ಮಂಗಳವಾರ, ಸೆಪ್ಟೆಂಬರ್ 21, 2021
28 °C

ಭಾರತದಲ್ಲಿ ಥಾಮ್ಸನ್ ಪ್ರೀಮಿಯಂ ವಾಷಿಂಗ್ ಮೆಷಿನ್: ಆರಂಭಿಕ ಬೆಲೆ ₹11,499

ಪ್ರಜಾವಾಣಿ ವೆಬ್‌ ಡೆಸ್ಕ್ Updated:

ಅಕ್ಷರ ಗಾತ್ರ : | |

10.5 ಕೆ.ಜಿ. ಸಾಮರ್ಥ್ಯದ ಫ್ರಂಟ್‌ ಲೋಡ್‌ ವಾಷಿಂಗ್‌ ಮೆಶಿನ್‌

ಬೆಂಗಳೂರು: ಯುರೋಪ್‌ನ ಎಲೆಕ್ಟ್ರಾನಿಕ್‌ ಬ್ರ್ಯಾಂಡ್‌ ಥಾಮ್ಸನ್‌ ಇದೀಗ ಭಾರತದಲ್ಲಿ ಕೈಗೆಟುಕುವ ದರದಲ್ಲಿ ಪೂರ್ಣ ಆಟೊಮ್ಯಾಟಿಕ್‌ ಪ್ರೀಮಿಯಂ ವಾಷಿಂಗ್‌ ಮೆಶಿನ್‌ಗಳನ್ನು ಬಿಡುಗಡೆ ಮಾಡಿದೆ.

ಹೊಸ ಪ್ರೀಮಿಯಂ ವಾಷಿಂಗ್‌ ಮೆಶಿನ್‌ ಆರಂಭಿಕ ಬೆಲೆ ₹11,499 ನಿಗದಿಯಾಗಿದೆ. 6.5 ಕೆ.ಜಿ., 7.5 ಕೆ.ಜಿ. ಟಾಪ್‌ ಲೋಡ್‌ ಮೆಶಿನ್‌ಗಳಿಗೆ ಕ್ರಮವಾಗಿ  ₹11,499 ಮತ್ತು ₹12,999 ಬೆಲೆ ಇದೆ. ಇನ್ನೂ10.5 ಕೆ.ಜಿ. ಸಾಮರ್ಥ್ಯದ ಫ್ರಂಟ್‌ ಲೋಡ್‌ ವಾಷಿಂಗ್‌ ಮೆಶಿನ್‌ ಬೆಲೆ ₹22,999 ನಿಗದಿಯಾಗಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಖರೀದಿಗೆ ಲಭ್ಯವಿದೆ.

ತುಕ್ಕುರಹಿತ ಕವಚನ್ನು ಥಾಮ್ಸನ್‌ ವಾಷಿಂಗ್‌ ಮೆಶಿನ್‌ಗಳು ಹೊಂದಿವೆ. ಹೆಚ್ಚು ಅಲುಗಾಡದಂತೆ ಹಾಗೂ ವೈಬ್ರೇಟ್‌ ಆಗದ ರೀತಿಯಲ್ಲಿ ಸ್ಮಾರ್ಟ್‌ಮೋಟಾರ್‌ ವಿನ್ಯಾಸಗೊಳಿಸಲಾಗಿದೆ. ಬಟ್ಟೆಗಳ ತೂಕ ಗಮನಿಸುತ್ತದೆ ಹಾಗೂ ಚೈಲ್ಡ್‌ ಲಾಕ್‌, ಟಬ್‌ ಶುಚಿಗೊಳಿಸಲು ಏರ್‌ ಡ್ರೈ ಆಯ್ಕೆಗಳನ್ನು ಒಳಗೊಂಡಿದೆ. 5 ವರ್ಷ ಮೋಟಾರ್‌ ವಾರೆಂಟಿ ಹಾಗೂ 2 ವರ್ಷ ಕಾಂಪ್ರೆಹೆನ್ಸೀವ್ ವಾರೆಂಟಿ ನೀಡಲಾಗುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು