ನವದೆಹಲಿ: ಅಮೆರಿಕ ಮೂಲದ ಮಾಹಿತಿ ತಂತ್ರಜ್ಞಾನ ಕಂಪನಿ ಒರಾಕಲ್, ಜಾಗತಿಕವಾಗಿ ತನ್ನ 30 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ.

ಈ ಪೈಕಿ ಭಾರತದಲ್ಲಿ ಅಂದಾಜು 12 ಸಾವಿರ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಿದೆ. ಮತ್ತೊಂದು ಸುತ್ತಿನ ವಜಾ ಪ್ರಕ್ರಿಯೆ ತಿಂಗಳೊಳಗೆ ನಡೆಸಲು ಕಂಪನಿ ಯೋಜಿಸಿದೆ ಎಂದು ಕೆಲಸದಿಂದ ವಜಾಗೊಂಡ ಇಬ್ಬರು ಉದ್ಯೋಗಿಗಳು ತಿಳಿಸಿದ್ದಾರೆ.

ಭಾರತದಲ್ಲಿ ಕಂಪನಿಯು 30 ಸಾವಿರ ಉದ್ಯೋಗಿಗಳನ್ನು ಹೊಂದಿದೆ. ಇದರಲ್ಲಿ ವಜಾಗೊಳ್ಳುವವರು ಸೇರಿದ್ದಾರೆ. ಒರಾಕಲ್ ವಜಾ ಪ್ರಕ್ರಿಯೆ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದೆ.

ಈ ಕುರಿತು ಉದ್ಯೋಗಿಗಳಿಗೆ ಇ–ಮೇಲ್ ಮಾಡಿರುವ ಕಂಪನಿ, ಕೆಲವು ಸಾಂಸ್ಥಿಕ ಬದಲಾವಣೆಗಳಿಂದಾಗಿ ವಜಾ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.
.'ವಾಷಿಂಗ್ಟನ್ ಪೋಸ್ಟ್'ನಲ್ಲಿ ಭಾರಿ ಉದ್ಯೋಗ ಕಡಿತ: ಶಶಿ ತರೂರ್ ಪುತ್ರನಿಗೂ ಕೊಕ್!.14 ಸಾವಿರ ಉದ್ಯೋಗ ಕಡಿತ ಮಾಡಲಿರುವ ಅಮೆಜಾನ್: ವರದಿ.
ಜಾಗತಿಕವಾಗಿ 30 ಸಾವಿರ ಉದ್ಯೋಗಿಗಳ ವಜಾ...

ಒರಾಕಲ್ ಕಂಪನಿಯು ಜಾಗತಿಕವಾಗಿ ಸುಮಾರು 30 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದೆ. ಈ ಪೈಕಿ ಭಾರತದಲ್ಲಿ 12 ಸಾವಿರ ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಭಾರತದಲ್ಲಿ ಎಷ್ಟು ಉದ್ಯೋಗಿಗಳು ಇದ್ದಾರೆ?

ಒರಾಕಲ್ ಸಂಸ್ಥೆಯಲ್ಲಿ ಭಾರತದಲ್ಲಿ ಸುಮಾರು 30,000 ಸಿಬ್ಬಂದಿ ಇದ್ದಾರೆ. ಆದರೆ ಈ ಎಲ್ಲ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಲು ಒರಾಕಲ್ ಸಂಸ್ಥೆಯು ನಿರಾಕರಿಸಿದೆ.

ಸಂಸ್ಥೆಯು ಸಿಬ್ಬಂದಿಗೆ ಕಳುಹಿಸಿದ ಇ-ಮೇಲ್ನಲ್ಲಿ ಕೆಲವು ಸಾಂಸ್ಥಿಕ ಬದಲಾವಣೆಗಳ ಬಗ್ಗೆ ತಿಳಿಸಲಾಗಿದ್ದು, ಕಾರ್ಯಾಚರಣೆ ಸುಗಮಗೊಳಿಸುವ ನಿಟ್ಟಿನಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ದುರದೃಷ್ಟವಶಾತ್ ನೀವು ಈಗ ಹೊಂದಿರುವ ಸ್ಥಾನವು ಅಪ್ರಯೋಜಕ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.