ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಐ ನೋಟ್‌ಬುಕ್ ಬಿಡುಗಡೆ: ಇಂಟೆಲ್ ಕೋರ್ ಐ5 ಪ್ರೊಸೆಸರ್, ಆರಂಭಿಕ ಬೆಲೆ ₹41,999

ಅಕ್ಷರ ಗಾತ್ರ

ಬೆಂಗಳೂರು: ಚೀನಾ ಮೂಲದ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆ ಭಾರತದಲ್ಲಿ ಎರಡು ಮಾದರಿಗಳ ಎಂಐ ನೋಟ್‌ಬುಕ್‌ ಬಿಡುಗಡೆ ಮಾಡಿದೆ. ಜೂನ್‌ 17ರಿಂದ ಹೊಸ ಲ್ಯಾಪ್‌ಟಾಪ್‌ಗಳು ಖರೀದಿಗೆ ಸಿಗಲಿವೆ.

ಬಿಡುಗಡೆಯಾಗಿರುವ ಮಾದರಿಗಳಲ್ಲಿ ಇಂಟೆಲ್‌ ಐ5 ಮತ್ತು ಐ7ನ 10ನೇ ಜೆನೆರೇಷನ್‌ ಪ್ರೊಸೆಸರ್‌ ಅಳವಡಿಸಿರುವುದರಿಂದ ಬಹುಬೇಗ ಗಮನ ಸೆಳೆಯುತ್ತಿವೆ. ಎಂಐ ನೋಟ್‌ಬುಕ್‌ 14 ಮತ್ತು ಎಂಐ ನೋಟ್‌ಬುಕ್‌ 14 ಹಾರಿಜಾನ್‌ ಎಡಿಷನ್‌ ಎರಡೂ ಮಾದರಿಗಳು ಕಡಿಮೆ ತೂಕ ಹೊಂದಿವೆ.

ಎಂಐ ನೋಟ್‌ಬುಕ್‌ ಆರಂಭಿಕ ಬೆಲೆ ₹41,999. ಹಾರಿಜಾನ್ ಎಡಿಷನ್‌ ದೊಡ್ಡದಾದ ಸ್ಕ್ರೀನ್‌, ಉತ್ತಮ ಗ್ರಾಫಿಕ್‌ ಕಾರ್ಡ್ ಹಾಗೂ ಹಗುರವಾಗಿದೆ. ಆ ಮಾದರಿಯ ನೋಟ್‌ಬುಕ್‌ ಆರಂಭಿಕ ಬೆಲೆ ₹54,999 ನಿಗದಿಯಾಗಿದೆ. ಇಂಟೆಲ್‌ ಕೋರ್‌ ಐ5 (10th Gen) ಪ್ರೊಸೆಸರ್‌ ಜೊತೆ 512ಜಿಬಿ ಸಂಗ್ರಹ ಸಾಮರ್ಥ್ಯ, 8ಜಿಬಿ ರ್‍ಯಾಮ್‌ ಹಾಗೂ ಎನ್‌ವಿಡಿಯಾ (GEforce MX350) ಗ್ರಾಫಿಕ್‌ ಕಾರ್ಡ್‌ ಹೊಂದಿರುವ ಹಾರಿಜಾನ್‌ ಎಡಿಷನ್‌ಗೆ ₹54,999 ಹಾಗೂ ಕೋರ್‌ ಐ7 ಪ್ರೊಸೆಸರ್‌ ಹೊಂದಿರುವ ಮಾದರಿಗೆ ₹59,999 ಬೆಲೆ ಇದೆ.

ಎಂಐ ಸ್ಟೋರ್‌, ಎಂಐ ವೆಬ್‌ಸೈಟ್‌ ಹಾಗೂ ಅಮೆಜಾನ್‌ ಇಂಡಿಯಾದಲ್ಲಿ ಜೂನ್‌ 17ರಿಂದ ಲ್ಯಾಪ್‌ಟಾಪ್‌ಗಳನ್ನು ಖರೀದಿಸಬಹುದಾಗಿದೆ. ಒಂದು ತಿಂಗಳು ವಿಶೇಷ ಕೊಡುಗೆಯಾಗಿ ಎಚ್‌ಡಿಎಫ್‌ಸಿ ಕಾರ್ಡ್‌ ಬಳಸಿ ಖರೀದಿಸಿದರೆ ₹2,000 ರಿಯಾಯಿತಿ ಸಿಗಲಿದೆ. ವರ್ಕ್‌ ಫ್ರಮ್‌ ಹೋಂ ಹೆಚ್ಚಿರುವುದರಿಂದ ಲ್ಯಾಪ್‌ಟಾಪ್‌ಗಳಿಗೆ ಬೇಡಿಕೆಯೂ ಹೆಚ್ಚಿದೆ.

14 ಇಂಚು ಫುಲ್‌ ಎಚ್‌ಡಿ ಡಿಸ್‌ಪ್ಲೇ ಇದೆ. 16:9 ಆಸ್ಪೆಕ್ಟ್ ರೇಷಿಯೊ ಹಾಗೂ 178 ಡಿಗ್ರಿ ವೀಕ್ಷಣೆ ಕೋನ ಹೊಂದಿದೆ. ಬ್ಯಾಟರಿ ಒಮ್ಮೆ ಪೂರ್ತಿ ಚಾರ್ಜ್‌ ಮಾಡಿ 10 ಗಂಟೆಗಳು ಬಳಸಬಹುದು ಹಾಗೂ 65 ವ್ಯಾಟ್‌ ಫಾಸ್ಟ್‌ ಚಾರ್ಜರ್‌ ಒಳಗೊಂಡಿದೆ. ಲ್ಯಾಪ್‌ಟಾಪ್‌ 1.35 ಕೆ.ಜಿ. ತೂಕವಿದೆ.

ಸ್ಕೀನ್‌ ಜೊತೆಗೆ ವೆಬ್‌ಕ್ಯಾಮ್‌ ಅಳವಡಿಸಲಾಗಿಲ್ಲ. ಕಂಪನಿ ಲ್ಯಾಪ್‌ಟಾಪ್‌ನೊಂದಿಗೆ ಪ್ರತ್ಯೇಕ ಎಂಐ ಎಚ್‌ಡಿ ವೆಬ್‌ಕ್ಯಾಮ್‌ ನೀಡುತ್ತಿದೆ.

ಎಂಐ ನೋಟ್‌ಬುಕ್‌ 14 ಗುಣಲಕ್ಷಣಗಳು

ಮಾದರಿ: 1901–ಎಫ್‌ಸಿ
* ಪ್ರೊಸೆಸರ್‌: ಇಂಟೆಲ್‌ ಕೋರ್‌ ಐ5 (10th Generation)
* ಗ್ರಾಫಿಕ್‌ ಕಾರ್ಡ್: ಇಂಟೆಲ್‌ ಅಲ್ಟ್ರಾ ಎಚ್‌ಡಿ ಗ್ರಾಫಿಕ್ಸ್‌ 620
* ಸಂಗ್ರಹ: 256ಜಿಬಿ ಎಸ್‌ಎಸ್‌ಡಿ
* ರ್‍ಯಾಮ್‌: 8ಜಿಬಿ ಡಿಡಿಆರ್‌4
* ಬೆಲೆ: ₹41,999

ಮಾದರಿ: 1901–ಎಫ್‌ಎ
(ಸಂಗ್ರಹ ಸಾಮರ್ಥ್ಯದಲ್ಲಿ ಮಾತ್ರ ಬದಲಾವಣೆ)
* ಸಂಗ್ರಹ: 512ಜಿಬಿ ಎಸ್‌ಎಸ್‌ಡಿ ನೀಡಲಾಗಿದೆ.
* ಬೆಲೆ: ₹44,999

ಮಾದರಿ: 1901–ಡಿಜಿ
* ಪ್ರೊಸೆಸರ್‌: ಇಂಟೆಲ್‌ ಕೋರ್‌ ಐ5 (10th Generation)
* ಗ್ರಾಫಿಕ್‌ ಕಾರ್ಡ್: ಎನ್‌ವಿಡಿಯಾ GEforce MX350
* ಸಂಗ್ರಹ: 512ಜಿಬಿ ಎಸ್‌ಎಸ್‌ಡಿ
* ರ್‍ಯಾಮ್‌: 8ಜಿಬಿ ಡಿಡಿಆರ್‌4
* ಬೆಲೆ: ₹47,999

ಎಂಐ ನೋಟ್‌ಬುಕ್‌ 14 ಹಾರಿಜಾನ್‌ ಎಡಿಷನ್‌ ಗುಣಲಕ್ಷಣಗಳು

ಮಾದರಿ: 1904–ಎಆರ್‌
* ಪ್ರೊಸೆಸರ್‌: ಇಂಟೆಲ್‌ ಕೋರ್‌ ಐ5 (10th Generation)
* ಗ್ರಾಫಿಕ್‌ ಕಾರ್ಡ್: ಎನ್‌ವಿಡಿಯಾ GEforce MX350
* ಸಂಗ್ರಹ: 512ಜಿಬಿ ಎಸ್‌ಎಸ್‌ಡಿ
* ರ್‍ಯಾಮ್‌: 8ಜಿಬಿ ಡಿಡಿಆರ್‌4
* ಬೆಲೆ: ₹54,999

ಮಾದರಿ: 1904–ಎಎಫ್‌
* ಪ್ರೊಸೆಸರ್‌: ಇಂಟೆಲ್‌ ಕೋರ್‌ ಐ7 (10th Generation)
* ಗ್ರಾಫಿಕ್‌ ಕಾರ್ಡ್: ಎನ್‌ವಿಡಿಯಾ GEforce MX350
* ಸಂಗ್ರಹ: 512ಜಿಬಿ ಎಸ್‌ಎಸ್‌ಡಿ (ಪಿಸಿಐ ಎಕ್ಸ್‌ಪ್ರೆಸ್‌ Gen 3 NVMe)
* ರ್‍ಯಾಮ್‌: 8ಜಿಬಿ ಡಿಡಿಆರ್‌4
* ಬೆಲೆ: ₹59,999

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT