ಗುರುವಾರ , ಏಪ್ರಿಲ್ 2, 2020
19 °C

'ರಿಯಲ್‌ಮಿ 6' ಆವೃತ್ತಿಯ ಸ್ಮಾರ್ಟ್‌ಫೋನ್‌ ಬಿಡುಗಡೆ: ಆರಂಭಿಕ ಬೆಲೆ ₹12,999 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ರಿಯಲ್‌ಮಿ 6 ಪ್ರೊ ಸ್ಮಾರ್ಟ್‌ಫೋನ್‌

ಬೆಂಗಳೂರು: ಚೀನಾದ ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪನಿ ರಿಯಲ್‌ಮಿ ಗುರುವಾರ 'ರಿಯಲ್‌ಮಿ 6' ಆವೃತ್ತಿಯ ಸ್ಮಾರ್ಟ್‌ಫೋನ್‌ಗಳು ಹಾಗೂ ತನ್ನ ಮೊದಲ ಫಿಟ್‌ನೆಸ್‌ ಬ್ಯಾಂಡ್‌ ಬಿಡುಗಡೆ ಮಾಡಿದೆ. 

ರಿಯಲ್‌ಮಿ 6 ಮತ್ತು ರಿಯಲ್‌ಮಿ 6 ಪ್ರೊ ಫೋನ್‌ಗಳಲ್ಲಿ ವಿನ್ಯಾಸ ಬದಲಾಗಿದೆ. ಪಂಚ್‌ ಹೋಲ್‌ ಕ್ಯಾಮೆರಾಗಳು, ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್‌ ಸೆನ್ಸರ್‌, ಸ್ಪ್ಯಾಷ್‌ ರೆಸಿಸ್ಟಂಟ್‌ ಒಳಗೊಂಡಿದೆ. ರಿಯಲ್‌ಮಿ 6 ಆರಂಭಿಕ ಬೆಲೆ ₹12,999 ನಿಗದಿಯಾಗಿದೆ. ಕಾಮೆಟ್‌ ವೈಟ್‌ ಮತ್ತು ಕಾಮೆಟ್‌ ಬ್ಲೂ ಎರಡು ಬಣ್ಣಗಳಲ್ಲಿ ಲಭ್ಯವಿದ್ದು, ರ್‍ಯಾಮ್‌ ಸಾಮರ್ಥ್ಯ 4ಜಿಬಿ, 6ಜಿಬಿ ಹಾಗೂ 8ಜಿಬಿ ಶ್ರೇಣಿಗಳಲ್ಲಿ ಲಭ್ಯವಿದೆ. ಮಾರ್ಚ್‌ 11ರಿಂದ ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ಮಿ ಅಧಿಕೃತ ವೆಬ್‌ಸೈಟ್‌ನಲ್ಲಿ ಖರೀದಿಗೆ ಸಿಗಲಿದೆ. 

ರಿಯಲ್‌ಮಿ 6 ಪ್ರೊ ಬೆಲೆ ₹16,999–18,999 ನಿಗದಿಯಾಗಿದೆ. 6ಬಿಜಿ ಮತ್ತು 8ಜಿಬಿ ರ್‍ಯಾಮ್‌ಗಳಲ್ಲಿ ಫೋನ್‌ ಲಭ್ಯವಿರಲಿದೆ. ಮಾರ್ಚ್‌ 13ರಿಂದ ಫೋನ್‌ ಖರೀದಿಗೆ ಸಿಗಲಿದೆ. ಇಸ್ರೊದ ನಾವಿಕ್‌ ಮಾರ್ಗಸೂಚಿ ವ್ಯವಸ್ಥೆಗೆ ಈ ಫೋನ್‌ ಸಹಕರಿಸುತ್ತದೆ. ಆಕ್ಟಾಕೋರ್‌ ಸ್ನ್ಯಾಪ್‌ಡ್ರ್ಯಾಗನ್‌ 720ಜಿ ಪ್ರೊಸೆಸರ್‌, ಹಿಂಬದಿಯಲ್ಲಿ 64ಎಂಪಿ ಲೆನ್ಸ್‌ ಒಳಗೊಂಡ ನಾಲ್ಕು ಕ್ಯಾಮೆರಾ ಹಾಗೂ ಸೆಲ್ಫಿಗಾಗಿ ಎರಡು ಕ್ಯಾಮೆರಾ ನೀಡಲಾಗಿದೆ. ರಿಯಲ್‌ಮಿ 6 ಮತ್ತು 6 ಪ್ರೊ ಎರಡೂ ಕ್ಯಾಮೆರಾಗಳು 4,300ಎಂಎಎಚ್‌ ಬ್ಯಾಟರಿ ಮತ್ತು 30ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ಹೊಂದಿದೆ. 

