ಮಹಿಳೆಯರ ಆರೋಗ್ಯಕ್ಕೆ WOW ಆ್ಯಪ್

7

ಮಹಿಳೆಯರ ಆರೋಗ್ಯಕ್ಕೆ WOW ಆ್ಯಪ್

Published:
Updated:

ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಎಫ್‌ಐಸಿಸಿಐ) ಮಹಿಳಾ ಸಂಘಟನೆಯು ಮಹಿಳೆಯರ ಆರೋಗ್ಯದ ಕಾಳಜಿಗಾಗಿ ‘WOW’ (Wellness of Women) ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ.

ಈ ಆ್ಯಪ್‌ ಮೂಲಕ ಆಯ್ದ ನಗರ ಪ್ರದೇಶಗಳಲ್ಲಿ ವಾಸವಿರುವ ಮಹಿಳೆಯರು ಆರೋಗ್ಯ ಮಾಹಿತಿಯನ್ನು ಪಡೆಯಬಹುದು.

‘ಆರೋಗ್ಯ ಸಲಹೆಗಳು, ಆಸ್ಪತ್ರೆಗಳ ದೂರವಾಣಿ ಸಂಖ್ಯೆ, ವೈದ್ಯರು ಮತ್ತು ಅವರ ಸಂಪರ್ಕ ಮಾಹಿತಿ, ಆರೋಗ್ಯ ಕ್ಷೇತ್ರದಲ್ಲಿನ ಹೊಸ ಆವಿಷ್ಕಾರ, ಪತ್ರಿಕಾ ಮಾಹಿತಿ, ಕ್ಲಿನಿಕ್‌ಗಳು, ಆರೋಗ್ಯ ಕಾರ್ಯಾಗಾರಗಳು, ನೂತನ ಚಿಕಿತ್ಸಾ ಪದ್ಧತಿಗಳ ಮಾಹಿತಿ ಈ ಆ್ಯಪ್‌ನಲ್ಲಿ
ದೊರೆಯಲಿದೆ’ ಎಂದು ಎಫ್‌ಐಸಿಸಿಐ ಅಧ್ಯಕ್ಷೆ ಪಿಂಕಿ ರೆಡ್ಡಿ ತಿಳಿಸಿದ್ದಾರೆ.

ಅಪೋಲೊ ಹಾಸ್ಪಿಟಲ್ ಗ್ರೂಪ್ ಸಹಯೋಗದೊಂದಿಗೆ ಈ ಆ್ಯಪ್ ವಿನ್ಯಾಸ ಮಾಡಲಾಗಿದೆ.

ವಿಡಿಯೊ ಕಾನ್ಫರೆನ್ಸ್‌, ವಾಯ್ಸ್‌ ಮೇಲ್‌ ಅಥವಾ ಇ–ಮೇಲ್‌ ಮೂಲಕ ವೈದ್ಯರೊಂದಿಗೆ ನೇರವಾಗಿ ಸಂವಹನ ನಡೆಸಿ ತಮ್ಮ ಆರೋಗ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ತಮ್ಮ ವೈದ್ಯಕೀಯ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಸೂಕ್ತ ಸಲಹೆಗಳನ್ನೂ ಪಡೆಯಬಹುದು. ಇದು ಆಂಡ್ರಾಯ್ಡ್‌ ಮತ್ತು ಐಒಎಸ್ ಮಾದರಿಯಲ್ಲಿ ಲಭ್ಯವಿದೆ.

 

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !