ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 'ಒಪ್ಪೊ' ಹೊಸ ಆಪರೇಟಿಂಗ್ ಸಿಸ್ಟಮ್ 'ಕಲರ್‌ಒಎಸ್‌ 7'; ನ.26ಕ್ಕೆ ಬಿಡುಗಡೆ

Last Updated 19 ನವೆಂಬರ್ 2019, 6:46 IST
ಅಕ್ಷರ ಗಾತ್ರ

ನವದೆಹಲಿ: ಸ್ಮಾರ್ಟ್‌ಫೋನ್‌ ಉತ್ಪಾದನಾ ವಲಯದ ದೈತ್ಯ ಸಂಸ್ಥೆಗಳಲ್ಲಿ ಒಂದಾಗಿರುವ ಒಪ್ಪೊ ಇದೇ ಮೊದಲ ಬಾರಿಗೆ ಚೀನಾದಿಂದ ಹೊರಗೆ ತನ್ನ ಮೊಬೈಲ್‌ ಆಪರೇಟಿಂಗ್‌ ಸಿಸ್ಟಮ್‌(ಒಎಸ್‌) ಬಿಡುಗಡೆ ಮಾಡುತ್ತಿದೆ.'ಕಲರ್‌ಒಸ್‌' ಹೆಸರಿನ ಆಪರೇಟಿಂಗ್‌ ಸಿಸ್ಟಮ್‌ ಶೀಘ್ರದಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ.

ಆ್ಯಂಡ್ರಾಯ್ಡ್‌ ಅವಲಂಬಿತ ಕಲರ್‌ಒಎಸ್‌(ColorOS) ಅನ್ನು ಒಪ್ಪೊ ಅಭಿವೃದ್ಧಿ ಪಡಿಸಿದೆ. ನವೆಂಬರ್‌ 26ರಂದು ಭಾರತದಲ್ಲಿ ನೂತನ 'ಕಲರ್‌ಒಸ್‌ 7' ಬಿಡುಗಡೆಗೆ ಸಜ್ಜಾಗಿದೆ. ಆರಾಮದಾಯಕ ಮತ್ತು ಮುದಗೊಳಿಸುವ ಅನುಭವವನ್ನು ಈ ಹೊಸ ಆಪರೇಟಿಂಗ್‌ ಸಿಸ್ಟಮ್‌ ಮೂಲಕ ನೀಡಲು ಒಪ್ಪೊ ಗಮನಹರಿಸಿದೆ.

ಬಳಕೆದಾರರಿಗೆ ಸ್ಮಾರ್ಟ್‌ಫೋನ್‌ ಬಳಕೆ ವೇಳೆ ಯಾವುದೇ ರೀತಿಯ ತೊಡಕು ಉಂಟಾಗದಂತೆ ಕಲರ್‌ಒಎಸ್‌ ಮೂಲಕ ಮಾಡಲಿದೆ. ಸ್ಮಾರ್ಟ್‌ಫೋನ್‌ ಮತ್ತು ತನ್ನದೇ ಆಪರೇಟಿಂಗ್‌ ಸಿಸ್ಟಮ್‌ ಹೊಂದಿರುವ ಒಪ್ಪೊವನ್ನು ಜಗತ್ತಿನಾದ್ಯಂತ ಕೋಟ್ಯಂತರ ಮಂದಿ ಬಳಸುತ್ತಿದ್ದಾರೆ. ಈಗಾಗಲೇ ಸುಮಾರು 30 ಕೋಟಿ ಸ್ಮಾರ್ಟ್‌ಫೋನ್ ಬಳಕೆದಾರರು 'ಕಲರ್‌ಒಎಸ್‌' ಬಳಸುತ್ತಿದ್ದಾರೆ. ಇಂಗ್ಲಿಷ್‌, ಹಿಂದಿ, ಮರಾಠಿ, ಬಾಂಗ್ಲಾ, ಥಾಯ್‌, ಇಂಡೋನೇಷಿಯನ್‌ ಸೇರಿದಂತೆ ಜಗತ್ತಿನ 72 ಭಾಷೆಗಳಿಗೆ ಕಲರ್‌ಒಸ್‌ ತೆರೆದುಕೊಂಡಿದೆ.

ಭಾರತದಲ್ಲಿ ಟಾಪ್‌ 5 ಸ್ಮಾರ್ಟ್‌ಫೋನ್‌ ಬ್ರ್ಯಾಂಡ್‌ಗಳ ಪೈಕಿ ಒಪ್ಪೊ ಸಹ ಸ್ಥಾನ ಪಡೆದಿದ್ದು, ದೇಶದ ಮಾರುಕಟ್ಟೆಯಲ್ಲಿ ಇನ್ನಷ್ಟು ವಿಸ್ತರಿಸಿಕೊಳ್ಳಲು ಕಲರ್‌ಒಎಸ್‌ ಬಿಡುಗಡೆಗೆ ಮುಂದಾಗಿದೆ. ಹೈದರಾಬಾದ್‌ನಲ್ಲಿ ಒಪ್ಪೊ ಸಾಫ್ಟ್‌ವೇರ್‌ ರಿಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಕೇಂದ್ರವನ್ನು ನಡೆಸುತ್ತಿದೆ. ಕಲರ್‌ಒಎಸ್‌ 6 ಅಭಿವೃದ್ಧಿಯನ್ನು ಇದೇ ಕೇಂದ್ರದಲ್ಲಿ ನಡೆಸಲಾಗಿದ್ದು, ಈಗ ಹೊಸ ಒಎಸ್‌ನೊಂದಿಗೆ ದೇಶದ ಗ್ರಾಹಕರ ಬಳಕೆಗೆ ಹೊಂದುವಂತಹ ಆಯ್ಕೆಗಳ ಅಭಿವೃದ್ಧಿಯತ್ತ ಗಮನಹರಿಸಿದೆ.

ನವದೆಹಲಿಯಲ್ಲಿ ನಡೆಯುವ ಕಾರ್ಯಕ್ರಮವನ್ನು ತನ್ನ ಯುಟ್ಯೂಬ್‌ ಚಾನೆಲ್‌(http://bit.ly/ColorOS-YTB)ನಲ್ಲಿ ನೇರಪ್ರಸಾರ ಮಾಡಲು ಸಿದ್ಧತೆ ನಡೆಸಿದೆ.

2008ರಲ್ಲಿ 'ಸ್ಮೈಲಿ ಫೇಸ್‌' ಹೆಸರಿನ ಸ್ಮಾರ್ಟ್‌ಫೋನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸಿದ ಒಪ್ಪೊ ಆಧುನಿಕ ತಂತ್ರಜ್ಞಾನವನ್ನು ಬಹುಬೇಗ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿದೆ. ಒಪ್ಪೊ ಕ್ಲೌಡ್‌ ಮತ್ತು ಒಪ್ಪೊ ಪ್ಲಸ್‌ ಇಂಟರ್‌ನೆಟ್‌ ಸೇವೆಗಳನ್ನೂ ಒದಗಿಸುತ್ತಿದ್ದು, 40ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿದೆ. 6 ಸಂಶೋಧನಾ ಕೇಂದ್ರಗಳು, 4 ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರಗಳು ಹಾಗೂ ಲಂಡನ್‌ನಲ್ಲಿ ಇಂಟರ್‌ನ್ಯಾಷನಲ್‌ ಡಿಸೈನ್‌ ಸೆಂಟರ್‌ ಹೊಂದಿದೆ. ಜಗತ್ತಿನಾದ್ಯಂತ ಒಪ್ಪೊ 40 ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT