ಶ್ರವಣಬೆಳಗೊಳ: ಇಲ್ಲಿಯ ಗೊಮ್ಮಟ ನಗರದ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದ ಸಭಾಂಗಣದಲ್ಲಿ ರಾಜ್ಯ ಮಟ್ಟದ ಹ್ಯಾಕಥಾನ್ ಸ್ಪರ್ಧೆಯನ್ನು ಏಪ್ರಿಲ್ 10 ಮತ್ತು 11ರಂದು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಸಾಫ್ಟ್ವೇರ್ ಅಭಿವೃದ್ಧಿ ಪ್ರೋಗ್ರಾಮಿಂಗ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸೃಜನಾತ್ಮಕ ಸ್ಪರ್ಧೆಯಾಗಿದೆ. ತಂತ್ರಜ್ಞಾನದ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯಾಗಾರವಾಗಿದ್ದು, ರಾಜ್ಯದ ವಿವಿಧ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ 77 ತಂಡಗಳು ಈಗಾಗಲೇ ತಮ್ಮ ಹೆಸರು ನೊಂದಾಯಿಸಿವೆ ಎಂದು ಹೇಳಿದ್ದಾರೆ.

ಈ ಸ್ಪರ್ಧೆಯಲ್ಲಿ ಅರ್ಹತೆ ಗಳಿಸುವ ಮೊದಲ ತಂಡದ 4 ವಿದ್ಯಾರ್ಥಿಗಳಿಗೆ ಖಾತರಿಯಾಗಿ ಉದ್ಯೋಗ ಲಭಿಸಲಿದೆ. 2 ಮತ್ತು 3ನೇ ಸ್ಥಾನ ಪಡೆಯುವ ತಂಡಗಳಿಗೆ ಉಚಿತ ಇಂಟರ್ನ್ಶಿಪ್ ಸೌಲಭ್ಯ ದೊರೆಯಲಿದೆ ಎಂದರು.

ನಗದು ಬಹುಮಾನವಾಗಿ ₹50 ಸಾವಿರ ನಿಗದಿ ಮಾಡಿದ್ದು, ಮೊದಲ ಬಹುಮಾನ ₹25 ಸಾವಿರ, ದ್ವಿತೀಯ ₹15 ಸಾವಿರ ಹಾಗೂ ತೃತೀಯ ₹10 ಸಾವಿರ ನಗದು ಬಹುಮಾನ ನೀಡಲಾಗುತ್ತಿದೆ. ಸ್ಪರ್ಧೆಯ ನಿರ್ವಹಣೆಯನ್ನು ಬಾಹುಬಲಿ ತಾಂತ್ರಿಕ ಕಾಲೇಜು ನಿರ್ವಹಿಸಲಿದ್ದು, ಉದ್ಯೋಗ ಇನ್ನಿತರೆ ಸೌಲಭ್ಯವನ್ನು ಡಿಎಸ್ಎಡಿಫೈ ಕಂಪನಿ ಒದಗಿಸಲಿದೆ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-44-984968964

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.