ಶುಕ್ರವಾರ, ಫೆಬ್ರವರಿ 26, 2021
19 °C

ಜೂನ್‌ನಲ್ಲಿ ಬರುತ್ತಿವೆ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಗೂಗಲ್ ಪಿಕ್ಸಲ್‌, ಒನ್‌ಪ್ಲಸ್‌ 7 ಪ್ರೊ, ಹಾನರ್ 20, ಆ್ಯಕ್ಸಸ್‌ ಜೆನ್‌ಫೋನ್‌ 6, ಓಪ್ಪೊ ರೆನೊ 10ಎಕ್ಸ್‌ ಜೂಮ್, ರೆಡ್‌ಮೀ ನೋಟ್‌ 7ಎಸ್‌, ರೆಡ್‌ಮೀ ಕೆ20 ಸೇರಿದಂತೆ ವಿವಿಧ ಕಂಪೆನಿಗಳ ಹೊಸ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಗೆ ಮೇ ತಿಂಗಳು ಸಾಕ್ಷಿಯಾಗಿತ್ತು. ಇದೀಗ ಸ್ಯಾಮ್‌ಸಂಗ್‌, ನೋಕಿಯಾ, ಶಿಯೋಮಿ ಕಂಪನಿಗಳ ಹೊಸ ವಿನ್ಯಾಸದ ಸ್ಮಾರ್ಟ್‌ಪೋನ್‌ಗಳ ಬಿಡುಗಡೆಗೆ ಜೂನ್‌ ವೇದಿಕೆಯಾಗಲಿದೆ. 

ಈ ತಿಂಗಳು ಬಿಡುಗಡೆಯಾಗಲಿರುವ ಹೊಸ ಸ್ಮಾರ್ಟ್‌ಫೋನ್‌ಗಳ ಮಾಹಿತಿಯನ್ನು ’ಪ್ರಜಾವಾಣಿ’ ಇಲ್ಲಿ ನೀಡಿದೆ.

ನೋಕಿಯಾ 9...

 ನೋಕಿಯಾ 9 ಸ್ಮಾರ್ಟ್‌ ಪೋನ್‌ ನಿರೀಕ್ಷಿತವಾಗಿ ಜೂನ್‌ 6ರಂದು ನವದೆಹಲಿಯಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಜೂನ್‌ ಅಂತ್ಯದ ವೇಳೆಗೆ ದೇಶಿಯ ಮಾರುಕಟ್ಟೆಯಲ್ಲಿ ಈ ಫೋನ್‌ಗಳು ಗ್ರಾಹಕರಿಗೆ ಲಭ್ಯವಾಗಲಿವೆ. ಕಳೆದ ಫೆಬ್ರುವರಿಯಲ್ಲಿ ಬಾರ್ಸಿಲೋನಾದಲ್ಲಿ ನಡೆದ ವಿಶ್ವ ಮೊಬೈಲ್‌ ಕಾಂಗ್ರೆಸ್‌ ಸಮಾವೇಶದಲ್ಲಿ ನೋಕಿಯಾ 9 ಮೊಬೈಲ್‌ ಗಮನ ಸೆಳೆದಿತ್ತು. ಮೊಬೈಲ್‌ ಮೂಲಕ ಫೋಟೊಗ್ರಾಫಿ ಮಾಡುವವರಿಗೆ ಈ ಮೊಬೈಲ್ ಹೇಳಿ ಮಾಡಿಸಿದಂತಿದೆ. ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮೆರಾ ವೈಶಿಷ್ಟ್ಯಗಳನ್ನು ಹೊಂದಿರುವುದು ಈ ಮೊಬೈಲ್‌ನ ವಿಶೇಷ.  

ಅಡೋಬ್ ಕಂಪನಿಯ ನುರಿತ ತಜ್ಞರ ತಂಡ ನೋಕಿಯಾ 9 ಪ್ಯೂರ್‌ವ್ಯೂ ಕ್ಯಾಮೆರಾವನ್ನು ವಿನ್ಯಾಸ ಮಾಡಿದೆ. ಹೈ ಡೈನಾಮಿಕ್‌ ಗುಣಮಟ್ಟದ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಇದರಲ್ಲಿದೆ. ಆರ್‌ಜಿಬಿ ಕಲರ್ಸ್‌ ಸೆನ್ಸಾರ್, ಝೆಡ್‌ಇಐಎಸ್‌ಎಸ್‌ 12 ಮೆಗಾ ಪಿಕ್ಸಲ್‌ ಡಿಜಿಟಲ್‌ ಕ್ಯಾಮೆರಾ ಈ ಫೋನಿನ ವಿಶೇಷ. 

ವೈಶಿಷ್ಟ್ಯಗಳು

ಪರದೆ: 5,99 ಇಂಚು, ಕ್ಯೂಎಚ್‌ಡಿ+ಪೊಲೆಡ್‌ ತಂತ್ರಜ್ಞಾನ, ಗೊರಿಲ್ಲಾ ಗ್ಲಾಸ್‌ (5 ಶಿಲ್ಡ್‌), 2ಕೆ ಎಚ್‌ಡಿ ರೆಸಲ್ಯೂಷನ್‌. 

ನಿರೋಧಕ ತಂತ್ರಜ್ಞಾನ: ನೀರು ಹಾಗೂ ದೂಳಿನ ಕಣಗಳಿಂದ ರಕ್ಷಣೆ

ಪ್ರೊಸೆಸರ್‌: ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 845 ಪ್ರೊಸೆಸರ್ ಆಕ್ಟಾ ಕೋರ್‌ 6 ಗಿಗಾಹರ್ಟ್ಸ್‌

ಒಎಸ್‌: ಆಂಡ್ರಾಯ್ಡ್‌ ಪೀ ಒಎಸ್‌ ಜತೆಗೆ ಗೂಗಲ್‌ ಅಸಿಸ್ಟೆಂಟ್‌

ಕ್ಯಾಮೆರಾ: 12 ಎಂಪಿ ಝೆಡ್‌ಇಐಎಸ್‌ಎಸ್‌ ಹಾಗೂ ಆರ್‌ಜಿಬಿ ಕಲರ್ಸ್‌ ಸೆನ್ಸಾರ್ , 20 ಎಂಪಿ ಫ್ರಂಟ್‌

ಬ್ಯಾಟರಿ: 3,200 ಎಂಎಎಚ್‌, ಯುಎಸ್‌ಬಿ ’ಸಿ’ ಪೋರ್ಟ್‌ ಚಾರ್ಜಿಂಗ್ ಹಾಗೂ ಕ್ಯೂಐ ವೈಯರ್ಲೇಸ್‌ ಚಾರ್ಜಿಂಗ್ ಲಭ್ಯತೆ

ಸೆಕ್ಯೂರಿಟಿ: ಫಿಂಗರ್ ಪ್ರಿಂಟ್‌ ಸೆನ್ಸಾರ್

ಬೆಲೆ: ₹ 50,000

ಇದನ್ನೂ ಓದಿ:  ಫೇಶಿಯಲ್ ರೆಕಗ್ನೀಷನ್

ಒನ್‌ಪ್ಲೆಸ್‌ 7...

 ಚೀನಾದ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆ ಒನ್‌ಪ್ಲಸ್ ಹೊಸ ವೈಶಿಷ್ಟ್ಯತೆಗಳನ್ನು ಒಳಗೊಂಡಿರುವ ಒನ್‌ಪ್ಲಸ್ 7 ಹೊಸ ಪ್ರೀಮಿಯಂ ಮೊಬೈಲ್‌ ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಇದೇ ಜೂನ್‌ 4 ರಿಂದ ಮಾರುಕಟ್ಟೆಯಲ್ಲಿ ದೊರೆಯಲಿದೆ. 

ಫ್ಲ್ಯೂಯಿಡ್ ಅಮೊಎಲ್‌ಇಡಿ ತಂತ್ರಜ್ಞಾನ ಹೊಂದಿರುವ ಎಚ್‌ಡಿ+ 6.41 ಇಂಚಿನ ಪರದೆ, ಆರ್‌ಜಿಬಿ ಮತ್ತು ಡಿಸಿಐ 3 ಕಲರ್ ಗ್ಯಾಮೆಟ್‌, 2.5ಡಿ ಗೊರಿಲ್ಲಾ ಗ್ಲಾಸ್‌,  19.5:9 ಆ್ಯಸ್‌ಪೆಕ್ಟ್ ರೆಶಿಯೊ ತಂತ್ರಜ್ಞಾನವನ್ನು ಹೊಂದಿದೆ. 

16 ಪಿಕ್ಸಲ್ ಗುಣಮಟ್ಟದ ಪಾಪ್ ಅಪ್ ಕ್ಯಾಮೆರಾವನ್ನು ಸೆಲ್ಫಿ ತೆಗೆಯುವುದಕ್ಕೆ ವಿಶೇಷವಾಗಿ ರೂಪಿಸಲಾಗಿದೆ. ಹಿಂಬದಿ ಮೂರು ಕ್ಯಾಮೆರಾಗಳಿದ್ದು, ಇವುಗಳಿಗೆ 7 ಪಿಲೆನ್ಸ್ ಒದಗಿಸಲಾಗಿದೆ. ಮಧ್ಯದಲ್ಲಿ ಇರುವ ಕ್ಯಾಮೆರಾ 48 ಮೆಗಾ ಪಿಕ್ಸೆಲ್, ಕೊನೆಯಲ್ಲಿ ಇರುವ ಕ್ಯಾಮೆರಾ 8 ಮೆಗಾ ಪಿಕ್ಸೆಲ್, ಮೇಲಿನ ಕ್ಯಾಮೆರಾ16 ಮೆಗಾಪಿಕ್ಸೆಲ್ ಹೊಂದಿದೆ.

 7 ಎನ್ಎಂ ಚಿಪ್ ಸೆಟ್ ಇರುವ ಕ್ವಾಲ್ಕಮ್ 855 ಆಕ್ಟಾ ಕೋರ್‌ ಪ್ರೊಸೆಸರ್, 3700 ಎಂಎಎಚ್ ಬ್ಯಾಟರಿ ಬಹುಬೇಗನ್‌ ಚಾರ್ಜ್ ಆಗಲಿದೆ. ಗೇಮಿಂಗ್ ಅನುಭವ ವಿಶಿಷ್ಟವಾಗಿಸಲು ಡೋಲ್ಬಿ ಅಟಾಮ್ಸ್ ಗುಣಮಟ್ಟದ ಎರಡು ಸ್ಪೀಕರ್‌ಗಳಿವೆ. 6ಜಿಬಿ/8ಜಿಬಿ ರ‍್ಯಾಮ್‌ ಹಾಗೂ 128ಜಿಬಿ/256 ಜಿಬಿ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. 6ಜಿಬಿ ರ‍್ಯಾಮ್‌ ಸಾಮರ್ಥ್ಯದ ಫೋನಿನ ಬೆಲೆ ₹ 32,999 ಮತ್ತು 8ಜಿಬಿ ರ‍್ಯಾಮ್‌ ಸಾಮರ್ಥ್ಯದ ಮೊಬೈಲ್‌ ಬೆಲೆ ₹ 37,999.  

 ಇದನ್ನೂ ಓದಿ:  ಟೆಕ್ನೊ ಕ್ಯಾಮನ್‌ ಐ4

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ40...

ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಸರಣಿಯ ಎಂ30, ಎಂ20 ಹಾಗೂ ಎಂ10 ಮೊಬೈಲ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ಯಶಸ್ವಿಯಾದ ಬಳಿಕ ಸ್ಯಾಮ್‌ಸಂಗ್‌ ಕಂಪನಿಯು ಇದೇ ಸರಣಿಯ ಎಂ40 ಸ್ಮಾರ್ಟ್‌ಪೋನ್‌ ಬಿಡುಗಡೆಗೆ ಸಿದ್ಧತೆ ಮಾಡಿಕೊಂಡಿದೆ. ಹಲವು ವೈಶಿಷ್ಟ್ಯಗಳನ್ನು ಹೊಂದಿರುವ ಈ ಮೊಬೈಲ್‌ ಭಾರತೀಯ ಮಾರುಕಟ್ಟೆಯಲ್ಲಿ ಜೂನ್‌ 11ರಂದು ಬಿಡುಗಡೆಯಾಗಲಿದೆ. 

ಇತ್ತೀಚೆಗೆ ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ ಎಂ40 ಫೋನಿನ ವೈಶಿಷ್ಟ್ಯಗಳನ್ನು ಅನಾವರಣಮಾಡಿದೆ. ಗ್ಯಾಲಕ್ಸಿ ಎಸ್‌10 ಸರಣಿಯ ಫ್ಯಾಗ್‌ಶಿಪ್ ಪರದೆಯನ್ನೇ ಎಂ40 ಒಳಗೊಂಡಿದೆ. ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 675 ಆಕ್ಟಾ ಕೋರ್‌ ಪ್ರೊಸೆಸರ್ ಹಾಗೂ ಮೂರು ಕ್ಯಾಮೆರಾಗಳಿವೆ. 5000 ಎಂಎಎಚ್ ಬ್ಯಾಟರಿಯನ್ನು ಹೊಂದಿರುವ ಈ ಮೊಬೈಲ್‌ ಬೆಲೆ ₹17000 ದಿಂದ ₹22000 ನಡುವೆ ಇರಲಿದೆ. 

