ಸೋಮವಾರ, ನವೆಂಬರ್ 18, 2019
26 °C

64 ಎಂಪಿ ಕ್ವಾಡ್‌ ಕ್ಯಾಮೆರಾ ಇರುವ ರಿಯಲ್‌ಮಿ ಎಕ್ಸ್‌ಟಿ ಶುಕ್ರವಾರ ಬಿಡುಗಡೆ

Published:
Updated:
Prajavani

ಬೆಂಗಳೂರು: ಪ್ರಮುಖ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ರಿಯಲ್‌ಮಿ, ಭಾರತದ ಮಾರುಕಟ್ಟೆಗೆ ಶುಕ್ರವಾರ ಮತ್ತೊಂದು ಹೊಸ ಫೋನ್‌ ಬಿಡುಗಡೆ ಮಾಡಲಿದೆ.

64 ಎಂಪಿ ಕ್ವಾಡ್‌ ಕ್ಯಾಮೆರಾ ಇರುವ ರಿಯಲ್‌ಮಿ ಎಕ್ಸ್‌ಟಿ ಬಿಡುಗಡೆ ಮಾಡುವುದಾಗಿ ತನ್ನ ಜಾಲತಾಣದಲ್ಲಿ ಹೇಳಿಕೊಂಡಿದೆ.

ಅತ್ಯುತ್ತಮ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಈ ಸ್ಮಾರ್ಟ್‌ಫೋನ್‌ ಹೇಳಿ ಮಾಡಿಸಿದ್ದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮೊಬೈಲ್‌ ಉದ್ದಿಮೆಯಲ್ಲೇ ಗರಿಷ್ಠ ರೆಸಲ್ಯೂಷನ್‌ ಕ್ಯಾಮೆರಾ ಸೆನ್ಸರ್‌ ಹೊಂದಿದ್ದು, 64 ಎಂಪಿ ಎಕ್ಸ್‌ಟ್ರೀಮ್‌ ಕ್ಲಾರಿಟಿ, 64ಎಂಪಿ ಲಾರ್ಜ್‌ ಸೆನ್ಸರ್‌ ಸೈಜ್‌, 48ಎಂಪಿಗಿಂತಲೂ ಶೇ 34ರಷ್ಟು ಅಧಿಕ ಪಿಕ್ಸಲ್‌ ಹೊಂದಿದೆ. ಪೋರ್ಟ್‌ರೇಟ್‌ ಮತ್ತು ಅತ್ಯಂತ ಸೂಕ್ಷ್ಮವಾದ ಅಂಶಗಳನ್ನೂ ಬಹಳ ಸ್ಪಷ್ಟವಾಗಿ ಸೆರೆಹಿಡಿಯಬಹುದು ಎನ್ನುವುದು ಕಂಪನಿಯ ಹೇಳಿಕೆ.

ಎಫ್‌ಎಚ್‌ಡಿ+ಸೂಪರ್‌ ಅಮೊಎಲ್‌ಇಡಿ ಡಿಸ್‌ಪ್ಲೇ, ಇತ್ತೀಚಿನ ಇನ್‌ಡಿಸ್‌ಪ್ಲೇ ಫಿಂಗರ್‌ಪ್ರಿಂಟ್‌, ಫೋನ್‌ನ ಎರಡೂ ಬದಿಯಲ್ಲಿ ಗೊರಿಲ್ಲಾ ಗ್ಲಾಸ್‌ ಹೊಂದಿರಲಿದೆ.

ಪ್ರತಿಕ್ರಿಯಿಸಿ (+)