ್‌ಫೋನ್‌ ತಯಾರಿಸುವ ಟೆಕ್ನೊ ಕಂಪನಿಯು ಕಡಿಮೆ ಬೆಲೆಯ ಟೆಕ್ನೊ ಸ್ಪಾರ್ಕ್‌ 6 ಗೊ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. 4ಜಿಬಿ + 64 ಜಿಬಿ ಸಾಮರ್ಥ್ಯದ ಈ ಹ್ಯಾಂಡ್‌ಸೆಟ್‌ ಹಬ್ಬದ ಕೊಡುಗೆಯ ಅಂಗವಾಗಿ ₹ 8,499ಕ್ಕೆ ಸಿಗಲಿದೆ. ಆ ಬಳಿಕ ₹ 8,699 ಕೊಡಬೇಕಾಗುತ್ತದೆ.

ತನ್ನ ಜನಪ್ರಿಯ ಸರಣಿ ಸ್ಪಾರ್ಕ್‌ನಲ್ಲಿ ₹10 ಸಾವಿರಕ್ಕಿಂತ ಕಡಿಮೆ ಬೆಲೆಯ ಇದನ್ನು ಬಿಡುಗಡೆ ಮಾಡಿದ್ದು, ಗ್ರಾಹಕರು ಕೈಗೆಟಕುವ ಬೆಲೆಗೆ ಹಲವು ವೈಶಿಷ್ಟ್ಯಗಳನ್ನು ಅನುಭವಿಸಬಹುದಾಗಿದೆ ಎಂದು ಹೇಳಿದೆ.

6.52 ಇಂಚು ಎಚ್‌ಡಿ ಪ್ಲಸ್ ಡಾಟ್‌ ನಾಚ್‌ ಡಿಸ್‌ಪ್ಲೇ, 5,000 ಎಂಎಎಚ್‌ ಬ್ಯಾಟರಿ, ಡ್ಯುಯಲ್‌ ಫ್ಲ್ಯಾಷ್‌ ಲೈಟ್‌ನೊಂದಿಗೆ 13 ಎಂಪಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ಹಾಗೂ 8 ಎಂಪಿ ಎಐ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಐಸ್‌ ಜೇಡ್‌ಲೈಟ್‌, ಮಿಸ್ಟರಿ ವೈಟ್‌ ಹಾಗೂ ಆ್ವಕಾ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ.

‘₹10 ಸಾವಿರದೊಳಗಿನ ಹ್ಯಾಂಡ್‌ಸೆಟ್‌ಗಳಿಗೆ ಭಾರತದ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರ ಮುಂದುವರಿದ ಭಾಗವಾಗಿ ಸ್ಪಾರ್ಕ್‌ ಸರಣಿಯಲ್ಲಿ ಸ್ಪಾರ್ಕ್‌ 6 ಗೊ ಬಿಡುಗಡೆ ಮಾಡಲಾಗಿದೆ. ಸಂಗ್ರಹಣಾ ಸಾಮರ್ಥ್ಯದ ದೃಷ್ಟಿಯಿಂದ ಹೋಲಿಸಲಾಗದ ದರದಲ್ಲಿ ಕಂಪನಿಯ ಸ್ಥಾನವನ್ನು ಮತ್ತಷ್ಟು ಎತ್ತರಕ್ಕೆ ಒಯ್ಯಲು ಇದು ನೆರವಾಗಲಿದೆ. ಕೈಗೆಟಕುವ ಬೆಲೆಯಲ್ಲಿ ಗ್ರಾಹಕರಿಗೆ ವೇಗದ ಕಾರ್ಯಾಚರಣೆ ಮತ್ತು ಮಲ್ಟಿಟಾಸ್ಕ್‌ ಅನುಭವ ನೀಡುವ ಕಂಪನಿಯ ಉದ್ದೇಶವನ್ನೂ ಈ ಹೊಸ ಸ್ಮಾರ್ಟ್‌ಫೋನ್‌ ಈಡೇರಿಸಲಿದೆ’ ಎಂದು ಟ್ರ್ಯಾನ್ಶನ್‌ ಇಂಡಿಯಾದ ಸಿಇಒ ಅರಿಜೀತ್ ತಲಪತ್ರಾ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು