ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಯೋಮಿ ಕಿಯೋಸ್ಕ್‌ ಯಂತ್ರದಲ್ಲಿ ಸಿಗುತ್ತೆ ಮೊಬೈಲ್ ಬಿಡಿಭಾಗ

ವೆಂಡಿಂಗ್‌ ಮಷಿನ್‌ಗಳಮೂಲಕ ಮೊಬೈಲ್‌ ಮತ್ತದರ ಬಿಡಿಭಾಗಗಳ ಮಾರಾಟ *ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಅಳವಡಿಕೆ
Last Updated 16 ಮೇ 2019, 16:05 IST
ಅಕ್ಷರ ಗಾತ್ರ

ಭಾರತದಲ್ಲಿ ವೆಂಡಿಂಗ್‌ ಮಷಿನ್‌ಗಳ (ಮಾರಾಟದ ಯಂತ್ರಗಳು) ಮೂಲಕ ಮೊಬೈಲ್‌ ಮತ್ತದರ ಬಿಡಿಭಾಗಗಳನ್ನು ಮಾರಾಟ ಮಾಡಲು ಶಿಯೋಮಿ ಮೊಬೈಲ್‌ ತಯಾರಿಕಾ ಕಂಪನಿ ಮುಂದಾಗಿದೆ. ಇದಕ್ಕಾಗಿ ಮಿ ಎಕ್ಸ್‌ಪ್ರೆಸ್‌ ಕಿಯೋಸ್ಕ್‌ ಯಂತ್ರಗಳನ್ನು ಅಭಿವೃದ್ಧಿಪಡಿಸಿದೆ.

ಬೆಂಗಳೂರಿನ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಈ ಯಂತ್ರ ಅಳವಡಿಸಲಾಗಿದ್ದು, ನಗರದಲ್ಲಿ ಇನ್ನೂ ಹಲವು ಯಂತ್ರಗಳು ಶೀಘ್ರವೇ ಕಾಣಿಸಿಕೊಳ್ಳಲಿವೆ ಎಂದು ಕಂಪನಿಯ ಉಪಾಧ್ಯಕ್ಷ ಮನು ಕುರ್ಮಾ ತಿಳಿಸಿದ್ದಾರೆ.

ಕ್ರೆಡಿಟ್‌/ಡೆಬಿಟ್ ಕಾರ್ಡ್‌, ಯುಪಿಐ ಇಲ್ಲವೇ ನಗದು ...ಹೀಗೆ ಯಾವುದಾದೊಂದು ವಿಧದಲ್ಲಿ ಹಣ ಪಾವತಿಸಿ ಖರೀದಿ ಮಾಡಬಹುದು.ಒಂದು ಕಿಯೋಸ್ಕ್‌ನಲ್ಲಿ 200 ಸ್ಮಾರ್ಟ್‌ಫೋನ್‌ಗಳನ್ನು ಇಡಬಹುದು.ಈ ಯಂತ್ರದಲ್ಲಿ ಮೊಬೈಲ್‌ ಅಷ್ಟೇ ಅಲ್ಲದೆ ಕಂಪನಿಯ ಎಲ್ಲಾ ಉತ್ಪನ್ನಗಳೂ ಖರೀದಿಗೆ ಲಭ್ಯವಿವೆ ಎಂದು ಶಿಯೋಮಿ ಇಂಡಿಯಾ ತಿಳಿಸಿದೆ.

ಕೆಲವೇ ತಿಂಗಳುಗಳಲ್ಲಿ ಪ್ರಮುಖ ಮಹಾನಗರಗಳ ಮೆಟ್ರೊ ನಿಲ್ದಾಣಗಳು, ವಿಮಾನ ನಿಲ್ದಾಣಗಳು ಮತ್ತು ಶಾಪಿಂಗ್‌ ಮಾಲ್‌ಗಳಲ್ಲಿ ಈ ಯಂತ್ರಗಳನ್ನು ಇಡಲಾಗುವುದು. ಅಗತ್ಯ ಬಿದ್ದರೆ ಗ್ರಾಹಕರಿಗೆ ನೆರವಾಗಲು ಸಿಬ್ಬಂದಿಯನ್ನೂ ನೇಮಿಸಲಾಗುವುದು ಎಂದು ಹೇಳಿದೆ.

ಅತಿ ಹೆಚ್ಚಿನ ಸ್ಪರ್ಧೆ ಇರುವ ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ತನ್ನ ಸ್ಥಾನ ಕಾಯ್ದುಕೊಳ್ಳುವ ಉದ್ದೇಶದಿಂದ ಈ ಕ್ರಮ ಕೈಗೊಂಡಿದೆ. ಗ್ರಾಹಕರನ್ನು ನೇರವಾಗಿ ತಲಪಲು ಇದೊಂದು ಹೊಸ ಚಿಲ್ಲರೆ ಮಾರಾಟದ ವಿಧಾನವಾಗಿದೆ. ಕಾರ್ಯಾಚರಣೆ ವೆಚ್ಚ ತಗ್ಗಲಿದೆ. ಪ್ರಮುಖ ಮಹಾನಗರಗಳಲ್ಲಿಹೆಚ್ಚಿನ ಜನದಟ್ಟಣೆ ಇರುವ ಕಡೆಗಳಲ್ಲಿ ಅಂದರೆ ಮೆಟ್ರೊ ನಿಲ್ದಾಣಗಳು, ವಿಮಾನ ನಿಲ್ದಾಣಗಳು, ಶಾಪಿಂಗ್‌ ಮಾಲ್‌ಗಳಲ್ಲಿ ಈ ಯಂತ್ರಗಳನ್ನು ಅಳವಡಿಸಲು ಕಂಪನಿ ಉದ್ದೇಶಿಸಿದೆ.

ಹೇಗೆ ಕೆಲಸ ಮಾಡುತ್ತದೆ?

ಈ ಯಂತ್ರ ಟಚ್ ಸ್ಕ್ರೀನ್‌ ಮೂಲಕ ಕೆಲಸ ಮಾಡುತ್ತದೆ. ಟಚ್ ಸ್ಕ್ರೀನ್‌ನಲ್ಲಿ ತೋರಿಸುವ ಮೊಬೈಲ್‌ ಚಿತ್ರಗಳ ಮೇಲೆ ಕ್ಲಿಕ್‌ ಮಾಡಿದರೆ ಅದರ ವೈಶಿಷ್ಟ್ಯ, ಬೆಲೆ ಕಾಣಿಸುತ್ತದೆ. ಪಾವತಿ ವಿಧಾನ ಆಯ್ಕೆ ಮಾಡಿಕೊಂಡು ಖರೀದಿಸಬಹುದು.ಬೆಲೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿದೆ. Mi homes ಮತ್ತು Mi.com ನಲ್ಲಿ ಇರುವ ಬೆಲೆಗೂ ಇದಕ್ಕೂ ಯಾವುದೇ ವ್ಯತ್ಯಾಸ ಇರುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT