ನಾವೆಲ್ಲರೂ ಒಂದು ಭ್ರಮೆಯಲ್ಲಿದ್ದೇವೆ; ನಮ್ಮ ಸ್ಮಾರ್ಟ್ಫೋನ್ ಪರದೆಯ ಮೇಲೆ ನಾವು ಏನನ್ನು ನೋಡುತ್ತಿದ್ದೇವೆಯೋ, ಅದು ನಮ್ಮ ಸ್ವಂತ ಆಯ್ಕೆ ಎಂಬ ಭ್ರಮೆ. ಮುಂಜಾನೆ ಎದ್ದ ತಕ್ಷಣ ಯಾವ ಸುದ್ದಿ ಓದಬೇಕು, ಯಾವ ವಿಡಿಯೋ ನೋಡಬೇಕು, ಯಾರ ಪೋಸ್ಟ್ಗೆ ನಗಬೇಕು ಅಥವಾ ಕೋಪಗೊಳ್ಳಬೇಕು ಎಂಬುದನ್ನು ನಾವೇ ನಿರ್ಧರಿಸುತ್ತಿದ್ದೇವೆ ಎಂದು ನಂಬಿದ್ದೇವೆ. ಆದರೆ ಸತ್ಯ ಬಹಳ ಕಟುವಾಗಿದೆ. ನಮ್ಮ ಕಣ್ಣಿಗೆ ಕಾಣುವ ಪ್ರತಿಯೊಂದು ಅಕ್ಷರ, ಚಿತ್ರ ಮತ್ತು ವಿಡಿಯೋವನ್ನು ತೆರೆಯ ಹಿಂದೆ ಕುಳಿತಿರುವ ಒಂದು ಅದೃಶ್ಯ ಶಕ್ತಿ ನಿರ್ಧರಿಸುತ್ತಿದೆ!

ಆ ಅದೃಶ್ಯ ಶಕ್ತಿಯ ಹೆಸರೇ ‘ಅಲ್ಗಾರಿದಮ್’!

ಇದು ಕೇವಲ ಗಣಿತದ ಸೂತ್ರವಲ್ಲ; ಇದೊಂದು ನಮ್ಮ ಮನಸ್ಸನ್ನು, ಆಲೋಚನೆಯನ್ನು ಮತ್ತು ಅಂತಿಮವಾಗಿ ನಮ್ಮ ವ್ಯಕ್ತಿತ್ವವನ್ನೇ ನಿಯಂತ್ರಿಸುವ ಮಾಯಾಜಾಲ. ಅಂತರ್ಜಾಲವು ಆರಂಭವಾದಾಗ ಅದೊಂದು ಅನಂತ ಜ್ಞಾನದ ಸಾಗರ, ಎಲ್ಲರಿಗೂ ಎಲ್ಲವೂ ಮುಕ್ತವಾಗಿ ಸಿಗುವ ಪ್ರಜಾಸತ್ತಾತ್ಮಕ ವೇದಿಕೆ ಎಂದು ನಾವು ಸಂಭ್ರಮಿಸಿದ್ದೆವು. ಆದರೆ ಇಂದು ಆ ಸಾಗರವನ್ನು ಅಲ್ಗಾರಿದಮ್ಗಳು ಸಣ್ಣ ಸಣ್ಣ ಕೊಳಗಳನ್ನಾಗಿ ವಿಭಜಿಸಿ, ನಮ್ಮನ್ನು ಆ ಕೊಳದ ಕಪ್ಪೆಗಳನ್ನಾಗಿ ಮಾಡಿವೆ! ಟೆಕ್ ಜಗತ್ತಿನ ಆಗುಹೋಗುಗಳನ್ನು ಹತ್ತಿರದಿಂದ ನೋಡುತ್ತಿರುವವರೆಲ್ಲರೂ ಇದನ್ನು ಒಪ್ಪಿಕೊಳ್ಳುತ್ತಾರೆ.

ಟೆಕ್ ಜಗತ್ತು ಇದನ್ನು ‘ಅಜ್ಞಾನದ ಗುಳ್ಳೆ’ ಅಥವಾ ‘ಫಿಲ್ಟರ್ ಬಬಲ್’ (Filter Bubble) ಎನ್ನುತ್ತದೆ. ಈ ಗುಳ್ಳೆಯ ಒಳಗೆ ಎಲ್ಲವೂ ನಮಗೆ ಇಷ್ಟವಾಗುವಂತೆಯೇ ಇರುತ್ತದೆ. ನಮ್ಮ ನಂಬಿಕೆ, ನಮ್ಮ ಜಾತಿ, ನಮ್ಮ ರಾಜಕೀಯ ಒಲವು ಮತ್ತು ನಮ್ಮ ಪೂರ್ವಾಗ್ರಹಗಳಿಗೆ ಸರಿಯಾಗಿ ಹೊಂದುವಂತಹ ಮಾಹಿತಿಯನ್ನೇ ಈ ಗುಳ್ಳೆ ನಮಗೆ ಉಣಬಡಿಸುತ್ತದೆ. ನಮಗೆ ಇಷ್ಟವಿಲ್ಲದ, ನಮ್ಮ ವಿಚಾರಧಾರೆಗೆ ವಿರುದ್ಧವಾದ ಯಾವುದೇ ಸತ್ಯವನ್ನು ಇದು ನಮ್ಮ ಹತ್ತಿರಕ್ಕೂ ಸುಳಿಯಲು ಬಿಡುವುದಿಲ್ಲ. ಈ ಜಗತ್ತು ಎಷ್ಟೊಂದು ಸುಂದರ..ಎಲ್ಲವೂ ನಮಗೆ ಬೇಕಾದ್ದೇ ಇಲ್ಲಿದೆ. ಅಕ್ಷರಶಃ ನಾವು ಸ್ವರ್ಗದಲ್ಲೇ ಇದ್ದೇವೆಂದು ಭ್ರಮಿಸೋಕೆ ಇನ್ನೇನು ಬೇಕು?

ಅಪ್ಪ ಯಾವತ್ತೂ ಹೇಳುತ್ತಿದ್ದರು. ಆಳ ತಿಳಿಯದೇ ಹಳ್ಳಕ್ಕಿಳಿಯಬಾರದು ಅಂತ. ಈ ವಿಷಯದಲ್ಲೂ ಅಷ್ಟೇ, ಟೆಕ್ನಾಲಜಿ ನಮ್ಮನ್ನು ನಿಯಂತ್ರಿಸುತ್ತಿರುವಾಗ, ಅಲ್ಗಾರಿದಮ್ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಇಂದಿನ ತುರ್ತು ಅಗತ್ಯ. ನೀವು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್ ಅಥವಾ ಎಕ್ಸ್ (ಟ್ವಿಟರ್) ನಲ್ಲಿ ಕಳೆಯುವ ಪ್ರತಿ ಸೆಕೆಂಡನ್ನೂ ಈ ವ್ಯವಸ್ಥೆ ಕಣ್ಣಿಟ್ಟು ಕಾಯುತ್ತಿದೆ. ನೀವು ಯಾವ ಪೋಸ್ಟ್ ಬಳಿ ಎಷ್ಟು ಸೆಕೆಂಡ್ ನಿಲ್ಲಿತ್ತೀರಿ, ಯಾವುದಕ್ಕೆ ಲೈಕ್ ಒತ್ತುತ್ತೀರಿ, ಯಾವುದಕ್ಕೆ ಕಮೆಂಟ್ ಮಾಡುತ್ತೀರಿ ಎಂಬುದನ್ನೆಲ್ಲಾ ಕರಾರುವಾಕ್ಕಾಗಿ ದಾಖಲಿಸಿಕೊಳ್ಳಲಾಗುತ್ತದೆ. ನಮ್ಮದೇ ಆಲೋಚನೆಗಳ ತದ್ರೂಪನ್ನು ನಿರ್ಮಿಸಲು ಪ್ರತೀ ಕ್ಷಣ ಇದು ಹೊಂಚು ಹಾಕುತ್ತಲೇ ಇರುತ್ತದೆ. ನೆನಪಿರಲಿ, ನಾವ್ಯಾರೂ ಇದರಿಂದ ಬಚಾವಾಗ್ತೀವಿ ಅನ್ನುವ ಕನಸನ್ನೂ ಕಾಣುವುದು ವ್ಯರ್ಥ! ಅಷ್ಟಕ್ಕೂ ಇದು ನಮ್ಮ ಬಗೆಗಿನ ದೈತ್ಯ ಡೇಟಾವನ್ನು ಬಳಸಿಕೊಂಡು ಕೃತಕ ಬುದ್ಧಿಮತ್ತೆ (AI) ನಿಮ್ಮ ಮನಸ್ಸಿನ ನಕ್ಷೆಯನ್ನು (Psychological Profile) ಅತ್ಯಂತ ನಿಖರವಾಗಿ ಸಿದ್ಧಪಡಿಸುತ್ತದೆ. ನಿಮ್ಮ ದೌರ್ಬಲ್ಯಗಳೇನು, ನಿಮ್ಮ ಭಯಗಳೇನು, ನಿಮಗೆ ಯಾವುದು ಇಷ್ಟ ಎಂಬುದನ್ನು ನಿಮಗಿಂತ ಚೆನ್ನಾಗಿ ಈ ಯಂತ್ರಗಳು ಅರಿತುಕೊಂಡಿವೆ. ಒಮ್ಮೆ ನಿಮ್ಮ ಮನಸ್ಸಿನ ರಿಮೋಟ್ ಕಂಟ್ರೋಲ್ ಅವುಗಳ ಕೈಗೆ ಸಿಕ್ಕರೆ, ಆನಂತರ ಶುರುವಾಗುವುದೇ ಅಸಲಿ ಆಟ.
.ಟೆಕ್ ಥೆರಪಿ: ಮಲ್ಟಿ ಟಾಸ್ಕಿಂಗ್ ದೌರ್ಜನ್ಯಕ್ಕೆ ಮುಕ್ತಿ ಎಂದು?.ಟೆಕ್ ಥೆರಪಿ: ಕ್ಲರಿಕಲ್ ಕೆಲಸಗಳನ್ನು ಎಐಗೆ ಒಪ್ಪಿಸಿ, ನಾವು ಕ್ರಿಯೇಟಿವ್ ಆಗೋಣ!.
ನಿಮಗೇನು ಬೇಕೋ ಅದನ್ನೇ ತೋರಿಸುವುದು ತಪ್ಪು ಹೇಗಾಗುತ್ತದೆ ಎಂಬ ಮುಗ್ಧ ಪ್ರಶ್ನೆ ಮೂಡಬಹುದು. ಮೇಲ್ನೋಟಕ್ಕೆ ಇದೊಂದು ಅತ್ಯುತ್ತಮ ಗ್ರಾಹಕ ಸೇವೆಯಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ ಇದು ನಿಮ್ಮ ಬೌದ್ಧಿಕ ಬೆಳವಣಿಗೆಯ ಕತ್ತು ಹಿಸುಕುವ ತಂತ್ರ. ಜ್ಞಾನ ಬೆಳೆಯುವುದು ನಮ್ಮ ನಂಬಿಕೆಗಳನ್ನು ಪ್ರಶ್ನಿಸುವ ವಿಭಿನ್ನ ದೃಷ್ಟಿಕೋನಗಳನ್ನು ಎದುರುಗೊಂಡಾಗ ಮಾತ್ರ. ಆದರೆ ಈ ಅಲ್ಗಾರಿದಮ್ಗಳು ನಿಮ್ಮನ್ನು ಕೇವಲ ನಿಮ್ಮದೇ ಪ್ರತಿಧ್ವನಿ ಕೇಳಿಸುವ ‘ಎಕೋ ಚೇಂಬರ್’ (Echo Chamber) ಒಳಗೆ ಆಜೀವಪರ್ಯಂತ ಕೂಡಿಹಾಕುತ್ತವೆ.

ಈ ಪ್ರತಿಧ್ವನಿಯ ಕೋಣೆಯಲ್ಲಿ ನೀವು ಕೂಗಿದ್ದೇ ನಿಮಗೆ ಮತ್ತೆ ಮತ್ತೆ ಕೇಳಿಸುತ್ತದೆ. ಉದಾಹರಣೆಗೆ, ನೀವು ಒಂದು ನಿರ್ದಿಷ್ಟ ರಾಜಕೀಯ ಪಕ್ಷದ ಬೆಂಬಲಿಗರಾಗಿದ್ದರೆ, ಆ ಪಕ್ಷದ ನಾಯಕರ ಗುಣಗಾನ ಮಾಡುವ ಪೋಸ್ಟ್ಗಳೇ ನೂರಾರು ಸಂಖ್ಯೆಯಲ್ಲಿ ನಿಮ್ಮ ಟೈಮ್ಲೈನ್ ತುಂಬುತ್ತವೆ. ವಿರೋಧ ಪಕ್ಷದವರು ಮಾಡುವ ಯಾವ ಒಳ್ಳೆಯ ಕೆಲಸವೂ ಅಥವಾ ನಿಮ್ಮ ನೆಚ್ಚಿನ ನಾಯಕರು ಮಾಡುವ ತಪ್ಪುಗಳೂ ನಿಮ್ಮ ಕಣ್ಣಿಗೆ ಬೀಳದಂತೆ ವ್ಯವಸ್ಥಿತವಾಗಿ ಮರೆಮಾಚಲಾಗುತ್ತದೆ.

ಇದರಿಂದಾಗಿ "ನಾನು ನಂಬಿದ್ದೇ ಅಂತಿಮ ಸತ್ಯ, ಇಡೀ ಜಗತ್ತು ನನ್ನಂತೆಯೇ ಯೋಚಿಸುತ್ತಿದೆ" ಎಂಬ ಅಪಾಯಕಾರಿ ಭ್ರಮೆ ನಮ್ಮಲ್ಲಿ ಬೇರೂರುತ್ತದೆ. ಆದರೆ ನಿಮ್ಮ ಪಕ್ಕದ ಮನೆಯ ವ್ಯಕ್ತಿಯ ಫೋನ್ ಪರದೆಯ ಮೇಲೆ ಇದೇ ಅಲ್ಗಾರಿದಮ್ ಸಂಪೂರ್ಣವಾಗಿ ವಿರುದ್ಧವಾದ ಇನ್ನೊಂದು ಜಗತ್ತನ್ನು ಸೃಷ್ಟಿಸಿರುತ್ತದೆ. ಒಂದೇ ಸಮಾಜದಲ್ಲಿ ಬದುಕುತ್ತಿರುವ ಇಬ್ಬರು ವ್ಯಕ್ತಿಗಳು, ಡಿಜಿಟಲ್ ಜಗತ್ತಿನಲ್ಲಿ ಎರಡು ಸಂಪೂರ್ಣ ಭಿನ್ನವಾದ ಮತ್ತು ಪರಸ್ಪರ ದ್ವೇಷಿಸುವ ಪ್ರಪಂಚಗಳಲ್ಲಿ ಬದುಕುತ್ತಿರುತ್ತಾರೆ!

ಇದು ಕೇವಲ ರಾಜಕೀಯಕ್ಕೆ ಸೀಮಿತವಾಗಿಲ್ಲ. ಆರೋಗ್ಯ, ವಿಜ್ಞಾನ, ಇತಿಹಾಸ ಎಲ್ಲದರಲ್ಲೂ ಈ ಅಜ್ಞಾನದ ಗುಳ್ಳೆ ಕೆಲಸ ಮಾಡುತ್ತಿದೆ. ನೀವು ಯಾವುದೋ ಒಂದು ರೋಗದ ಬಗ್ಗೆ ತಪ್ಪು ಮಾಹಿತಿಯಿರುವ ವಿಡಿಯೋ ನೋಡಿದರೆ, ಮುಂದಿನ ಹತ್ತು ದಿನಗಳ ಕಾಲ ಯೂಟ್ಯೂಬ್ ನಿಮಗೆ ಅದೇ ರೀತಿಯ ನಕಲಿ ವೈದ್ಯರ, ಹುಸಿ ವಿಜ್ಞಾನದ ನೂರಾರು ವಿಡಿಯೋಗಳನ್ನು ಶಿಫಾರಸು ಮಾಡುತ್ತದೆ. ಅಂತಿಮವಾಗಿ ನೀವು ಆ ಸುಳ್ಳನ್ನೇ ಪರಮಸತ್ಯ ಎಂದು ಒಪ್ಪಿಕೊಳ್ಳುವ ಹಂತಕ್ಕೆ ತಲುಪುತ್ತೀರಿ. ಅರೆಬರೆ ಸತ್ಯ ಅಥವಾ ಸುಳ್ಳಿಗಿಂತಲೂ ಅತಿ ಹೆಚ್ಚು ಅಪಾಯಕಾರಿಯಾದದ್ದು ನಮ್ಮ ಕಣ್ಣಿಗೆ ಕಟ್ಟಿರುವ ಈ ತಂತ್ರಜ್ಞಾನದ ಪಟ್ಟಿ. "ನನಗೆ ಎಲ್ಲವೂ ಗೊತ್ತಿದೆ" ಎನ್ನುವ ಅಹಂಕಾರವನ್ನು ಈ ಅಲ್ಗಾರಿದಮ್ಗಳು ನಮ್ಮಲ್ಲಿ ಬಿತ್ತುತ್ತವೆ. ಪ್ರತಿದಿನ ನೂರಾರು ರೀಲ್ಸ್ ಮತ್ತು ಶಾರ್ಟ್ಸ್ ನೋಡುವ ನಾವು, ಜಗತ್ತಿನ ಎಲ್ಲಾ ವಿದ್ಯಮಾನಗಳ ಅರಿವು ನಮಗಿದೆ ಎಂದು ಬೀಗುತ್ತೇವೆ. ಆದರೆ ನಮಗೆ ಗೊತ್ತಿರುವುದು ಕೇವಲ ಆ ಗುಳ್ಳೆಯೊಳಗಿನ ಸತ್ಯ ಮಾತ್ರ ಎಂಬುದು ನಮಗೆ ಅರಿವಾಗುವುದೇ ಇಲ್ಲ.

ಈ ಮಾಯಾಜಾಲದ ಹಿಂದಿರುವ ಅಸಲಿ ಉದ್ದೇಶ ಬಹಳ ಸ್ಪಷ್ಟವಾಗಿದೆ: ಅದು ನಗ್ನ ವ್ಯಾಪಾರ. ಈ ಟೆಕ್ ಕಂಪನಿಗಳ ಮುಖ್ಯ ಬಂಡವಾಳ ನಮ್ಮ 'ಗಮನ' (Attention) ಮತ್ತು 'ಸಮಯ'. ನೀವು ಎಷ್ಟು ಹೆಚ್ಚು ಹೊತ್ತು ಅವರ ಆ್ಯಪ್ನಲ್ಲಿ ಕಳೆಯುತ್ತೀರೋ, ಅಷ್ಟು ಹೆಚ್ಚು ಜಾಹೀರಾತುಗಳನ್ನು ಅವರು ನಿಮಗೆ ತೋರಿಸಬಹುದು. ಅಷ್ಟು ಹೆಚ್ಚು ಕೋಟ್ಯಂತರ ಡಾಲರ್ ಲಾಭ ಅವರ ಜೇಬು ಸೇರುತ್ತದೆ.
.ಟೆಕ್ ಥೆರಪಿ: ಎಐ ಬುದ್ಧಿವಂತಿಕೆಗೆ ಬರವಿಲ್ಲ, ಆದರೆ ಬಿಲ್ ಕಟ್ಟುವವರಾರು?.ಟೆಕ್ ಥೆರಪಿ: ನಮ್ಮನ್ನೇ ‘ಉತ್ಪನ್ನ’ವಾಗಿಸುವ ಟೆಕ್ ದೈತ್ಯರ ಅಸಲಿಯತ್ತು ಗೊತ್ತೇ?.
ನಮ್ಮನ್ನು ಹೆಚ್ಚು ಹೊತ್ತು ಹಿಡಿದಿಟ್ಟುಕೊಳ್ಳಲು ಅತ್ಯಂತ ಸುಲಭದ ದಾರಿ ಎಂದರೆ ನಮ್ಮ ಭಾವನೆಗಳನ್ನು, ಅದರಲ್ಲೂ ವಿಶೇಷವಾಗಿ ನಕಾರಾತ್ಮಕ ಭಾವನೆಗಳನ್ನು ಕೆರಳಿಸುವುದು. ಶಾಂತಿಯುತವಾದ, ತಾರ್ಕಿಕವಾದ ಮತ್ತು ಸಮತೋಲಿತವಾದ ಬರಹಗಳಿಗಿಂತ, ಉದ್ರೇಕಕಾರಿ, ದ್ವೇಷ ಕಾರುವ ಮತ್ತು ವಿವಾದಾತ್ಮಕವಾದ ಪೋಸ್ಟ್ಗಳು ನಮ್ಮನ್ನು ಹೆಚ್ಚು ಸೆಳೆಯುತ್ತವೆ ಎಂಬುದು ಅಲ್ಗಾರಿದಮ್ಗಳಿಗೆ ಚೆನ್ನಾಗಿ ಗೊತ್ತಿದೆ.

ಹಾಗಾಗಿಯೇ ಜಾಲತಾಣಗಳು ಕೋಪ ಮತ್ತು ದ್ವೇಷವನ್ನು ಹರಡುವ ಕಂಟೆಂಟ್ಗೆ ಅತಿ ವೇಗದ ಪ್ರಚಾರ ನೀಡುತ್ತವೆ. ಕೋಪಗೊಂಡ ಮನುಷ್ಯ ಹೆಚ್ಚು ಪ್ರತಿಕ್ರಿಯಿಸುತ್ತಾನೆ, ಹೆಚ್ಚು ಕಮೆಂಟ್ ಮಾಡುತ್ತಾನೆ, ಹೆಚ್ಚು ಶೇರ್ ಮಾಡುತ್ತಾನೆ. ನಮ್ಮ ಈ ಕೋಪವೇ ಟೆಕ್ ದೈತ್ಯರ ಪಾಲಿಗೆ ಕಾಂಚಾಣ. ನಾವು ಬೀದಿಯಲ್ಲಿ ಅಥವಾ ಕಮೆಂಟ್ ಬಾಕ್ಸಿನಲ್ಲಿ ಪರಸ್ಪರ ಕಚ್ಚಾಡುತ್ತಿದ್ದಷ್ಟು ಅವರ ಬ್ಯಾಂಕ್ ಬ್ಯಾಲೆನ್ಸ್ ಹಿಗ್ಗುತ್ತದೆ.

ಈ ಅಜ್ಞಾನದ ಗುಳ್ಳೆಯಲ್ಲಿ ಸಿಲುಕಿರುವ ನಾವು ವಿಮರ್ಶಾತ್ಮಕವಾಗಿ ಆಲೋಚಿಸುವ (Critical Thinking) ಶಕ್ತಿಯನ್ನೇ ಕಳೆದುಕೊಳ್ಳುತ್ತಿದ್ದೇವೆ. ಏನನ್ನಾದರೂ ಓದಿದಾಗ ಅಥವಾ ನೋಡಿದಾಗ "ಇದು ನಿಜವೇ?", "ಇದರ ಮೂಲ ಯಾವುದು?", "ಇದರ ಹಿಂದಿನ ಉದ್ದೇಶವೇನು?" ಎಂದು ಪ್ರಶ್ನಿಸುವ ತಾಳ್ಮೆ ನಮ್ಮಲ್ಲಿ ಉಳಿದಿಲ್ಲ. ಕೇವಲ ತಲೆಬರಹ ನೋಡಿ ತೀರ್ಮಾನಕ್ಕೆ ಬರುವ ಮತ್ತು ವಾಟ್ಸಾಪ್ ಫಾರ್ವರ್ಡ್ಗಳನ್ನು ವೇದವಾಕ್ಯವೆಂದು ನಂಬುವ ಆತುರದ ಜನಾಂಗವಾಗಿ ನಾವು ಬದಲಾಗಿದ್ದೇವೆ.

ಇದು ನಿಜಕ್ಕೂ ಒಂದು ಸಾಂಸ್ಕೃತಿಕ ದುರಂತ. ಸಮಾಜವು ವಿಭಜನೆಯಾಗುತ್ತಿರುವುದಕ್ಕೆ, ಸಂಬಂಧಗಳು ಒಡೆಯುತ್ತಿರುವುದಕ್ಕೆ, ಸಣ್ಣಪುಟ್ಟ ವಿಚಾರಗಳಿಗೂ ಹಿಂಸೆ ಭುಗಿಲೇಳುತ್ತಿರುವುದಕ್ಕೆ ಈ ಅಲ್ಗಾರಿದಮ್ಗಳು ಪ್ರಮುಖ ಕಾರಣವಾಗಿವೆ. ನಮ್ಮನ್ನು ಪರಸ್ಪರ ಅರ್ಥಮಾಡಿಕೊಳ್ಳಲು ಬಿಡದೆ, ನಮ್ಮ ಮತ್ತು ವಾಸ್ತವದ ನಡುವೆ ಅಗೋಚರವಾದ, ಆದರೆ ಭೇದಿಸಲಾಗದ ಗೋಡೆಗಳನ್ನು ಇವು ನಿರ್ಮಿಸುತ್ತಿವೆ.

ಈ ಗುಲಾಮಗಿರಿಯಿಂದ ನಾವು ಹೊರಬರಬೇಕಾಗಿದೆ. ಅಜ್ಞಾನ ಇಂದು ಕೇವಲ ಮಾಹಿತಿ ಕೊರತೆಯಲ್ಲ; ಅದು ನಮ್ಮದೇ ಆದ್ಯತೆಗಳ ದಾರಿ ತಪ್ಪಿದ ಫಲಿತಾಂಶ. ನಮ್ಮ ಫೀಡ್ ಅನ್ನು ನಾವೇ ನಿಯಂತ್ರಿಸುವ ಇಚ್ಛಾಶಕ್ತಿ ನಮಗಿಲ್ಲದಿದ್ದರೆ, ನಾವು ಆಲೋಚಿಸುತ್ತಿಲ್ಲ, ಬದಲಾಗಿ ಕೇವಲ ಪ್ರೋಗ್ರಾಮ್ ಮಾಡಲ್ಪಟ್ಟ ಯಂತ್ರಗಳ ಕೈಗೊಂಬೆಗಳಾಗಿ ವರ್ತಿಸುತ್ತಿದ್ದೇವೆ ಎಂದರ್ಥ.

ಈ ಮಾಯಾಜಾಲದಿಂದ ಹೊರಬರುವ ಮೊದಲ ಹೆಜ್ಜೆ ಎಂದರೆ ಅರಿವು. ನಮ್ಮ ಫೋನ್ ನಮ್ಮ ಪರವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎನ್ನುವ ಸತ್ಯವನ್ನು ಒಪ್ಪಿಕೊಳ್ಳುವುದು. ನಮ್ಮ ನಂಬಿಕೆಗಳಿಗೆ ವಿರುದ್ಧವಾದ ಪತ್ರಿಕೆಗಳನ್ನು ಓದುವುದು, ನಮ್ಮ ವಿಚಾರಧಾರೆಗೆ ಒಗ್ಗದ ವ್ಯಕ್ತಿಗಳ ಅಭಿಪ್ರಾಯಗಳನ್ನು ಮುಕ್ತ ಮನಸ್ಸಿನಿಂದ ಕೇಳಿಸಿಕೊಳ್ಳುವ ಸಹನೆ ಬೆಳೆಸಿಕೊಳ್ಳುವುದು ಇಂದಿನ ತುರ್ತು.

ಅಲ್ಗಾರಿದಮ್ಗಳು ನಮಗೆ ನೀಡುವ ‘ರೆಕಮೆಂಡೇಶನ್’ಗಳನ್ನು ಕುರುಡಾಗಿ ಒಪ್ಪಿಕೊಳ್ಳುವುದನ್ನು ನಿಲ್ಲಿಸಬೇಕು. ನಮಗೆ ಏನು ಬೇಕು ಎಂಬುದನ್ನು ನಾವೇ ಹುಡುಕುವ, ಜಾಲಾಡುವ ಹಳೆಯ ಅಭ್ಯಾಸವನ್ನು ಮತ್ತೆ ರೂಢಿಸಿಕೊಳ್ಳಬೇಕು. ಕೃತಕ ಬುದ್ಧಿಮತ್ತೆ ನಮಗೆ ಜ್ಞಾನದ ದಾರಿ ತೋರುವ ಒಂದು ಸಾಧನವಾಗಬೇಕೇ ಹೊರತು, ನಮ್ಮನ್ನೇ ನಿಯಂತ್ರಿಸುವ ಯಜಮಾನನಾಗಬಾರದು.
.ಟೆಕ್ ಥೆರಪಿ: ಹುಡುಕಾಟದ ಹೊಸ ಹಾದಿಯಲ್ಲಿ ಸಿಕ್ಕ ಎಐ ಗೆಳೆಯ!.ಟೆಕ್ ಥೆರಪಿ: ನಮ್ಮನ್ನೇ ‘ಉತ್ಪನ್ನ’ವಾಗಿಸುವ ಟೆಕ್ ದೈತ್ಯರ ಅಸಲಿಯತ್ತು ಗೊತ್ತೇ?.
ಡಿಜಿಟಲ್ ಜಗತ್ತಿನಲ್ಲಿ ಬದುಕುಳಿಯಲು ಇಂದು ಬೇಕಾಗಿರುವುದು ಕೇವಲ ಅಗ್ಗದ ಇಂಟರ್ನೆಟ್ ಕನೆಕ್ಷನ್ ಅಲ್ಲ, ದೃಢವಾದ ವಿವೇಚನೆ. ಅಜ್ಞಾನದ ಗುಳ್ಳೆಯನ್ನು ಒಡೆದು ಹೊರಬರುವುದು ಸುಲಭದ ಕೆಲಸವಲ್ಲ. ಅದು ಅಹಿತಕರವಾಗಿರುತ್ತದೆ, ನಮ್ಮ ನಂಬಿಕೆಗಳನ್ನು ಅಲುಗಾಡಿಸುತ್ತದೆ. ಆದರೆ ಸತ್ಯದ ದರ್ಶನವಾಗುವುದು ಆ ಅಹಿತಕರ ವಾತಾವರಣದಲ್ಲಿಯೇ ಹೊರತು, ನಮಗೆ ಆರಾಮದಾಯಕವಾಗಿರುವ ಸುಳ್ಳಿನ ಗುಳ್ಳೆಯೊಳಗಲ್ಲ.

ತಂತ್ರಜ್ಞಾನ ಎಂಬುದು ಒಂದು ಕನ್ನಡಿ ಮತ್ತು ಭೂತಗನ್ನಡಿ ಎರಡೂ ಹೌದು. ಅದು ನಮ್ಮೊಳಗಿರುವ ಒಳಿತು-ಕೆಡುಕುಗಳನ್ನು ಪ್ರತಿಫಲಿಸುತ್ತದೆ ಮತ್ತು ಅದನ್ನೇ ದೊಡ್ಡದಾಗಿ ತೋರಿಸುತ್ತದೆ. ನಿಮ್ಮ ಪರದೆಯ ಮೇಲೆ ಮೂಡುವ ಮುಂದಿನ ವಿಡಿಯೋ ಅಥವಾ ಪೋಸ್ಟ್ ಅನ್ನು ಒಮ್ಮೆ ಪ್ರಶ್ನಿಸಿ ನೋಡಿ. ಈ ಅಲ್ಗಾರಿದಮ್ನ ಮಾಯಾಜಾಲವನ್ನು ಛೇದಿಸಿ ವಾಸ್ತವದ ಜಗತ್ತಿಗೆ ಮರಳುವುದು ಪ್ರಜ್ಞಾವಂತ ಮನುಷ್ಯನಾಗಿ ನಮ್ಮೆಲ್ಲರ ಕರ್ತವ್ಯ. ಅಜ್ಞಾನದ ಗುಳ್ಳೆಯಲ್ಲಿ ತಾತ್ಕಾಲಿಕ ನೆಮ್ಮದಿಯಿದೆ ನಿಜ, ಆದರೆ ಅಲ್ಲಿ ಸ್ವಾತಂತ್ರ್ಯವಿಲ್ಲ. ಆ ಸ್ವಾತಂತ್ರ್ಯವನ್ನು ಆಯ್ದುಕೊಳ್ಳುವ ನಿರ್ಧಾರ ನಿಮ್ಮದೇ ಬೆರಳ ತುದಿಯಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.