ರಿಯಲ್‌ಮಿ ಬ್ಯಾಂಡ್‌: ರಿಯಲ್‌ಮಿ ತನ್ನ ಮೊದಲ ಫಿಟ್ನೆಸ್‌ ಬ್ಯಾಂಡ್‌ ಬಿಡುಗಡೆ ಮಾಡಿದೆ. ಕಪ್ಪು, ಹಳದಿ ಮತ್ತು ಹಸಿರು ಬಣ್ಣಗಳಲ್ಲಿ ಲಭ್ಯವಿರುವ ಬ್ಯಾಂಡ್‌ಗೆ ₹1,499 ನಿಗದಿಯಾಗಿದೆ. 0.96 ಇಂಚು ಕಲರ್‌ ಡಿಸ್‌ಪ್ಲೇ, ನ್ಯಾವಿಗೇಷನ್ಗಾಗಿ ಬಟನ್‌, ಸ್ಲೀಪ್‌ ಮಾನಿಟರ್‌, ಅಲರ್ಟ್‌, ಕಾಲ್‌ ಮತ್ತು ಆ್ಯಪ್‌ಗಳ ನೋಟಿಫಿಕೇಷನ್‌ಗಳು, ಸ್ಫೋರ್ಟ್ ಮೋಡ್‌ಗಳು (ಯೋಗ, ರನ್ನಿಂಗ್‌, ವಾಕಿಂಗ್‌, ಕ್ರಿಕೆಟ್‌, ಇತರೆ) ಲಭ್ಯ. 

ರಿಯಲ್‌ಮಿ 6

ಕ್ಯಾಮೆರಾ: 64ಎಂಪಿ+8ಎಂಪಿ ಅಲ್ಟ್ರಾ ವೈಡ್‌ ಆ್ಯಂಗಲ್‌+2ಎಂಪಿ ಡೆಪ್ತ್‌ ಸೆನ್ಸರ್‌+2ಎಂಪಿ ಮ್ಯಾಕ್ರೊ ಲೆನ್ಸ್‌; ಸೆಲ್ಫಿಗಾಗಿ 16ಎಂಪಿ

ಸಾಮರ್ಥ್ಯ: 4ಜಿಬಿ ರ್‍ಯಾಮ್‌+64ಜಿಬಿ ಸಂಗ್ರಹ/ 6ಜಿಬಿ ರ್‍ಯಾಮ್‌+128ಜಿಬಿ ಸಂಗ್ರಹ/ 8ಜಿಬಿ ರ್‍ಯಾಮ್‌+128ಜಿಬಿ ಸಂಗ್ರಹ

ಬೆಲೆ: ₹12,999/ ₹14,999/ ₹15,999

ಬಣ್ಣ: ಕಾಮೆಟ್‌ ವೈಟ್‌, ಕಾಮೆಟ್‌ ಬ್ಲೂ

ಡಿಸ್‌ಪ್ಲೇ: 6.5 ಇಂಚು ಎಫ್‌ಎಚ್‌ಡಿ 

ಪ್ರೊಸೆಸರ್‌: ಮೀಡಿಯಾಟೆಕ್‌ ಹೀಲಿಯೊ ಜಿ90ಟಿ

ಬ್ಯಾಟರಿ: 4,300ಎಂಎಎಚ್‌ + 30ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ 

ರಿಯಲ್‌ಮಿ 6 ಪ್ರೊ

ಕ್ಯಾಮೆರಾ: 64ಎಂಪಿ+8ಎಂಪಿ ಅಲ್ಟ್ರಾ ವೈಡ್‌ ಆ್ಯಂಗಲ್‌+12ಎಂಪಿ ಟೆಲಿಫೋಟೊ ಲೆನ್ಸ್‌+ ಮ್ಯಾಕ್ರೊ ಲೆನ್ಸ್‌; ಸೆಲ್ಫಿಗಾಗಿ 16ಎಂಪಿ ಸೋನಿ IMX471 ಲೆನ್ಸ್‌ ಮತ್ತು 8ಎಂಪಿ ಅಲ್ಟ್ರಾ ವೈಡ್‌ ಆ್ಯಂಗಲ್‌ ಲೆನ್ಸ್‌

ಸಾಮರ್ಥ್ಯ: 6ಜಿಬಿ ರ್‍ಯಾಮ್‌+64ಜಿಬಿ ಸಂಗ್ರಹ/ 6ಜಿಬಿ ರ್‍ಯಾಮ್‌+128ಜಿಬಿ ಸಂಗ್ರಹ/ 8ಜಿಬಿ ರ್‍ಯಾಮ್‌+128ಜಿಬಿ ಸಂಗ್ರಹ

ಬೆಲೆ: ₹16,999/ ₹17,999/ ₹18,999

ಬಣ್ಣ: ಲೈಟ್ನಿಂಗ್‌ ಬ್ಲೂ, ಲೈಟ್ನಿಂಗ್‌ ಆರೆಂಜ್‌ 

ಡಿಸ್‌ಪ್ಲೇ: 6.6 ಇಂಚು ಎಫ್‌ಎಚ್‌ಡಿ+ಗೊರಿಲ್ಲ ಗ್ಲಾಸ್‌ 5 

ಪ್ರೊಸೆಸರ್‌: ಆಕ್ಟಾಕೋರ್‌ ಸ್ನ್ಯಾಪ್‌ಡ್ರ್ಯಾಗನ್‌ 720ಜಿ+ ಆಡ್ರೆನೊ 618 ಜಿಪಿಯು

ಬ್ಯಾಟರಿ: 4,300ಎಂಎಎಚ್‌ + 30ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು