ಗುಣಮಟ್ಟದ ಇನ್ಫೊಟೈನ್ಮೆಂಟ್ ಸಿಸ್ಟಂಗಾಗಿ ಐಷಾರಾಮಿ ಕಾರುಗಳನ್ನೇ ಖರೀದಿಸುವ, ಲಕ್ಷಾಂತರ ರೂಪಾಯಿ ಹೆಚ್ಚಾದರೂ ಚಿಂತಿಸದೆ ಹೈ–ಎಂಡ್ ಸಿಸ್ಟಂಗಳನ್ನು ಖರೀದಿಸುವ ಸಾಕಷ್ಟು ಮಂದಿಗೆ ತಮ್ಮ ಈ ಆದ್ಯತೆಯನ್ನು ಬದಲಿಸಿಕೊಳ್ಳುವ ಕಾಲ ಒದಗಿ ಬಂದಿದೆ. ಈ ಜಾಗವನ್ನು ಸ್ಮಾರ್ಟ್ ಹೆಡ್ಲೈಟ್ ಪ್ರೊಜೆಕ್ಟರ್ಗಳು ತುಂಬಲಿವೆ. ಇವುಗಳ ಸಹಾಯದಿಂದ ಕಾರಿನಲ್ಲಿ ಕೂತು ಎದುರಿನ ಗೋಡೆಯ ಮೇಲೆ ಸಿನಿಮಾಗಳನ್ನು ವೀಕ್ಷಿಸಬಹುದು. ಅದೂ ದೊಡ್ಡ ಪರದೆಯಂತೆಯೇ ಅನುಭವ ಕಟ್ಟಿಕೊಡುವುದು ವಿಶೇಷ.

ಆಶ್ಚರ್ಯವೆನಿಸಿದರೂ ಇದು ಸತ್ಯ. ಈಚೆಗೆ ಚೀನಾದ ಬೀಜಿಂಗ್ ಆಟೊಮೊಬೈಲ್ ಪ್ರದರ್ಶನದಲ್ಲಿ ‘ಹುವಾವೇ’ ಕಂಪನಿಯು ತನ್ನ ಹೊಸ ‘ಎಕ್ಸ್ಪಿಕ್ಸೆಲ್’ ಹೆಡ್ಲೈಟ್ ತಂತ್ರಜ್ಞಾನ ಅನಾವರಣಗೊಳಿಸಿದೆ. ಇದು ಆಟೊಮೊಬೈಲ್ ಕ್ಷೇತ್ರದ ನಿದ್ದೆಗೆಡಿಸಿದೆ.

ಮುಂಬರುವ ವಾಹನದ ಚಾಲಕನ ಕಣ್ಣುಗಳು ಮಂಜಾಗುವುದನ್ನು ತಡೆಯುವ ಅಡಾಪ್ಟಿವ್ ಹೆಡ್ಲೈಟ್ಗಳ ಬಳಕೆಗೆ ಈಚೆಗೆ ಅಮೆರಿಕವೂ ಅಸ್ತು ಎಂದಿತ್ತು. ಇದನ್ನೂ ಮೀರಿಸುವ ತಂತ್ರಜ್ಞಾನ ಅಭಿವೃದ್ಧಿಪಡಿಸಿರುವ ಚೀನಾವು, ಎಲೆಕ್ಟ್ರಿಕ್ ವಾಹನಗಳನ್ನು ಮೊಬೈಲ್ ಸಿನಿಮಾ ಹಾಲ್ ಆಗಿ ಪರಿವರ್ತಿಸುವ ಸಾಮರ್ಥ್ಯವುಳ್ಳ ಹೆಡ್ಲೈಟ್ಗಳಿಗೆ ಮುನ್ನುಡಿ ಬರೆದಿದೆ.

‘ಎಕ್ಸ್ಪಿಕ್ಸೆಲ್’ ಅಲ್ಟ್ರಾ- ಹೈ ರೆಸಲ್ಯೂಶನ್ ಹೆಡ್ಲೈಟ್ ಆಗಿದ್ದು, ಈ ವ್ಯವಸ್ಥೆಯು ಸುಮಾರು 1.2 ಮಿಲಿಯನ್ (12 ಲಕ್ಷ) ಮೈಕ್ರೋ-ಮಿರರ್ಸ್ಗಳನ್ನು ಒಳಗೊಂಡಿದೆ. ಇವುಗಳು ಅತಿ ವೇಗವಾಗಿ ಚಲಿಸುವ ಮೂಲಕ ಬೆಳಕನ್ನು ಪಿಕ್ಸೆಲ್ಗಳ ರೂಪದಲ್ಲಿ ಹೊರಹಾಕುತ್ತವೆ. ಇದು ಡಿಜಿಟಲ್ ಪ್ರೊಜೆಕ್ಟರ್ನಂತೆಯೇ ಕಾರ್ಯನಿರ್ವಹಿಸುತ್ತದೆ.

ವರ್ಣರಂಜಿತ ಹೆಡ್ಲೈಟ್ಗಳಿವು...

ಸ್ಮಾರ್ಟ್ ಹೆಡ್ಲೈಟ್ಗಳ ಮೂಲಕ ಚಲನಚಿತ್ರಗಳು, ವೆಬ್ ಸೀರೀಸ್ ಅಥವಾ ಟೀವಿ ಕಾರ್ಯಕ್ರಮಗಳನ್ನು ಸಾಮಾನ್ಯ ಪ್ರೊಜೆಕ್ಟರ್ನಂತೆ ಗೋಡೆಯ ಮೇಲೆ ಕಲರ್ಫುಲ್ ಆಗಿ ಪ್ರದರ್ಶಿಸಬಹುದು. ಕಾರನ್ನು ಪಾರ್ಕ್ ಮಾಡಿದಾಗ, ಎದುರಿನ ಗೋಡೆಯ ಮೇಲೆ ಸುಮಾರು 100 ಇಂಚಿನವರೆಗಿನ ದೊಡ್ಡ ಪರದೆಯಲ್ಲಿ ದೃಶ್ಯಗಳನ್ನು ಪ್ರೊಜೆಕ್ಟ್ ಮಾಡಿ ವೀಕ್ಷಿಸಬಹುದು. ವಿಡಿಯೊ ಗೇಮ್ಗಳನ್ನೂ ಆಡಬಹುದು. ಕಾರಿನ ಸೌಂಡ್ ಸಿಸ್ಟಮ್ನೊಂದಿಗೆ ಕನೆಕ್ಟ್ ಮಾಡಿ ಒಳಗಡೆ ಕೂತೇ ‘ಮಿನಿ ಥಿಯೇಟರ್’ ಅನುಭವ ಪಡೆಯಬಹುದು.

ಸುರಕ್ಷತೆಗೂ ಆದ್ಯತೆ ಕೊಡುವ ಈ ಹೆಡ್ಲೈಟ್ಗಳು ವಾಹನ ಚಾಲನೆ ವೇಳೆ ಚಾಲಕರ ನೆರವಿಗೂ ಬರಲಿವೆ. ಇದು ಚಾಲನಾ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ. ಇನ್ನು ಈ ಹೆಡ್ಲೈಟ್ಗಳು ‘ಅಡಾಸ್’ (ಅತ್ಯಾಧುನಿಕ ಚಾಲನಾ ಸಹಾಯಕ ವ್ಯವಸ್ಥೆ) ತಂತ್ರಜ್ಞಾನದಂತೆ ಕಾರ್ಯನಿರ್ವಹಿಸಲಿದ್ದು, ರಸ್ತೆಯ ಸೂಚನಾ ಚಿಹ್ನೆಗಳನ್ನು ಗುರುತಿಸಿ ಚಾಲಕನಿಗೆ ಆ ಬಗ್ಗೆ ಅಲರ್ಟ್ ನೀಡುತ್ತವೆ. ರಸ್ತೆ ಪಥ ಬದಲಾವಣೆ ಮಾಡುವಾಗಲೂ ಎಚ್ಚರಿಸುವ ಇದು, ರಾತ್ರಿ ವೇಳೆ ಪ್ರಕಾಶಿತ ಬೆಳಕನ್ನು ಹರಿಸಿ, ಮಾರ್ಗದಲ್ಲಿನ ಅಡೆತಡೆಗಳನ್ನು ಗುರುತಿಸಿ ಆ ಬಗ್ಗೆ ಎಚ್ಚರಿಸುತ್ತವೆ. ಪಾದಚಾರಿಗಳು ರಸ್ತೆ ಮೇಲೆ ಬಂದಲ್ಲಿ, ಅದನ್ನು ಕ್ಷಣಾರ್ಧದಲ್ಲಿ ಗುರುತಿಸಿ ಅಗತ್ಯ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡುತ್ತದೆ.

ಚೀನಾದಲ್ಲಿನ ಎಲೆಕ್ಟ್ರಿಕ್ ಕಾರುಗಳಲ್ಲಿ ‘ಎಕ್ಸ್ಪಿಕ್ಸೆಲ್’ ಈಗಾಗಲೇ ಚಾಲ್ತಿಯಲ್ಲಿದೆ. ‘ಹುವಾವೇ’ ತನ್ನ ‘Stelato S9’ನಂತಹ ವಾಹನಗಳಲ್ಲಿ ಇದನ್ನು ಬಳಸುತ್ತಿದ್ದು, ಎಕ್ಸ್ಪಿಕ್ಸೆಲ್ನ ಹೊಸ ಆವೃತ್ತಿಯನ್ನು ‘Aito M9’ ಎಲೆಕ್ಟ್ರಿಕ್ ಕಾರಿನಲ್ಲಿ ಪರಿಚಯಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.