ಗುರುವಾರ , ಜೂನ್ 17, 2021
29 °C

ಸ್ಯಾಮ್‌ಸಂಗ್‌ನಿಂದ ಬಜೆಟ್‌ ಸ್ಮಾರ್ಟ್‌ಫೋನ್‌: ಗ್ಯಾಲಕ್ಸಿ ಎಂ01, ಬೆಲೆ ₹8,999

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ11 ಸ್ಮಾರ್ಟ್‌ಫೋನ್‌

ಬೆಂಗಳೂರು: ದಕ್ಷಿಣ ಕೊರಿಯಾ ಮೂಲದ ಕಂಪನಿ ಸ್ಯಾಮ್‌ಸಂಗ್‌ ಭಾರತದಲ್ಲಿ ಅಗ್ಗದ ದರದ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಹೋಲ್‌–ಪಂಚ್‌ ಡಿಸ್‌ಪ್ಲೇ, ಮೂರು ಕ್ಯಾಮೆರಾದಂತಹ ಆಯ್ಕೆಗಳನ್ನು ಹೊಸ ಫೋನ್‌ ಒಳಗೊಂಡಿದೆ. ಗ್ಯಾಲಕ್ಸಿ ಎಂ11 ಮತ್ತು ಗ್ಯಾಲಕ್ಸಿ ಎಂ01 ಎರಡು ಮಾದರಿಯ ಫೋನ್‌ಗಳನ್ನು ದೇಶದ ಮಾರುಕಟ್ಟೆಗೆ ಪರಿಚಯಿಸಲಾಗಿದೆ.

ಇದೇ ವರ್ಷ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ಅನಾವರಣಗೊಂಡ ಗ್ಯಾಲಕ್ಸಿ ಎಂ11, ಇದೀಗ ಭಾರತದಲ್ಲಿ ಲಭ್ಯವಿದೆ. ಗ್ಯಾಲಕ್ಸಿ ಎಂ01 ಇದೇ ಮೊದಲ ಬಾರಿಗೆ ಅನಾವರಣಗೊಂಡಿದೆ. ಎರಡೂ ಫೋನ್‌ಗಳು ಆ್ಯಂಡ್ರಾಯ್ಡ್‌ 10 ಜೊತೆಗೆ ಒನ್‌ ಯುಐ ಹಾಗೂ ಡಾಲ್ಬಿ ಆಟಮ್ಸ್‌ ಸೌಲಭ್ಯ ಹೊಂದಿವೆ.

ಸ್ಯಾಮ್‌ಸಂಗ್‌ ಇಂಡಿಯಾ ಇಸ್ಟೋರ್‌, ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ಹೊಸ ಫೋನ್‌ಗಳು ಖರೀದಿಗೆ ಸಿಗಲಿವೆ.

* ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ11

ಡಿಸ್‌ಪ್ಲೇ: 6.4 ಇಂಚು ಎಚ್‌ಡಿ+ (720x1560) ಇನ್ಫಿನಿಟಿ–ಒ ಪ್ಯಾನಲ್‌

ಸಾಮರ್ಥ್ಯ: 3ಜಿಬಿ ರ್‍ಯಾಮ್+ 32ಜಿಬಿ ಸಂಗ್ರಹ /  4ಜಿಬಿ ರ್‍ಯಾಮ್+ 64 ಜಿಬಿ ಸಂಗ್ರಹ ಸಾಮರ್ಥ್ಯ; (ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ 512ಜಿಬಿ ಸಂಗ್ರಹ ವಿಸ್ತರಿಸಿಕೊಳ್ಳಬಹುದು)

ಪ್ರೊಸೆಸರ್‌: ಆಕ್ಟಾ–ಕೋರ್‌ ಕ್ವಾಲ್‌ಕಮ್‌ ಸ್ನ್ಯಾಪ್‌ಡ್ರ್ಯಾಗನ್‌ 450

ಕ್ಯಾಮೆರಾ: ಹಿಂಬದಿಯಲ್ಲಿ 13ಎಂಪಿ+5ಎಂಪಿ (ಅಲ್ಟ್ರಾ ವೈಡ್‌)+ 2ಎಂಪಿ (ಡೆಪ್ತ್‌ ಸೆನ್ಸರ್‌); ಸೆಲ್ಫಿಗಾಗಿ 8ಎಂಪಿ

ಬ್ಯಾಟರಿ: 5000 ಎಂಎಎಚ್‌; 15ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌

ಬೆಲೆ: ₹10,999 / ₹12,999

ಬಣ್ಣ: ಕಪ್ಪು, ಮೆಟಾಲಿಕ್‌ ಬ್ಲೂ ಹಾಗೂ ನೇರಳ

ಇತರೆ: ಹಿಂಬದಿಯಲ್ಲಿ ಫಿಂಗರ್‌ಪ್ರಿಂಟ್‌ ಸೆನ್ಸರ್‌, ಯುಎಸ್‌ಬಿ ಟೈಪ್‌–ಸಿ, 197 ಗ್ರಾಂ ತೂಕ.

* ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಎಂ01

ಡಿಸ್‌ಪ್ಲೇ: 5.71 ಇಂಚು ಎಚ್‌ಡಿ+ (720x1560) ಟಿಎಫ್‌ಟಿ ಇನ್ಫಿನಿಟಿ–ವಿ ಪ್ಯಾನಲ್‌

ಸಾಮರ್ಥ್ಯ: 3ಜಿಬಿ ರ್‍ಯಾಮ್+ 32ಜಿಬಿ ಸಂಗ್ರಹ; (ಮೈಕ್ರೊಎಸ್‌ಡಿ ಕಾರ್ಡ್‌ ಮೂಲಕ 512ಜಿಬಿ ಸಂಗ್ರಹ ವಿಸ್ತರಿಸಿಕೊಳ್ಳಬಹುದು)

ಪ್ರೊಸೆಸರ್‌: ಆಕ್ಟಾ–ಕೋರ್‌ ಕ್ವಾಲ್‌ಕಮ್‌ ಸ್ನ್ಯಾಪ್‌ಡ್ರ್ಯಾಗನ್‌ 439

ಕ್ಯಾಮೆರಾ: ಹಿಂಬದಿಯಲ್ಲಿ 13ಎಂಪಿ+2ಎಂಪಿ; ಸೆಲ್ಫಿಗಾಗಿ 5ಎಂಪಿ

ಬ್ಯಾಟರಿ: 4,000 ಎಂಎಎಚ್‌

ಬೆಲೆ: ₹8,999

ಬಣ್ಣ: ಕೆಂಪು, ಕಪ್ಪು ಹಾಗೂ ನೀಲಿ

ಇತರೆ: ಮೈಕ್ರೊ–ಯುಎಸ್‌ಬಿ, ಫಾಸ್ಟ್‌ ಜಾರ್ಜಿಂಗ್‌ ಸೌಲಭ್ಯ ಇಲ್ಲ, ಫಿಂಗರ್‌ಪ್ರಿಂಟ್‌ ಸೆನ್ಸರ್ ಇಲ್ಲ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು