ಗುರುವಾರ , ಫೆಬ್ರವರಿ 27, 2020
19 °C

ಶಿಯೋಮಿ ಎಂಐ 10, 10 ಪ್ರೋ ಬಿಡುಗಡೆ: 108 ಎಂಪಿ ಕ್ಯಾಮೆರಾ, 5ಜಿ ಫೋನ್‌ 

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಎಂಐ 10 ಮತ್ತು ಎಂಐ 10 ಪ್ರೋ ಸ್ಮಾರ್ಟ್‌ಫೋನ್‌

5ಜಿ ತಂತ್ರಜ್ಞಾನ ಅಳವಡಿಸಿಕೊಂಡ ಶಿಯೋಮಿ, ಎಂಐ 10 ಮತ್ತು ಎಂಐ 10 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಅನಾವರಣ ಮಾಡಿದೆ. ಡಿಸ್‌ಪ್ಲೇನಲ್ಲಿ ಪಂಚ್‌ ಹೋಲ್‌ ಮೂಲಕ ಸೆಲ್ಫಿ ಕ್ಯಾಮೆರಾ, ವೈರ್‌ಲೆಸ್‌ ಚಾರ್ಜಿಂಗ್‌, ಸ್ಯ್ನಾಪ್‌ಡ್ರ್ಯಾಗನ್‌ 865 ಪ್ರೊಸೆಸರ್‌ ಹಾಗೂ 108ಎಂಪಿ ಕ್ಯಾಮೆರಾದೊಂದಿಗೆ ಹೊಸ ತಲೆಮಾರಿನ ಸಮರ್ಥ ಫೋನ್‌ ಆಗಿ ಹೊರಬಂದಿದೆ. 

ಎರಡೂ ಮಾದರಿಯ ಫೋನ್‌ಗಳು ನಾಲ್ಕು ಕ್ಯಾಮೆರಾಗಳನ್ನು ಒಳಗೊಂಡಿದೆ. 8ಕೆ ವಿಡಿಯೊ ರೆಕಾರ್ಡ್‌ ಮಾಡಲು ಅನುವು ಮಾಡಿಕೊಡುವ ಕ್ಯಾಮೆರಾಗಳನ್ನು ನೀಡಲಾಗಿದೆ. ಡಿಡಿಆರ್‌5 ರ್‍ಯಾಮ್‌, ವೈಫೈ 6, ಡ್ಯೂಯಲ್‌ ಸಿಮ್‌, ಆ್ಯಂಡ್ರಾಯ್ಡ್‌ 10 ಒಎಸ್‌ ಹಾಗೂ 50ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ವ್ಯವಸ್ಥೆ ನೀಡಲಾಗಿದೆ. 

ಫೆಬ್ರುವರಿ 14ರಿಂದ ಚೀನಾದಲ್ಲಿ ಹೊಸ್ ಫೋನ್‌ಗಳು ಖರೀದಿಗೆ ಸಿಗಲಿವೆ. ಕೂಲರ್‌ ಅಟಾಚ್‌ಮೆಂಟ್‌ (₹1,300) ಮತ್ತು 65 ವ್ಯಾಟ್‌ ಚಾರ್ಜರ್‌ (₹1,500)ಸಹ ಬಿಡುಗಡೆ ಮಾಡಲಾಗಿದೆ. 

ಹೊಸ ಫೋನ್‌ ಗುಣಲಕ್ಷಣಗಳು:

ಎಂಐ 10

ಸಂಗ್ರಹ ಮತ್ತು ರ್‍ಯಾಮ್‌: 8ಜಿಬಿ + 128 ಜಿಬಿ /  8ಜಿಬಿ + 256 ಜಿಬಿ /  12ಜಿಬಿ + 256 ಜಿಬಿ 

ಡಿಸ್‌ಪ್ಲೇ: 6.67 ಇಂಚು ಫುಲ್‌ ಎಚ್‌ಡಿ+ ಕರ್ವ್ಡ್ ಅಮೋಲೆಡ್‌

ಪ್ರೊಸೆಸರ್‌: ಆಕ್ಟಾ–ಕೋರ್‌ ಕ್ವಾಲಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 865

ವಿಶೇಷ: ಎಲ್‌ಪಿಡಿಡಿಆರ್‌5 ರ್‍ಯಾಮ್‌ ಮತ್ತು 256 ಜಿಬಿ ವರೆಗೂ ಯುನಿವರ್ಸಲ್ ಫ್ಲಾಷ್‌ ಸ್ಟೋರೇಜ್‌ (UFS) 

ಕ್ಯಾಮೆರಾ: 108ಎಂಪಿ, 13ಎಂಪಿ ವೈಡ್‌ ಆ್ಯಂಗಲ್‌, ಎರಡು 2ಎಂಪಿ ಕ್ಯಾಮೆರಾ ಹಾಗೂ 20ಎಂಪಿ ಸೆಲ್ಫಿ ಕ್ಯಾಮೆರಾ

ಬ್ಯಾಟರಿ: 4,780 ಎಂಎಎಚ್‌ (30ವ್ಯಾಟ್‌ ಚಾರ್ಜಿಂಗ್‌)

ಬೆಲೆ: 3,999 ಯುವಾನ್‌ (ಸುಮಾರು ₹40,000); 4,299 ಯುವಾನ್‌ (ಸುಮಾರು ₹43,000); 4,699 ಯುವಾನ್‌ (ಸುಮಾರು ₹47,000)

ಬಣ್ಣ: ಟೈಟಾನಿಯಂ ಸಿಲ್ವರ್‌ ಬ್ಲ್ಯಾಕ್‌, ಪೀಚ್‌ ಗೋಲ್ಡ್‌, ಐಸ್‌ ಬ್ಲೂ

ಎಂಐ 10 ಪ್ರೋ

ಸಂಗ್ರಹ ಮತ್ತು ರ್‍ಯಾಮ್‌: 8ಜಿಬಿ + 256 ಜಿಬಿ / 12ಜಿಬಿ + 256 ಜಿಬಿ / 12ಜಿಬಿ + 512 ಜಿಬಿ

ಡಿಸ್‌ಪ್ಲೇ: 6.67 ಇಂಚು ಫುಲ್‌ ಎಚ್‌ಡಿ+ ಎಚ್‌ಡಿಆರ್‌10+ ಅಮೋಲೆಡ್‌

ಪ್ರೊಸೆಸರ್‌: ಆಕ್ಟಾ–ಕೋರ್‌ ಕ್ವಾಲಕಾಮ್‌ ಸ್ನ್ಯಾಪ್‌ಡ್ರ್ಯಾಗನ್‌ 865

ವಿಶೇಷ: ಎಲ್‌ಪಿಡಿಡಿಆರ್‌5 ರ್‍ಯಾಮ್‌ ಮತ್ತು 512 ಜಿಬಿ ವರೆಗೂ ಯುನಿವರ್ಸಲ್ ಫ್ಲಾಷ್‌ ಸ್ಟೋರೇಜ್‌ (UFS) 

ಕ್ಯಾಮೆರಾ: 108ಎಂಪಿ, 20ಎಂಪಿ ವೈಡ್‌ ಆ್ಯಂಗಲ್‌, 12ಎಂಪಿ ಕ್ಯಾಮೆರಾ, 8ಎಂಪಿ ಟೆಲಿಫೋಟೊ ಲೆನ್ಸ್‌ ಹಾಗೂ 20ಎಂಪಿ ಸೆಲ್ಫಿ ಕ್ಯಾಮೆರಾ

ಬ್ಯಾಟರಿ: 4,500 ಎಂಎಎಚ್‌ (50ವ್ಯಾಟ್‌ ಚಾರ್ಜಿಂಗ್‌)

ಬೆಲೆ: 4,999 ಯುವಾನ್‌ (ಸುಮಾರು ₹50,000); 5,499 ಯುವಾನ್‌ (ಸುಮಾರು ₹55,000); 5,999 ಯುವಾನ್‌ (ಸುಮಾರು ₹60,000)

ಬಣ್ಣ: ಪರ್ಲ್‌ ವೈಟ್‌, ಸ್ಟೇರಿ ಬ್ಲೂ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು