ಬೆಂಗಳೂರು: ಸರ್ಕಾರಿ ಕಚೇರಿಗಳ ಮೂಲೆಗಳು, ಶೌಚಾಲಯ, ಬಸ್ ನಿಲ್ದಾಣ, ಹೋಟೆಲು ಹಾಗೂ ಕ್ಯಾಂಟೀನ್ಗಳ ಮುಂಭಾಗ ಹೀಗೆ ಎಲ್ಲೆಂದರಲ್ಲಿ ಗುಟ್ಕಾ ಅಗಿದು ಉಗಿಯುವವರಿಂದ ಪ್ರದೇಶವೆಲ್ಲಾ ಕೆಂಪಾಗಿ ಅಂದಗೆಟ್ಟಿರುವುದು ಕಣ್ಣಿಗೆ ರಾಚುತ್ತದೆ. ಇದಕ್ಕೊಂದು ಪರಿಹಾರವೆಂಬಂತೆ ಯುವಪಡೆಯೊಂದು ಜೈವಿಕ ಸ್ನೇಹಿ ಉಗುಳುವ ಪೀಕುದಾನಿಯನ್ನು ಅನ್ವೇಷಿಸಿದೆ.

ಭಾರತದಲ್ಲಿ ಈ ಉಗುಳುವ ಚಟ ಮತ್ತು ತಂಬಾಕು ಸೇವನೆಯಿಂದ ಪ್ರತಿ ವರ್ಷ 20 ಕೋಟಿ ಜನ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಸಮಸ್ಯೆಯು ಶ್ವಾಸಕೋಶ, ಬಾಯಿ ಕ್ಯಾನ್ಸರ್ವರೆಗೂ ವ್ಯಾಪಿಸಿದೆ. ಹೀಗಿದ್ದರೂ ಉಗುಳುವುದು ಸಾಮಾನ್ಯ ಸಂಗತಿಯಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ‘ಉಗುಳಬೇಡಿ, ಉಗುಳಿದರೆ ದಂಡ’ ಎಂಬ ಫಲಕ ಎಲ್ಲೆಡೆ ರಾರಾಜಿಸುತ್ತಿರುತ್ತದೆ. ಆದರೆ ಅದರದ್ದು ಅರಣ್ಯರೋಧನವಾಗಿದೆ. ಗುಟ್ಕಾ ಅಗಿದು, ಉಗಿಯುವವರಿಗೆ ಇದು ಯಾವುದರ ಪರಿವೆಯೂ ಇಲ್ಲವಾದಂತಾಗಿದೆ ಎಂಬುದು ಪರಿಸರ ಪ್ರಿಯರ ಅಳಲು.

ಇದಕ್ಕೊಂದು ಪರಿಹಾರವೆಂಬಂತೆ ಯುವಕರ ಗುಂಪೊಂದು ಈ ಸಮಸ್ಯೆಯನ್ನೇ ಸವಾಲಾಗಿ ಸ್ವೀಕರಿಸಿ, ಪರಿಹಾರವೊಂದನ್ನು ಕಂಡುಹಿಡಿದಿದೆ. ಇದು ಸರಳ, ಅಂಗಿಯ ಜೇಬಿನಲ್ಲೂ ಸರಳವಾಗಿ ಹಿಡಿಸಿವ ‘ಸ್ಪಿಟ್ಟೂನ್’ ಎಂಬ ಸಾಧನ. ಈ ಸಾಧನವು ಸಾರ್ವಜನಿಕ ಸ್ಥಳಗಳನ್ನು ಗಬ್ಬೆಬ್ಬಿಸುವುದನ್ನು ತಡೆಯಲು ನೆರವಾಗಲಿದೆ ಎಂದು ದಿ ಬೆಟ್ಟರ್ ಇಂಡಿಯಾ ಸಂಸ್ಥೆಯು ವರದಿ ಮಾಡಿದೆ.

‘ಸೊಲೂಷನರೀಸ್’ ಎಂಬ ತಂಡವನ್ನು ಕಟ್ಟಿಕೊಂಡಿರುವ ವಿದ್ಯಾರ್ಥಿಗಳ ಗುಂಪೊಂದು, ಈ ಪಾಕೇಟ್ ಸ್ಪಿಟ್ಟೂನ್ ಅನ್ನು ಅಭಿವೃದ್ಧಿಪಡಿಸಿದೆ. ಈ ಸಾಧನವು ದ್ರವ ಪದಾರ್ಥವನ್ನು ಹೀರಿಕೊಳ್ಳುತ್ತದೆ. ದುರ್ಗಂಧ ಹರಡುವುದನ್ನು ತಡೆಗಟ್ಟುತ್ತದೆ. ಗುಟ್ಕಾ ತಿಂದರೆ ಕ್ಯಾನ್ಸರ್ ಬರುತ್ತದೆ ಎಂಬ ಮಾಹಿತಿ ಇದ್ದರೂ, ಗುಟ್ಕಾ, ಪಾನ್ ಮಸಾಲಾ ಅಗಿಯುವವರು ಇದೊಂದು ಸಾಧನವನ್ನು ಜೇಬಿನಲ್ಲಿಟ್ಟುಕೊಂಡರೆ, ಹಾದಿಬೀದಿಯಲ್ಲಿ, ಕಟ್ಟಡಗಳ ಮೂಲೆ, ಬಸ್ ಅಥವಾ ರೈಲ್ವೇ ನಿಲ್ದಾಣಗಳಲ್ಲಿ ಉಗಿಯುವ ಗೋಜು ಇರುವುದಿಲ್ಲ. ಉಗಿಯುವ ಸಮಸ್ಯೆಗೆ ದಂಡವಷ್ಟೇ ಪರಿಹಾರವಲ್ಲ, ಪರ್ಯಾಯ ವ್ಯವಸ್ಥೆಯೂ ಪರಿಣಾಮಕಾರಿಯಾಗಬಲ್ಲದು ಎಂದೆನ್ನುತ್ತಾರೆ ಅನ್ವೇಷಕರ ತಂಡದ ಯುವಕರು.

ಸ್ಪಿಟ್ಟೂನ್ ಹೇಗೆ ಕೆಲಸ ಮಾಡುತ್ತದೆ?

ಜೇಬಿನಲ್ಲಿಟ್ಟುಕೊಳ್ಳಬಹುದಾದ ಪುಟ್ಟ ಸಾಧನವನ್ನು ಗುಟ್ಕಾ ಅಗಿಯುವ ಚಟ ಇರುವವರು ಇಟ್ಟುಕೊಳ್ಳಬಹುದು. ಈ ಸಾಧನದಲ್ಲಿ ಗುಟ್ಕಾ ರಸವನ್ನು ಉಗಿದ ನಂತರ ಅದು ಲಾಕ್ ಆಗುವಂತೆ ವಿನ್ಯಾಸಗೊಳಿಸಲಾಗಿದೆ. ಇದರಿಂದ ಉಗುಳು ಹೊರಗೆ ಚೆಲ್ಲದು. ಒಳಗಿರುವ ಪ್ಯಾಡ್ ಈ ರಸವನ್ನು ಹೀರಿಕೊಂಡು, ದುರ್ಗಂಧ ಹೊರಸೂಸದಂತೆ ತಡೆಯುತ್ತದೆ.

ಸೂಪರ್ ಅಬ್ಸಾರ್ಬೆಂಟ್ ಪಾಲಿಮರ್ಗೆ ಅಡುಗೆ ಸೋಡಾ ಸೇರಿಸಿದರೆ ಇಂಥದ್ದೊಂದು ಮ್ಯಾಜಿಕ್ ದ್ರವ ಸಿದ್ಧವಾಗುತ್ತದೆ. ‘ಫ್ಯೂಚರ್ ಮೇಕರ್’ ಎಂಬ ಕಾರ್ಯಕ್ರಮದಡಿ ಸೌಲಭ್ಯ ವಂಚಿತ ಸಮುದಾಯದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಮ್ಯೂಸಿಯಮ್ ಆಫ್ ಸೊಲೂಷನ್ಸ್ ಎಂಬ ಸಂಸ್ಥೆಯು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಈ ಸ್ಪಿಟ್ಟೂನ್ ಪ್ರದರ್ಶನಗೊಂಡಿದೆ.

ಬಾಯಿಯ ಕ್ಯಾನ್ಸರ್, ಸಾರ್ವಜನಿಕ ಆರೋಗ್ಯ ಕಾಪಾಡಲು ಹೇಗೆ ನೆರವಾಗಲಿದೆ?

ಗುಟ್ಕಾ, ಪಾನ್ ಮಸಾಲಾದಂತ ತಂಬಾಕು ಪದಾರ್ಥ ಅಗಿಯುವುದರಿಂದ ಬಾಯಿ ಕ್ಯಾನ್ಸರ್ ಪ್ರಮಾಣ ಹೆಚ್ಚಾಗಲಿದೆ, ಜತೆಗೆ ಇನ್ನಷ್ಟು ಆರೋಗ್ಯ ಸಮಸ್ಯೆ ಕಾಡಲಿದೆ ಎಂಬುದನ್ನು ಈಗಾಗಲೇ ತಜ್ಞರು ಹೇಳಿದ್ದಾರೆ. ಸರ್ಕಾರವೂ ಈ ಕುರಿತು ನಿಯಮಿತವಾಗಿ ಜಾಹೀರಾತು ನೀಡುವ ಮೂಲಕ ಸಾರ್ವಜನಿಕರನ್ನು ಎಚ್ಚರಿಸುತ್ತಲೇ ಇದೆ. ಈ ಸಮಸ್ಯೆಯಿಂದಲೇ ಪ್ರತಿ ವರ್ಷ ನೂರಾರು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವೆಂಬಂತೆ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರಿಂದ ರೋಗ ಹರಡುವ ಪ್ರಮಾಣವನ್ನು ಇಂಥ ಸಾಧನದ ಮೂಲಕ ತಗ್ಗಿಸಬಹುದು ಎಂಬುದು ಈ ತಂಡದ ವಾದ.

ಸ್ಪಿಟ್ಟೂನ್ ಮಾದರಿಯಲ್ಲೇ ಈಜಿಸ್ಪಿಟ್ ಎಂಬ ಜೈವಿಕವಾಗಿ ಕಳಿಯಬಲ್ಲ ಉಗುಳುವ ಪೊಟ್ಟಣವನ್ನು ಈ ಹಿಂದೆ ಅಭಿವೃದ್ಧಿಪಡಿಸಲಾಗಿತ್ತು. ಇವುಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗಿತ್ತು. ‘ಸ್ವಚ್ಛ್ ಎಐ’ ಎಂಬ ಸಾಧನದ ಮೂಲಕ ಕ್ಯಾಮೆರಾ ಬಳಸಿ ಉಗುಳುವವರನ್ನು ಪತ್ತೆ ಮಾಡಿ ಇವುಗಳನ್ನು ನೀಡಲಾಗುತ್ತಿತ್ತು.

ಆ ಮೂಲಕ ಕಠಿಣ ಕಾನೂನ ಜತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವವರನ್ನು ತಡೆಯಲು ಶಿಕ್ಷಣ, ತಂತ್ರಜ್ಞಾನ ಮತ್ತು ಅಗ್ಗದ ಅನ್ವೇಷಣೆಗಳೂ ನಡೆಯುತ್ತಿವೆ ಎನ್ನುವುದಕ್ಕೆ ಸ್ಪಿಟ್ಟೂನ್ ಉತ್ತಮ ಉದಾಹರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.