ಶನಿವಾರ, ಜುಲೈ 2, 2022
20 °C

ಪಿಟ್ರಾನ್‌ ‘ಬಾಸ್‌ಬಡ್ಸ್‌ ವೇವ್‌’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಪಿಟ್ರಾನ್‌ ಕಂಪನಿಯು ವಯರ್‌ಲೆಸ್‌ ಇಯರ್‌ಬಡ್ಸ್‌ ವಿಭಾಗದಲ್ಲಿ ಮುಂದಿನ ಪೀಳಿಗೆಯ ‘ಬಾಸ್‌ಬಡ್ಸ್‌ ವೇವ್‌’ ಬಿಡುಗಡೆ ಮಾಡಿದೆ.

ಈ ಬಾಸ್‌ಬಡ್ಸ್‌ ವೇವ್‌ ಬೆಲೆ ₹ 1,299. ಆದರೆ, ಸೀಮಿತ ಅವಧಿಯ ಕೊಡುಗೆಯಾಗಿ ಅಮೆಜಾನ್‌.ಇನ್‌ನಲ್ಲಿ ₹ 999ರ ವಿಶೇಷ ಬೆಲೆಗೆ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.

ಹೊರಗಿನ ಶಬ್ದ ಕೇಳಿಸದಂತೆ ತಡೆಯುವ ನಾಯ್ಸ್‌ ಕ್ಯಾನ್ಸಲೇಷನ್‌ ವ್ಯವಸ್ಥೆ ಉತ್ತಮವಾಗಿದೆ. ಮ್ಯೂಸಿಕ್‌ ಮತ್ತು ಮೂವಿ ಮೋಡ್‌, ಮ್ಯೂಸಿಕ್‌/ಕಾಲ್‌ ಅನ್ನು ಟಚ್‌ ಆಯ್ಕೆಯ ಮೂಲಕ ನಿಯಂತ್ರಿಸಬಹುದು. ನೀರಿನಿಂದ ರಕ್ಷಣೇ ಒದಗಿಸಲು ಐಪಿಎಕ್ಸ್‌4 ರೇಟಿಂಗ್ಸ್‌ ಹೊಂದಿದೆ. ಚಾರ್ಜಿಂಗ್‌ ಕೇಸ್‌ 300 ಎಂಎಎಚ್‌ ಬ್ಯಾಟರಿ ಹೊಂದಿದ್ದರೆ, ಇಯರ್‌ಬಡ್ಸ್ ತಲಾ 40 ಎಂಎಎಚ್‌ ಬ್ಯಾಟರಿ ಹೊಂದಿವೆ. ಯುಎಸ್‌ಬಿ ಸಿ ಫಾಸ್ಟ್‌ ಚಾರ್ಜಿಂಗ್‌ ಪೋರ್ಟ್‌ ಹೊಂದಿದೆ. ಒಟ್ಟಾರೆಯಾಗಿ 40 ಗಂಟೆಗಳ ಪ್ಲೆಬ್ಯಾಕ್‌ ಸಾಮರ್ಥ್ಯ ಹೊಂದಿದೆ. 10 ನಿಮಿಷ ಚಾರ್ಜ್‌ ಮಾಡಿದರೆ 3 ಗಂಟೆಗಳವರೆಗೆ ಸಂಗೀತ ಆಲಿಸಬಹುದು ಎಂದು ಕಂಪನಿ ತಿಳಿಸಿದೆ.

ಫೋನ್‌ ನಮ್ಮ ಬಳಿ ಇಲ್ಲದೇ ಇದ್ದರೂ 10ಮೀಟರ್‌ ವ್ಯಾಪ್ತಿಯಲ್ಲಿ ಹಾಡು ಕೇಳಲು, ಮಾತನಾಡಲು ಇದನ್ನು ಬಳಸಬಹುದು. ಬ್ಲುಟೂತ್‌ 5.3 ವರ್ಷನ್‌ ಹೊಂದಿದೆ. ಚಾರ್ಜಿಂಗ್‌ ಕೇಸ್‌ 32 ಗ್ರಾಂ ತೂಕ ಇದ್ದು, ಇಯರ್‌ಬಡ್ಸ್‌ ತಲಾ 7.8 ಗ್ರಾಂ ತೂಕ ಇವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು