6

ಪವರ್ ಬ್ಯಾಂಕ್ ಬಳಕೆ ಬಗ್ಗೆ ಹುಷಾರಾಗಿರಿ

Published:
Updated:

ಪ್ರಯಾಣದ ವೇಳೆ ಮೊಬೈಲ್ ಚಾರ್ಜ್ ಮಾಡಲು ಪವರ್ ಬ್ಯಾಂಕ್ ಅತ್ಯಗತ್ಯ. ಪವರ್ ಬ್ಯಾಂಕ್ ಬಳಕೆ ಸುಲಭ ಆಗಿದ್ದರೂ ನಾವು ಬಳಸುವ ಪವರ್ ಬ್ಯಾಂಕ್ ಸುರಕ್ಷಿತ ಹಾಗೂ ಉತ್ತಮ ಗುಣಮಟ್ಟದ್ದಾಗಿದೆ ಎಂಬುದನ್ನು ಖಾತರಿ ಪಡಿಸಿಕೊಳ್ಳುವುದು ಮುಖ್ಯ. ಅಗ್ಗದ ಪವರ್ ಬ್ಯಾಂಕ್ ಗಳು ಎಲ್ಲೆಂದರಲ್ಲಿ ಲಭ್ಯವಾಗಿದ್ದರೂ ಇವುಗಳನ್ನು ಬಳಸಿದಿರುವುದೇ ಒಳ್ಳೆಯದು.

ಪವರ್ ಬ್ಯಾಂಕ್ ಖರೀದಿಸುವಾಗ ಗಮನಿಸಬೇಕಾದ ಸಂಗತಿಗಳು
ಬ್ಯಾಟರಿ ಗುಣಮಟ್ಟ
ಪವರ್ ಬ್ಯಾಂಕ್ ಕಾರ್ಯಪ್ರವೃತ್ತವಾಗಬೇಕಾದರೆ ಉತ್ತಮ ಗುಣಮಟ್ಟದ ರೀಚಾರ್ಚ್ ಬ್ಯಾಟರಿಗಳ ಅಗತ್ಯವಿದೆ. ಹೆಚ್ಚಿನ ಕಂಪೆನಿಗಳು ಪವರ್ ಬ್ಯಾಂಕ್ ಗಳಲ್ಲಿ Lithium Ion , lithium-polymer ಬ್ಯಾಟರಿಗಳನ್ನು ಬಳಸುತ್ತವೆ. ಇವುಗಳ ಬೆಲೆಯೂ ಅಧಿಕವಾಗಿರುತ್ತದೆ. ಕೆಲವೊಂದು ಕಂಪನಿಗಳು ಕಡಿಮೆ ಗುಣಮಟ್ಟದ Lithium Ion ಬ್ಯಾಟರಿಗಳನ್ನು ಬಳಸುತ್ತವೆ. ಅಗ್ಗದ ಪವರ್ ಬ್ಯಾಂಕ್ ಗಳಲ್ಲಿ ಇಂಥಾ ಬ್ಯಾಟರಿಗಳನ್ನು ಬಳಸುತ್ತಿದ್ದು, ಇವುಗಳ ಬಳಕೆ ಸುರಕ್ಷಿತವಲ್ಲ.

ಅಗ್ಗದ ಪವರ್ ಬ್ಯಾಂಕ್ ಬೇಡವೇ ಬೇಡ
ಅಗ್ಗದ ಪವರ್ ಬ್ಯಾಂಕ್ ಗಳು ಸ್ಫೋಟಗೊಳ್ಳುವ ಸಾಧ್ಯತೆಯೂ ಇರುತ್ತವೆ. ಸರಿಯಾದ ಸರ್ಕ್ಯೂಟ್ ವ್ಯವಸ್ಥೆ ಇಲ್ಲದೇ ಇದ್ದರೆ ಬ್ಯಾಟರಿ ಮೂಲಕ ವೋಲ್ಟೇಜ್ ಪ್ರವಹಿಸುವಾಗ ಶಾರ್ಟ್ ಸರ್ಕ್ಯೂಟ್ ಆಗುವ ಸಾಧ್ಯತೆ ಇರುತ್ತದೆ. ಅಗ್ಗದ ಪವರ್ ಬ್ಯಾಂಕ್ ಗಳಲ್ಲಿ ಸರ್ಕ್ಯೂಟ್ ಸರಿ ಇಲ್ಲದೇ ಇದ್ದರೆ ಅಪಾಯ ಉಂಟಾಗುವ ಸಾಧ್ಯತೆಯೂ ಇರುತ್ತದೆ.

ಸರಿಯಾದ ಉಷ್ಣತೆ
ಸರಿಯಾದ ಉಷ್ಣತೆಯಲ್ಲಿ ಮಾತ್ರ ಪವರ್ ಬ್ಯಾಂಕ್ ಬಳಕೆ ಮಾಡುವುದು ಒಳಿತು. ಅತಿಯಾದ ಉಷ್ಣತೆ ಇವುಗಳಿಗೆ ಹಾನಿಯನ್ನುಂಟು ಮಾಡುತ್ತದೆ. ನೀರಿನಲ್ಲಿ ಒದ್ದೆಯಾಗದಂತೆ ಅಥವಾ ಬಿಸಿಲಿನಲ್ಲಿ ಒಣಗಿಸುವುದನ್ನು ಮಾಡಲೇ ಬೇಡಿ. ಅಧಿಕ ಉಷ್ಣತೆ ಇರುವ ಪ್ರದೇಶಗಳಲ್ಲಿ ಇವುಗಳನ್ನು ಇಡುವುದು ಒಳ್ಳೆಯದಲ್ಲ . ಫುಲ್ ಚಾರ್ಜ್ ಆಗಿದ್ದರೆ ಸ್ವಿಚ್ ಆಫ್ ಮಾಡಿ ಡಿಸ್ ಕನೆಕ್ಟ್ ಮಾಡಿಡಿ,. ಪವರ್ ಬ್ಯಾಂಕ್ ಗಳನ್ನು ಅಧಿಕ ಹೊತ್ತು ಚಾರ್ಜ್ ಮಾಡುವ ಅಗತ್ಯವೂ ಇಲ್ಲ

ಸಲಹೆ 
ಪವರ್ ಬ್ಯಾಂಕ್ ಗೆ ಸರಿಯಾದ ಚಾರ್ಜರ್ ಮಾತ್ರ ಬಳಸಿ
ನಿರ್ದಿಷ್ಟ ಸಮಯ ಮಾತ್ರ ಪವರ್ ಬ್ಯಾಂಕ್ ಚಾರ್ಜ್ ಮಾಡಿಡಿ
ಪವರ್ ಬ್ಯಾಂಕ್ ಗೆ ಸಮಸ್ಯೆ ಬಂದರೆ ಅದನ್ನು ಬಳಸುವಾಗ ಎಚ್ಚರಿಕೆ ಬೇಕು
ತೇವಾಂಶ ಇರದಂತೆ ನೋಡಿಕೊಳ್ಳಿ
ಪಾಕೆಟ್ ನಲ್ಲಿರಿಸಿ ಚಾರ್ಜ್ ಮಾಡಬೇಡಿ
ಶಾಖ ಜಾಸ್ತಿ ಇರುವಲ್ಲಿ ಚಾರ್ಜರ್ ಇಡಬೇಡಿ

ಬರಹ ಇಷ್ಟವಾಯಿತೆ?

 • 26

  Happy
 • 1

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !