ಭಾನುವಾರ, ಏಪ್ರಿಲ್ 2, 2023
31 °C

'ರೆನೊ6' ಒಪ್ಪೊ 5ಜಿ ಸ್ಮಾರ್ಟ್‌ಫೋನ್‌ಗಳು ಬಿಡುಗಡೆಗೆ ಸಿದ್ಧ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

 ಒಪ್ಪೊ ಸ್ಮಾರ್ಟ್‌ಫೋನ್‌

ನವದೆಹಲಿ: ಒಪ್ಪೊ ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ 5ಜಿ ತಂತ್ರಜ್ಞಾನ ಒಳಗೊಂಡಿರುವ 'ರೆನೊ 6' ಸರಣಿಯ ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ವೃತ್ತಿಪರ ಗುಣಮಟ್ಟದ ವಿಡಿಯೊ ಮತ್ತು ಫೋಟೊಗಳನ್ನು ಸೆರೆ ಹಿಡಿಯಲು ಈ ಹೊಸ ಫೋನ್‌ಗಳು ಸಹಕಾರಿಯಾಗಲಿವೆ ಎಂದು ಒಪ್ಪೊ ಪ್ರಕಟಿಸಿದೆ.

ಜುಲೈ 14ರಂದು ಒಪ್ಪೊ 'ರೆನೊ6 ಪ್ರೊ 5ಜಿ' ಮತ್ತು 'ರೆನೊ6 5ಜಿ' ಎರಡೂ ಮಾದರಿಯ ಫೋನ್‌ಗಳು ಅನಾವರಣಗೊಳ್ಳಲಿವೆ.

ಪೋಟ್ರೇಲ್‌ ವಿಡಿಯೊ (Bokeh Flare Portrait), ಸಿನಿಮ್ಯಾಟಿಕ್‌ ಎಫೆಕ್ಟ್‌ ಹಾಗೂ ವಿಡಿಯೊ ಅನ್ನು ಮತ್ತಷ್ಟು ಸುಂದರಗೊಳಿಸುವ ಸಾಧ್ಯತೆ, ವಿಡಿಯೊ ರೆಕಾರ್ಡ್‌ ಮಾಡುವಾಗ ಕೃತಕ ಬುದ್ಧಿಮತ್ತೆಯ (ಎಐ) ಬಳಕೆ, ವಿಡಿಯೊ ಎಡಿಟಿಂಗ್‌ ಹಾಗೂ ಮಂದ ಬೆಳಕಿನಲ್ಲಿಯೂ ಉತ್ಕೃಷ್ಟ ಗುಣಮಟ್ಟದ ವಿಡಿಯೊ ಸೆರೆಹಿಡಿಯುವ ಸಾಮರ್ಥ್ಯವನ್ನು ರೆನೊ6 ಮಾದರಿಯ ಫೋನ್‌ಗಳಲ್ಲಿ ಅಳವಡಿಸಲಾಗಿದೆ.

ಮೀಡಿಯಾಟೆಕ್‌ 5ಜಿ ಚಿಪ್‌ ಅಳವಡಿಸಿರುವುದರಿಂದ ಒಮ್ಮೆಲೆ ಹಲವು ಅಪ್ಲಿಕೇಷನ್‌ಗಳನ್ನು ತಡೆಯಿಲ್ಲದೆ ಬಳಸಬಹುದಾಗಿದೆ. 65 ವ್ಯಾಟ್‌ ಸೂಪರ್‌ವೂಕ್‌ ಫ್ಲ್ಯಾಶ್‌ ಚಾರ್ಜಿಂಗ್‌ ತಂತ್ರಜ್ಞಾನವಿದೆ. ಒಪ್ಪೊ ಪ್ರಕಟಣೆಯ ಪ್ರಕಾರ, ವಿಡಿಯೊಗ್ರಫಿಯಲ್ಲಿ ಹೆಚ್ಚಿನ ಆಸಕ್ತಿಯಿರುವವರಿಗೆ ಈ ಫೋನ್‌ ಹೆಚ್ಚು ಮೆಚ್ಚುಗೆಯಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು