ಬೆಂಗಳೂರು: ಜನಪ್ರಿಯ ಸ್ಮಾರ್ಟ್ಫೋನ್ ಬ್ರ್ಯಾಂಡ್ ಆಗಿರುವ ರಿಯಲ್ಮಿ ದೇಶದ ಮಾರುಕಟ್ಟೆಗೆ ಅತಿ ನೂತನ ರಿಯಲ್ಮಿ 16 5ಜಿ ಸ್ಮಾರ್ಟ್ಫೋನ್ ಪರಿಚಯಿಸಿದೆ. ಯುವಜನರ ಫೋಟೋಗ್ರಫಿ ಆಸಕ್ತಿ, ಗೇಮಿಂಗ್ ಮತ್ತು ದೈನಂದಿನ ದೀರ್ಘಾವಧಿ ಬಳಕೆಯನ್ನು ಗಮನದಲ್ಲಿಟ್ಟುಕೊಂಡು ಈ ಸ್ಮಾರ್ಟ್ಫೋನ್ ಬಿಡುಗಡೆ ಮಾಡಲಾಗಿದೆ.

ಪ್ರಮುಖಾಂಶಗಳು:

7000mAh ಬ್ಯಾಟರಿ,

ಡ್ಯುಯಲ್ 50MPಕ್ಯಾಮೆರಾ

₹30 ಸಾವಿರ ಬೆಲೆ ಪರಿಧಿಯಲ್ಲಿ ಇದು ಉತ್ತಮ ಆಯ್ಕೆಯಾಗಿರಲಿದೆ ಎಂದು ಸಂಸ್ಥೆಯು ಹೇಳಿದೆ.

'ರಿಯರ್ ಸೆಲ್ಫಿ ಮಿರರ್' ವಿಶೇಷತೆ

ಅತ್ಯಾಕರ್ಷಕ ಕ್ಯಾಮೆರಾ ಆಯ್ಕೆಯನ್ನು ನೀಡಲಾಗಿದೆ. ಎ.ಐ ಬೆಂಬಲಿತ ಡ್ಯುಯಲ್ 50MP ಪೋರ್ಟ್ರೇಟ್ ಕ್ಯಾಮೆರಾ ವ್ಯವಸ್ಥೆ ನೀಡಲಾಗಿದೆ. ಹಿಂಭಾಗದಲ್ಲಿ 50MP Sony IMX852 ಸೆನ್ಸಾರ್ ಹಾಗೂ ಮುಂಭಾಗದಲ್ಲಿ 50MP ಸೆಲ್ಫಿ ಕ್ಯಾಮೆರಾ ಇದೆ.

ಈ ಸ್ಮಾರ್ಟ್ಫೋನ್ನ ಹಿಂಬದಿಯಲ್ಲಿ 'ಸೆಲ್ಫಿ ಮಿರರ್', ಆರಾ ರಿಂಗ್ ಫ್ಲ್ಯಾಶ್ ಅಳವಡಿಸಲಾಗಿದೆ. ಇದರಿಂದ ಹಿಂಬದಿ ಕ್ಯಾಮೆರಾದಿಂದಲೇ ಉತ್ತಮ ಗುಣಮಟ್ಟದ ಆಕರ್ಷಕ ಸೆಲ್ಫಿಗಳನ್ನು ತೆಗೆಯಬಹುದಾಗಿದೆ.

ತೆಳುವಾದ 'ಏರ್ ಡಿಸೈನ್' ಹಾಗೂ ಡಿಸ್ಪ್ಲೇ

ಸಾಮಾನ್ಯವಾಗಿ ದೊಡ್ಡ ಬ್ಯಾಟರಿ ಇರುವ ಫೋನ್ಗಳು ದಪ್ಪ ಮತ್ತು ತೂಕವಿರುತ್ತವೆ. ಆದರೆ ರಿಯಲ್ಮಿ 16 5Gಯಲ್ಲಿ 'ಏರ್ ಕಾಂಪ್ಯಾಕ್ಟ್ ಡಿಸೈನ್' ಬಳಸಲಾಗಿದ್ದು, ಫೋನ್ ಕೇವಲ 8.1mm ತೆಳುವಾಗಿದೆ ಮತ್ತು ಕೇವಲ 183 ಗ್ರಾಂ ತೂಕವಿದೆ.

ಫೋನ್ನ ಹಿಂಭಾಗದಲ್ಲಿ 'ಗ್ಲೀಮಿಂಗ್ ವಿಂಗ್ಸ್' ಟೆಕ್ಸ್ಚರ್ ಇದ್ದು, ಬೆಳಕು ಬಿದ್ದಾಗ ನೀಲಿ-ಚಿನ್ನದ ಬಣ್ಣದ ಗ್ರೇಡಿಯಂಟ್ ಲುಕ್ ನೀಡುತ್ತದೆ. ಜೊತೆಗೆ ಬೆರಳಚ್ಚುಗಳು ಮೂಡದಂತೆ ಕೋಟಿಂಗ್ ಮಾಡಲಾಗಿದೆ. 6.57 ಇಂಚಿನ ಡಿಸ್ಪ್ಲೇಯೊಂದಿಗೆ ಉತ್ತಮ ವೀಕ್ಷಣಾ ಅನುಭವವನ್ನು ಈ ಫೋನ್ ಒದಗಿಸುತ್ತದೆ.

7000mAh ಬ್ಯಾಟರಿ, ಸೂಪರ್ ಫಾಸ್ಟ್ ಚಾರ್ಜಿಂಗ್

ಈ ಸ್ಮಾರ್ಟ್ಫೋನ್ 7000mAh ಸಾಮರ್ಥ್ಯದ ದೈತ್ಯ ಟೈಟಾನ್ ಬ್ಯಾಟರಿಯನ್ನು ಹೊಂದಿದೆ. ಒಮ್ಮೆ ಚಾರ್ಜ್ ಮಾಡಿದರೆ ದೀರ್ಘಕಾಲದವರೆಗೆ ಬಳಸಬಹುದು. ಇದು 60W ಫಾಸ್ಟ್ ಚಾರ್ಜಿಂಗ್ಗೆ ಸಪೋರ್ಟ್ ಮಾಡಲಿದ್ದು, ಕೇವಲ 30 ನಿಮಿಷಗಳಲ್ಲಿ ಶೇ. 50ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಪೂರ್ಣ ಚಾರ್ಜ್ ಆಗಲು 74 ನಿಮಿಷಗಳು ಸಾಕು. ಗೇಮಿಂಗ್ ಆಡುವಾಗ ಫೋನ್ ಬಿಸಿಯಾಗುವುದನ್ನು ತಪ್ಪಿಸಲು 'ಬೈಪಾಸ್ ಚಾರ್ಜಿಂಗ್' ತಂತ್ರಜ್ಞಾನವನ್ನು ಕೂಡ ಇದರಲ್ಲಿ ಅಳವಡಿಸಲಾಗಿದೆ.

ದೀರ್ಘ ಬಾಳಿಕೆ ಮತ್ತು ಸಾಫ್ಟ್ವೇರ್

ದೀಘ ಬಾಳಿಕೆಗೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಧೂಳು ಮತ್ತು ನೀರಿನಿಂದ ರಕ್ಷಣೆ ಪಡೆಯಲು ಉನ್ನತ ಮಟ್ಟದ IP69, IP68, IP69K ಪ್ರಮಾಣೀಕರಣವನ್ನು ಇದು ಪಡೆದಿದೆ. ಸಾಫ್ಟ್ವೇರ್ ವಿಚಾರಕ್ಕೆ ಬಂದರೆ, ಇದು ಹೊಸ ಫ್ಲಕ್ಸ್ ಎಂಜಿನ್ ಆಧಾರಿತ Realme UI 7.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಫೋನ್ ಲ್ಯಾಗ್ ಆಗದಂತೆ ನೋಡಿಕೊಳ್ಳುತ್ತದೆ.

ಮಾರಾಟ ಆರಂಭ

ರಿಯಲ್ಮಿ 16 5G ಸ್ಮಾರ್ಟ್ಫೋನ್ ಏರ್ ವೈಟ್ ಮತ್ತು ಏರ್ ಬ್ಲ್ಯಾಕ್ ಬಣ್ಣಗಳಲ್ಲಿ ಲಭ್ಯವಿದೆ. ಫ್ಲಿಪ್ಕಾರ್ಟ್, ರಿಯಲ್ಮಿ ಅಧಿಕೃತ ವೆಬ್ಸೈಟ್ ಹಾಗೂ ಆಫ್ಲೈನ್ ಸ್ಟೋರ್ಗಳಲ್ಲಿ ಸೇಲ್ ಆರಂಭವಾಗಿದೆ.

ಮಾದರಿ ಮತ್ತು ಬೆಲೆ (ಆಫರ್ಗಳೊಂದಿಗೆ)

* 8GB RAM + 128GB ಸ್ಟೋರೇಜ್: ಮೂಲ ಬೆಲೆ ₹31,999 (ಬ್ಯಾಂಕ್ ಅಥವಾ ಎಕ್ಸ್ಚೇಂಜ್ ಆಫರ್ ಬಳಸಿ ₹28,999 ಕ್ಕೆ ಖರೀದಿಸಬಹುದು)

* 8GB RAM + 256GB ಸ್ಟೋರೇಜ್: ಮೂಲ ಬೆಲೆ ₹33,999 (ಆಫರ್ ಬೆಲೆ ₹30,999)

* 12GB RAM + 256GB ಸ್ಟೋರೇಜ್: ಮೂಲ ಬೆಲೆ ₹36,999 (ಆಫರ್ ಬೆಲೆ ₹33,999)

ಗ್ರಾಹಕರಿಗೆ ನೋ-ಕಾಸ್ಟ್ ಇಎಂಐ, ಬ್ಯಾಂಕ್ ಡಿಸ್ಕೌಂಟ್ ಮತ್ತು ಎಕ್ಸ್ಚೇಂಜ್ ಬೋನಸ್ ಸೌಲಭ್ಯಗಳೂ ಲಭ್ಯವಿವೆ.
.ಅಭಿಮಾನಿಗೆ ದುಬಾರಿ ಬೆಲೆಯ ಸ್ಮಾರ್ಟ್ಫೋನ್ ಉಡುಗೊರೆಯಾಗಿ ನೀಡಿದ ಸಂಜು ಸ್ಯಾಮ್ಸನ್.ಬರುತ್ತಿದೆ ಹೊಸ ಒನ್ಪ್ಲಸ್ ನಾರ್ಡ್ 6 ಸ್ಮಾರ್ಟ್ಫೋನ್; ವಿಶೇಷತೆ ಏನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.