ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ ಆ್ಯಕ್ಟಿವ್2–4ಜಿ ಸ್ಮಾರ್ಟ್ ವಾಚ್: ಇ–ಸಿಮ್‌ನಿಂದ ಸಂಪರ್ಕ

ಅಕ್ಷರ ಗಾತ್ರ

ಬೆಂಗಳೂರು: ಸ್ಯಾಮ್‌ಸಂಗ್ ಇಂಡಿಯಾ ತನ್ನ ಗ್ಯಾಲಕ್ಸಿ ವಾಚ್ ಆ್ಯಕ್ಟಿವ್ 2-4ಜಿ ಅಲ್ಯೂಮಿನಿಯಂ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ಭಾರತದಲ್ಲಿಯೇ ತಯಾರಿಸಲಾದ ಸ್ಯಾಮ್‌ಸಂಗ್‌ನ ಮೊದಲ ಸ್ಮಾರ್ಟ್ ವಾಚ್ ಆಗಿದೆ. ದೈಹಿಕ ದೃಢತೆಯ ಗುರಿಗಳನ್ನು ಗಮನಿಸುವ ಅವಕಾಶದ ಜೊತೆಗೆ ಕೈಯಲ್ಲಿ ಫೋನ್ ಇಟ್ಟುಕೊಳ್ಳದೆಯೇ ಜಗತ್ತಿನೊಂದಿಗೆ ಸಂಪರ್ಕ ಹೊಂದಿರಬಹುದಾಗಿದೆ.

ಗ್ಯಾಲಕ್ಸಿ ವಾಚ್ ಆ್ಯಕ್ಟಿವ್ 2–4ಜಿಯ ಹೊರಭಾಗದ ಕೇಸ್ ಕ್ಲೌಡ್ ಸಿಲ್ವರ್, ಅಕ್ವಾ ಬ್ಲ್ಯಾಕ್‌ ಮತ್ತು ಪಿಂಕ್ ಗೋಲ್ಡ್ ಮಾದರಿಯ ಸ್ಪೋರ್ಟ್ ಬ್ಯಾಂಡ್‌ಗಳೊಂದಿಗೆ ಲಭ್ಯವಿದೆ. ಸೂಪರ್ ಅಮೋಲೆಡ್ ಡಿಸ್‌ಪ್ಲೇ ತುದಿಯಿಂದ ತುದಿಯವರೆಗಿನ ಪರದೆ ಹೊಂದಿದ್ದು, ಟಚ್ ಬೆಜೆಲ್‌ನೊಂದಿಗೆ ಬರುತ್ತದೆ. ಇದರಲ್ಲಿ ರೊಟೇಟಿಂಗ್ ಯುಐ ಅನುಭವ ಸಹ ಸಿಗುತ್ತದೆ.

ಇದರ ಬೆಲೆ ₹28,490 ನಿಗದಿಯಾಗಿದೆ. ಜುಲೈ 11ರಿಂದ ರಿಟೇಲ್ ಮಳಿಗೆಗಳು, ಸ್ಯಾಮ್‌ಸಂಗ್ ಒಪೇರಾ ಹೌಸ್, ಸ್ಯಾಮ್‌ಸಂಗ್‌ ವೆಬ್‌ಸೈಟ್‌ ಹಾಗೂ ಆನ್‌ಲೈನ್ ಮಳಿಗೆಗಳಲ್ಲಿ ಲಭ್ಯವಿದೆ. ಜುಲೈ 31, 2020ವರೆಗೆ ಈ ವಾಚ್‌ ಖರೀದಿಸುವ ಗ್ರಾಹಕರು ಶೇ. 10ರಷ್ಟು ಕ್ಯಾಶ್ ಬ್ಯಾಕ್ ಮತ್ತು 6 ತಿಂಗಳ ನೊ-ಕಾಸ್ಟ್ ಇಎಂಐ ಕೊಡುಗೆಗಳ ಲಾಭ ಪಡೆಯಬಹುದು.

ಈ ವಾಚ್‌ ಆರೋಗ್ಯ ಮತ್ತು ದೈಹಿಕ ದೃಢತೆಯ ಸಂಪೂರ್ಣ ಅಗತ್ಯಗಳನ್ನು ಪೂರೈಸುತ್ತದೆ. ವರ್ಕೌಟ್‌ಗಳಿಗೆ ರಿಯಲ್ ಟೈಮ್ ಫೀಡ್‌ಬ್ಯಾಕ್ ಮತ್ತು ವಿಶ್ಲೇಷಣಾತ್ಮಕ ಫಲಿತಾಂಶ ನೀಡುತ್ತದೆ. ಇದರಲ್ಲಿ 39 ವರ್ಕೌಟ್ ಟ್ರ್ಯಾಕರ್‌ಗಳಿದ್ದು, ಅವುಗಳಲ್ಲಿ ಬಹಳಷ್ಟು ಒಳಾಂಗಣ ವರ್ಕೌಟ್‌ಗಳ ಕಡೆಗೆ ಗಮನ ಕೇಂದ್ರೀಕರಿಸುತ್ತವೆ. ದೈಹಿಕ ಕಸರತ್ತಿನ ವಿಡಿಯೊ ಮಾರ್ಗದರ್ಶನದ ಕಾರ್ಯಕ್ರಮಗಳಿಗೂ ಸಂಪರ್ಕ ಸಾಧಿಸುವ ಅವಕಾಶವಿದೆ. ದೈನಂದಿನ ವ್ಯಾಯಾಮಗಳ ಅಂಕಿ–ಅಂಶಗಳನ್ನು ಇದು ಕ್ಯಾಲೆಂಡರ್‌ನಲ್ಲಿ ದಾಖಲಿಸುತ್ತದೆ.

ವಾಚ್‌ ಇ-ಸಿಮ್ ಕನೆಕ್ಟಿವಿಟಿ ಜೊತೆಗೆ ಬಂದಿದ್ದು, ಫೋನ್ ಜೊತೆಯಲ್ಲಿ ಇಲ್ಲದೆಯೇ ಕರೆ, ಸಂದೇಶಗಳು ಮತ್ತು ನೋಟಿಫಿಕೇಷನ್‌ಗಳೊಂದಿಗೆ ವಾಚ್ ಮೂಲಕವೇ ಸಂಪರ್ಕ ಸಾಧಿಸಬಹುದಾಗಿದೆ. ಸ್ಪೋಟಿಫೈನಲ್ಲಿ ಸಂಗೀತ ಮತ್ತು ಪಾಡ್‌ಕ್ಯಾಸ್ಟ್‌ಗಳ ಬ್ರೌಸ್ ಮಾಡಲು ಇದು ಅವಕಾಶ ಮಾಡಿಕೊಡುತ್ತದೆ.

ವಾಚ್‌ ನಿಮ್ಮ ಫೋನ್‌ಗೆ ಸಂಪರ್ಕ ಹೊಂದಿದ ನಂತರ ಸುಲಭವಾಗಿ ಫೋಟೊ ತೆಗೆಯಲು, ವಿಡಿಯೊ ಮಾಡಲು, ವಿಡಿಯೊ ಕ್ಲಿಪ್‌ಗಳ ಪ್ರಿವ್ಯೂ ನೋಡಲು, ಫ್ರಂಟ್ ಮತ್ತು ರೇರ್ ಕ್ಯಾಮೆರಾ ಲೆನ್ಸ್‌ ಬದಲಾಯಿಸಲು, ಟೈಮರ್ ಸೆಟ್ ಎಲ್ಲವನ್ನೂ ವಾಚ್‌ನಲ್ಲಿಯೇ ಮಾಡಬಹುದು. ಹಾಗೇ ಗ್ಯಾಲಕ್ಸಿ ಸ್ಮಾರ್ಟ್‌ಫೋನ್‌ಗಳಲ್ಲಿನ ವೈರ್‌ಲೆಸ್‌ ಪವರ್ ಶೇರ್‌ ಬಳಸಿ ಸುಲಭವಾಗಿ ಗೆಲಾಕ್ಸಿ ವಾಚ್ ಆ್ಯಕ್ಟಿವ್ 2- 4ಜಿ ಚಾರ್ಜ್ ಮಾಡಿಕೊಳ್ಳಬಹುದು.

ಭಾರತದಲ್ಲಿ ಸ್ಯಾಮ್‌ಸಂಗ್‌ನ 18 ಸ್ಮಾರ್ಟ್ ವಾಚ್‌ ಮಾದರಿಗಳ ಉತ್ಪಾದನೆಯನ್ನು ಆರಂಭಿಸಿರುವುದಾಗಿ ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ವಹಿವಾಟಿನ ಹಿರಿಯ ಉಪಾಧ್ಯಕ್ಷರಾದ ಮೋಹನ್ ದೀಪ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT