ಮಂಗಳವಾರ, ಮಾರ್ಚ್ 31, 2020
19 °C

ಭಾರತದಲ್ಲಿ ಒಪ್ಪೊ ಸ್ಮಾರ್ಟ್‌ಫೋನ್‌ 'ರೆನೊ 3 ಪ್ರೊ' ಬಿಡುಗಡೆ: ಬೆಲೆ ₹29,990

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಒಪ್ಪೊ 'ರೆನೊ 3 ಪ್ರೊ' ಸ್ಮಾರ್ಟ್‌ಫೋನ್‌

ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ಒಪ್ಪೊ ಸೋಮವಾರ ಭಾರತದಲ್ಲಿ 'ರೆನೊ 3 ಪ್ರೊ' ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. ಆರಂಭಿಕ ಬೆಲೆ ₹29,990 ನಿಗದಿಯಾಗಿದೆ. 

64ಎಂಪಿ ಲೆನ್ಸ್‌ ಸೇರಿದಂತೆ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾಗಳನ್ನು ಹೊಂದಿದೆ. ಸೆಲ್ಫಿ ಎಕ್ಸ್‌ಪರ್ಟ್‌ ಎಂದೇ ಕರೆದುಕೊಳ್ಳುವ ಒಪ್ಪೊ ತನ್ನ ಹೊಸ ಫೋನ್‌ನಲ್ಲಿ ಸೆಲ್ಫಿಗಾಗಿ 44ಎಂಪಿ ಮತ್ತು 2ಎಂಪಿ ಡ್ಯೂಯಲ್‌ ಪಂಚ್‌ ಹೋಲ್‌ ಕ್ಯಾಮೆರಾ ನೀಡಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ 'ಕಲರ್‌ಒಎಸ್‌7' ಆಪರೇಟಿಂಗ್ ಸಿಸ್ಟಮ್‌ ಈ ಫೋನ್‌ನಲ್ಲಿ ಲಭ್ಯವಿದೆ.

ಅರೋರಲ್‌ ಬ್ಲೂ, ಮಿಡ್‌ನೈಟ್‌ ಬ್ಲ್ಯಾಕ್‌ ಹಾಗೂ ಸ್ಕೈ ವೈಟ್‌ ಬಣ್ಣಗಳಲ್ಲಿ ಒಪ್ಪೊ ರೆನೊ 3 ಪ್ರೊ ಸಿಗಲಿದೆ. 8ಜಿಬ ರ್‍ಯಾಮ್‌, 128ಜಿಬಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಫೋನ್‌ಗೆ ₹29,900 ನಿಗದಿಯಾಗಿದೆ. 8ಜಿಬಿ ರ್‍ಯಾಮ್‌, 256ಜಿಬಿ ಸಂಗ್ರಹ ಸಾಮರ್ಥ್ಯವಿರುವ ಫೋನ್‌ಗೆ ₹32,990 ಬೆಲೆ ಇದೆ.  

ಯುಎಸ್‌ಬಿ ಟೈಪ್‌–ಸಿ, ಬ್ಲೂಟೂಥ್‌ 5.1, ಡಾಲ್ಬಿ ಆಟಮ್ಸ್‌, ಆಂಡ್ರಾಯ್ಡ್‌ 10 ಆಧಾರಿತ ಕಲರ್‌ಎಸ್‌7 ಆಪರೇಟಿಂಗ್‌ ಸಿಸ್ಟಮ್‌ ಒಳಗೊಂಡಿದೆ. ಒಪ್ಪೊ ಭಾರತದಲ್ಲಿ ಎನ್ಕೊ ವೈರ್‌ಲೆಸ್‌ ಹೆಡ್‌ಫೋನ್‌ಗಳನ್ನೂ ಸಹ ಬಿಡುಗಡೆ ಮಾಡಿದೆ. 

ಒಪ್ಪೊ ಹೊಸ ಫೋನ್‌ಗೆ ಇಂದಿನಿಂದಲೇ ಬುಕ್ಕಿಂಗ್‌ ಲಭ್ಯವಿದ್ದು, ಮಾರ್ಚ್‌ 6ರಿಂದ ಖರೀದಿಗೆ ಸಿಗಲಿದೆ. ಕೆಲವು ಬ್ಯಾಂಕ್‌ಗಳ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ ಬಳಸಿ ಫೋನ್‌ ಖರೀದಿಸಿದರೆ ಶೇ 10ರಷ್ಟು ರಿಯಾಯಿತಿ ಇದೆ. 

ಹೊಸ ಫೋನ್‌ನಲ್ಲಿ ಏನೆಲ್ಲ ಇದೆ?

ಡಿಸ್‌ಪ್ಲೇ: 6.4 ಇಂಚು ಫುಲ್‌ ಎಚ್‌ಡಿ+ ಅಮೋಲೆಡ್‌+ಗೊರಿಲ್ಲ ಗ್ಲಾಸ್‌ 5 ಸುರಕ್ಷತೆ

ಪ್ರೊಸೆಸರ್‌: ಮೀಡಿಯಾಟೆಕ್‌ ಹೀಲಿಯೊ ಪಿ95 

ಸಾಮರ್ಥ್ಯ: 8ಜಿಬಿ ರ್‍ಯಾಮ್‌ ಮತ್ತು 128ಜಿಬಿ/256ಜಿಬಿ ಸಂಗ್ರಹ

ಕ್ಯಾಮೆರಾ: 64ಎಂಪಿ+8ಎಂಪಿ ಅಲ್ಟ್ರಾ ವೈಡ್‌ ಆ್ಯಂಗಲ್‌+13ಎಂಪಿ ಟೆಲಿಫೋಟೊ+2ಎಂಪಿ ಮೋನೊಕ್ರೋಮ್‌ ಸೆನ್ಸರ್‌; ಸೆಲ್ಫಿಗಾಗಿ 44ಎಂಪಿ+2ಎಂಪಿ 

ಬ್ಯಾಟರಿ: 4,025 ಎಂಎಎಚ್‌; 30ವ್ಯಾಟ್‌ ವೋಕ್‌ ಫ್ಲಾಷ್‌ ಜಾರ್ಜ್‌ 

ಬೆಲೆ: ₹29,900 / ₹32,990 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು