ಐಫೋನ್‌, ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್ ಮೇಲೆ ಭಾರೀ ರಿಯಾಯಿತಿ: ಏಪ್ರಿಲ್‌ ಕೊಡುಗೆ

ಮಂಗಳವಾರ, ಏಪ್ರಿಲ್ 23, 2019
31 °C
₹53,900ಕ್ಕೆ ಐಫೋನ್‌

ಐಫೋನ್‌, ಸ್ಯಾಮ್‌ಸಂಗ್‌ ಸ್ಮಾರ್ಟ್‌ಫೋನ್ ಮೇಲೆ ಭಾರೀ ರಿಯಾಯಿತಿ: ಏಪ್ರಿಲ್‌ ಕೊಡುಗೆ

Published:
Updated:

ಬೆಂಗಳೂರು: ಬಿಸಿಲಿನ ಝಳಪಿನಲ್ಲಿ ಐಫೋನ್‌ ಸ್ಮಾರ್ಟ್‌ಫೋನ್‌ ಹಿಡಿದು ಕೂಲ್‌ ಆಗಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮನಸ್ಸಾಗಿದ್ದರೆ ಇದೇ ಸುಸಮಯ. ಆ್ಯಪಲ್‌ ಸಂಸ್ಥೆ ಐಫೋನ್‌ ಬೆಲೆಯಲ್ಲಿ ಭಾರೀ ರಿಯಾಯಿತಿ ಪ್ರಕಟಿಸಿದೆ. ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಇತರೆ ಸ್ಮಾರ್ಟ್‌ಫೋನ್‌ ಸಂಸ್ಥೆಗಳು ಸಹ ಏಪ್ರಿಲ್‌ ವಿಶೇಷ ಕೊಡುಗೆಯನ್ನು ಪ್ರಕಟಿಸಿವೆ. 

ಐಫೋನ್‌, ಸ್ಯಾಮ್‌ಸಂಗ್, ಓಪ್ಪೊ, ಒನ್‌ಪ್ಲಸ್‌ ಹಾಗೂ ಹಾನರ್‌ ಸೇರಿದಂತೆ ಪ್ರಮುಖ ಸ್ಮಾರ್ಟ್‌ಫೋನ್‌ ಸಂಸ್ಥೆಗಳು ಶೇ 20–25ರಷ್ಟು ರಿಯಾಯಿತಿ ಮತ್ತು ಕ್ಯಾಷ್‌ಬ್ಯಾಕ್‌ ಕೊಡುಗೆಗಳನ್ನು ಪ್ರಕಟಿಸಿವೆ. ಏಪ್ರಿಲ್‌ 5(ಶುಕ್ರವಾರ)ರಿಂದ ಐಫೋನ್‌ ಎಕ್ಸ್‌ಆರ್‌ ರಿಯಾಯಿತಿ ಮಾರಾಟ ಪ್ರಾರಂಭವಾಗಿದೆ. ಆ್ಯಪಲ್‌ ಐಫೋನ್‌ ಎಕ್ಸ್‌ಆರ್‌(64 ಜಿಬಿ) ಈಗ ₹59,900ಕ್ಕೆ ಲಭ್ಯವಿದೆ. 128 ಜಿಬಿ ಮತ್ತು 256 ಜಿಬಿ ಸಂಗ್ರಹ ಸಾಮ‌ರ್ಥ್ಯದ ಐಫೋನ್‌ ಎಕ್ಸ್ಆರ್‌ ಕ್ರಮವಾಗಿ ₹64,900 ಮತ್ತು ₹74,900 ನಿಗದಿಯಾಗಿದೆ. 256 ಜಿಬಿ ಸಂಗ್ರಹ ಸಾಮರ್ಥ್ಯವಿರುವ ಐಫೋನ್‌ ₹91,900 ಹಾಗೂ 128 ಜಿಬಿ ಸಂಗ್ರಹ ಹೊಂದಿರುವುದಕ್ಕೆ ₹81,900 ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. 

ಎಚ್‌ಡಿಎಫ್‌ಸಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ದಾರರಿಗೆ ಹೆಚ್ಚುವರಿಯಾಗಿ ಶೇ 10ರಷ್ಟು ರಿಯಾಯಿತಿ ದೊರೆಯಲಿದೆ. ಇದು ಸೀಮಿತ ಅವಧಿವರೆಗಿನ ಕೊಡುಗೆಯಾಗಿದ್ದು, ₹53,900ಕ್ಕೆ ಐಫೋನ್‌ ಎಕ್ಸ್‌ಆರ್‌ ಪಡೆಯಬಹುದಾಗಿದೆ. ಯಾವುದೇ ರಿಯಾಯಿತಿ ಇಲ್ಲದೆಯೇ 64 ಜಿಬಿ ಸಾಮರ್ಥ್ಯದ ಐಫೋನ್‌ ಕೊಳ್ಳಲು ₹79,900 ನೀಡಬೇಕಾಗುತ್ತದೆ. ಈ ಸ್ಮಾರ್ಟ್‌ಫೋನ್‌ 6.1 ಇಂಚು ಲಿಕ್ವಿಡ್‌ ರೆಟಿನಾ ಎಚ್‌ಡಿ ಡಿಸ್‌ಪ್ಲೇ, 12 ಮೆಗಾಪಿಕ್ಸೆಲ್‌ ಹಿಂಬದಿಯ ಕ್ಯಾಮೆರಾ ಹಾಗೂ 7 ಎಂಪಿ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಆ್ಯನಿಮೋಜಿ, ಮೊಮೊಜಿ, ಡೆಪ್ತ್‌ ಕಂಟ್ರೋಲ್‌ನಂತಹ ವಿಶೇಷಗಳನ್ನು ಕ್ಯಾಮೆರಾ ಒಳಗೊಂಡಿದೆ. 

ಜಾಗತಿಕ ಮಾರುಕಟ್ಟೆಯಲ್ಲಿ ಐಫೋನ್‌ಗಳಿಗೆ ಪೈಪೋಟಿ ಒಡ್ಡುತ್ತಿರುವ ಸ್ಯಾಮ್‌ಸಂಗ್‌ ಸಹ ವಿಶೇಷ ರಿಯಾಯಿತಿ ಘೋಷಿಸಿದೆ. 128 ಜಿಬಿ ಸಂಗ್ರಹ ಸಾಮರ್ಥ್ಯದ ಗ್ಯಾಲಕ್ಸಿ ನೋಟ್‌ 9 ಸ್ಮಾರ್ಟ್‌ಫೋನ್‌ ಮೇಲೆ ₹5,700 ರಿಯಾಯಿತಿ ಪ್ರಕಟಿಸಿದೆ, ಎಚ್‌ಡಿಎಫ್‌ಸಿ ಕ್ರೆಡಿಟ್‌ ಕಾರ್ಡ್ ಬಳಸಿ ಖರೀದಿಸಿದರೆ ₹6000 ಹೆಚ್ಚುವರಿ ರಿಯಾಯಿತಿ ಸಿಗಲಿದೆ. ಈ ಮೂಲಕ ₹61,900ಕ್ಕೆ ಗ್ಯಾಲಕ್ಸಿ ನೋಟ್‌ 9 ದೊರೆಯಲಿದೆ. ಇನ್ನೂ ₹93 ಸಾವಿರ ಬೆಲೆಯ 512 ಜಿಬಿ ಸಂಗ್ರಹ ಸಾಮರ್ಧ್ಯದ ’ಗ್ಯಾಲಕ್ಸಿ ನೋಟ್‌ 9’ ಮೇಲೆ ₹21 ಸಾವಿರ ರಿಯಾಯಿತಿ ಸಿಗಲಿದೆ. ಸ್ಮಾರ್ಟ್‌ಫೋನ್‌ ಸಂಸ್ಥೆಗಳು ಹಾಗೂ ಆನ್‌ಲೈನ್‌ ಮಾರಾಟ ವೇದಿಕೆಗಳು ಆಕ್ಸಿಸ್‌, ಸಿಟಿ ಸೇರಿ ಇತರೆ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಹಲವು ಬಳಕೆದಾರರಿಗೆ ಸ್ಮಾರ್ಟ್‌ಫೋನ್‌ ಖರೀದಿ ಮೇಲೆ ಕೊಡುಗೆಗಳು ಲಭ್ಯವಿದೆ.

ಸ್ಮಾರ್ಟ್‌ಫೋನ್‌– ಮೂಲ ಬೆಲೆ– ರಿಯಾಯಿತಿ ಬೆಲೆ  

ಓಪ್ಪೊ ಆರ್‌17 ಪ್ರೋ– ₹49,990– ₹35,991

ಒನ್‌ಪ್ಲಸ್‌ 6ಟಿ–₹37,999 ರಿಂದ 45,999– ₹29,999 ರಿಂದ ₹35,999

ಪೊಕೊ ಎಫ್‌1– ₹29,999– ₹22,400

ಹಾನರ್‌– ಶೇ 50ರ ವರೆಗೂ ರಿಯಾಯಿತಿ(ಏ.8ರಿಂದ)

 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 3

  Frustrated
 • 1

  Angry

Comments:

0 comments

Write the first review for this !