ಪೊಕೊ ಎಫ್ 2..

 ಚೀನಾದ ಶಿಯೋಮಿ ಕಂಪನಿ 'ಪೊಕೊ ಎಫ್ 2' ಸ್ಮಾರ್ಟ್‌ಫೋನ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಮಧ್ಯಮ ವರ್ಗದ ಜನಪ್ರಿಯ ಗೇಮಿಂಗ್ ಸ್ಮಾರ್ಟ್‌ಪೋನ್ 'ಪೊಕೊ ಎಫ್ 1 ಫೋನಿನ ಮಾದರಿಯಲ್ಲೇ ಪೊಕೊ ಎಫ್ 2 ಇರಲಿದ್ದು ’ರೆಡ್ಮಿ ಕೆ20’ ಫೋನಿನ ವೈಶಿಷ್ಟ್ಯಗಳನ್ನು ಹೊಂದಿದೆ ಎನ್ನಲಾಗಿದೆ.

ಸೆಲ್ಫಿ ಮತ್ತು ಫೋಟೊ ಪ್ರಿಯರಿಗಾಗಿಯೇ 'ಪೊಕೊ ಎಫ್ 2’ ಅನ್ನು ವಿನ್ಯಾಸ ಮಾಡಲಾಗಿದೆ. ಫ್ಲ್ಯೂಯಿಡ್ ಅಮೊಎಲ್‌ಇಡಿ ತಂತ್ರಜ್ಞಾನ ಹೊಂದಿರುವ ಎಚ್‌ಡಿ+ 6.41 ಇಂಚಿನ ಪರದೆ, ಫಿಂಗರ್‌ ಪ್ರಿಂಟ್‌ ಸೆನ್ಸಾರ್‌,  ಗೊರಿಲ್ಲಾ ಗ್ಲಾಸ್‌ (5 ಶಿಲ್ಡ್‌) ಹಾಗೂ 3ಡಿ ಗ್ಲಾಸ್‌ ಕವರ್‌, ಹಾಗೂ ಎಲ್‌ಇಡಿ ಫ್ಲ್ಯಾಶ್‌ ತಂತ್ರಜ್ಞಾನವಿದೆ.

ಪೊಕೊ ಎಫ್ 2 ಪೋನಿನಲ್ಲಿ ಒಟ್ಟು 3 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. 16 ಪಿಕ್ಸಲ್ ಗುಣಮಟ್ಟದ ಸೆಲ್ಫಿ ಪಾಪ್ ಅಪ್ ಕ್ಯಾಮೆರಾ, ಹಿಂಬದಿಯಲ್ಲಿನ ಮಧ್ಯದ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಇದೆ, ಆಲ್ಟ್ರಾ ವೈಡ್‌ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಹಾಗೂ ಮೇಲಿನ ಕ್ಯಾಮೆರಾ 8 ಮೆಗಾಪಿಕ್ಸೆಲ್ ಇರಲಿದೆ. 

ಆ್ಯಂಡ್ರಾಯಿಡ್‌ ಪೀ ಎಂಐಯುಐ 10 ಆಪರೇಟಿಂಗ್ ಸಿಸ್ಟಂನ ಈ ಮೊಬೈಲ್ 6ಜಿಬಿ/8ಜಿಬಿ ರ‍್ಯಾಮ್‌, 64ಜಿಬಿ/128ಜಿಬಿ/256ಜಿಬಿ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದ್ದು 4000 ಎಂಎಎಚ್ ಬ್ಯಾಟರಿಯು ಬಹುಬೇಗನ್‌ ಚಾರ್ಜ್ ಆಗಲಿದೆ.

ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 730 ಆಕ್ಟಾ ಕೋರ್‌ ಪ್ರೊಸೆಸರ್ ಹೊಂದಿರುವ ಈ ಮೊಬೈಲ್‌ ಎರಡು ಮಾದರಿಗಳಲ್ಲಿ ಮಾರುಕಟ್ಟೆಗೆ ಬರಲಿದೆ. 6ಜಿಬಿ ರ‍್ಯಾಮ್‌ ಸಾಮರ್ಥ್ಯದ ಈ ಫೋನಿನ ಬೆಲೆ ₹16,000 ಹಾಗೂ 8ಜಿಬಿ ರ‍್ಯಾಮ್‌ ಸಾಮರ್ಥದ ಬೆಲೆ ₹20,000 ಇರಲಿದೆ.

ಒಪ್ಪೊ ರೆನೊ ಸರಣಿ ಫೋನ್‌ಗಳು...

ಸೆಲ್ಫಿ ಫೋನ್‌ಗಳೆಂದೇ ಜನಪ್ರಿಯವಾಗಿರುವ ಒಪ್ಪೊ ಸ್ಮಾರ್ಟ್‌ಫೋನ್‌ಗಳು ಜಾಗತಿಕವಾಗಿ ಯುವಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. 

ಒಪ್ಪೊ ಕಂಪನಿಯ ಸಬ್‌ ಬ್ರ್ಯಾಂಡ್‌ ಆಗಿರುವ ರೆನೊ ಕಂಪೆನಿಯ ರೆನೊ ಮೊಬೈಲ್‌ಗಳು ಇತ್ತೀಚಿಗೆ ಬಿಡುಗಡೆಗೊಂಡು ಚೀನಾದಲ್ಲಿ ಜನಪ್ರಿಯವಾಗಿವೆ. ರೆನೊ ಸರಣಿ ಮೊಬೈಲ್‌ಗಳ ಜನಪ್ರಿಯತೆ ಬೆನ್ನಲೇ 'ರೆನೊ 10X ಝೂಮ್‌’ ಹೆಸರಿನ ಹೊಸ ಸ್ಮಾರ್ಟ್‌ಫೋನ್‌ ಜೂನ್‌ 7ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.  

'ರೆನೊ 10X ಝೂಮ್‌ ಸ್ಮಾರ್ಟ್‌ಫೋನ್‌ ಫ್ಲ್ಯೂಯಿಡ್ ಅಮೊಎಲ್‌ಇಡಿ ತಂತ್ರಜ್ಞಾನದ 6.55 ಇಂಚಿನ ಪರದೆಯನ್ನು ಹೊಂದಿದೆ. 93.1 ಸ್ಕ್ರೀನ್‌ ರೆಶಿಯೋ ಪರದೆಗೆ ಗೊರಿಲ್ಲಾ ಗ್ಲಾಸ್‌ (6 ಶಿಲ್ಡ್‌) ಅಳವಡಿಸಲಾಗಿದೆ. 

16 ಪಿಕ್ಸಲ್ ಗುಣಮಟ್ಟದ ಸೆನ್ಸಾರ್ ಕ್ಯಾಮೆರಾ, ಹಿಂಬದಿಯಲ್ಲಿರುವ ಮಧ್ಯದ ಕ್ಯಾಮೆರಾ 48 ಮೆಗಾ ಪಿಕ್ಸೆಲ್, ಆಲ್ಟ್ರಾ ವೈಡ್‌ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಇರಲಿದೆ. ಡಾಲ್ಬಿ ಅಟೋಮಸ್‌, ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 855 ಆಕ್ಟಾ ಕೋರ್‌ ಪ್ರೊಸೆಸರ್ ಹಾಗೂ ಆ್ಯಂಡ್ರಾಯಿಡ್‌ ಪೀ ಆಪರೇಟಿಂಗ್ ಸಿಸ್ಟಂ ಹೊಂದಿದೆ.

4065 ಎಂಎಎಚ್ ಬ್ಯಾಟರಿಯ 'ರೆನೊ 10X ಝೂಮ್‌ ಮೊಬೈಲ್‌ ಎರಡು ಮಾದರಿಯಲ್ಲಿ ಲಭ್ಯವಿದೆ. 6ಜಿಬಿ ರ‍್ಯಾಮ್‌, 128 ಜಿಬಿ ಮೆಮೊರಿ ಇರುವ ಸ್ಮಾರ್ಟ್‌ ಪೋನ್ ಬೆಲೆ ₹ 39,990 ಹಾಗೂ  8ಜಿಬಿ ರ‍್ಯಾಮ್‌, 256 ಜಿಬಿ ಸ್ಟೋರೇಜ್‌ ಫೋನಿನ ಬೆಲೆ ₹ 49,990.

ಇದನ್ನೂ ಓದಿ: ರೆಡ್‌ಮಿ ಗೊ’

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು