ಹೊಸ ಫೋನ್ ರೆಡ್‌ಮಿ 9ಐ: ಆರಂಭಿಕ ಬೆಲೆ ₹8,299

ಶವೊಮಿ ಭಾರತದಲ್ಲಿ ಕೈಗೆಟುಕುವ ದರದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ರೆಡ್‌ಮಿ 9ಐ ಮಾದರಿಯ ಫೋನ್‌ಗಳ ಆರಂಭಿಕ ಬೆಲೆ ₹8,299 ನಿಗದಿಯಾಗಿದೆ.
ಹೊಸ ಫೋನ್ 6.53 ಇಂಚು ಎಚ್‌ಡಿ+ ಡಿಸ್‌ಪ್ಲೇ ಹೊಂದಿದ್ದು, ಕಡಿಮೆ ಬ್ಲೂ ಲೈಟ್ ಹೊಮ್ಮಿಸುವುದಾಗಿ ಕಂಪನಿ ಹೇಳಿದೆ. 2.0 ಗಿಗಾ ಹರ್ಟ್ಸ್ ಮೀಡಿಯಾಟೆಕ್ ಹೀಲಿಯೊ ಜಿ25 ಪ್ರೊಸೆಸರ್‌ನೊಂದಿಗೆ 4ಜಿಬಿ ರ್‍ಯಾಮ್ ಅಳವಡಿಸಿರುವುದು ವೇಗದ ಕಾರ್ಯಾಚರಣೆಗೆ ಸಹಕಾರಿಯಾಗಲಿದೆ.
4ಜಿಬಿ ರ್‍ಯಾಮ್ ಮತ್ತು 64ಜಿಬಿ ಸಂಗ್ರಹ ಸಾಮರ್ಥ್ಯ ಹಾಗೂ 4ಜಿಬಿ ರ್‍ಯಾಮ್+128ಜಿಬಿ ಸಂಗ್ರಹ ಸಾಮರ್ಥ್ಯ ಎರಡು ಮಾದರಿಗಳಲ್ಲಿ ರೆಡ್‌ಮಿ 9ಐ ಸಿಗಲಿದೆ. ಮೈಕ್ರೊಎಸ್‌ಡಿ ಕಾರ್ಡ್ ಮೂಲಕ 512ಜಿಬಿ ವರೆಗೂ ಸಂಗ್ರಹ ವಿಸ್ತರಿಸಿಕೊಳ್ಳಬಹುದಾಗಿದೆ. 128ಜಿಬಿ ಸಂಗ್ರಹ ಸಾಮರ್ಥ್ಯವಿರುವ ಫೋನ್ ಬೆಲೆ ₹9,299.
ದೀರ್ಘಾವಧಿ ಬ್ಯಾಟರಿ ಬಾಳಿಕೆ ತಂತ್ರಜ್ಞಾನ (ELB–Enhanced Lifespan Battery) ಒಳಗೊಂಡಿರುವ 5,000ಎಂಎಎಚ್ ಬ್ಯಾಟರಿ ಅಳವಡಿಸಲಾಗಿದೆ. ಸಾಮಾನ್ಯವಾಗಿ ಬ್ಯಾಟರಿಗಳು 2 ವರ್ಷ ಬಾಳಿಕೆ ಅವಧಿ ಹೊಂದಿರುತ್ತವೆ. ಆದರೆ, ಈ ಬ್ಯಾಟರಿ 2.5ರಿಂದ 3 ವರ್ಷ ಬಾಳಿಕೆ ಬರುವುದಾಗಿ ಶವೊಮಿ ಹೇಳಿಕೊಂಡಿದೆ. ಇದಕ್ಕೆ 10ವ್ಯಾಟ್ ಚಾರ್ಜಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.
ಈ ಫೋನ್ ಹಿಂಬದಿಯಲ್ಲಿ 13ಎಂಪಿ ಕ್ಯಾಮೆರಾ ಮತ್ತು ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾ ನೀಡಲಾಗಿದೆ. ಮೈಕ್ರೊಯುಎಸ್‌ಪಿ, 3.5ಎಂಎಂ ಹೆಡ್‌ಫೋನ್ ಜ್ಯಾಕ್, ಬ್ಲೂಟೂಥ್ 5.0 ಹಾಗೂ ಡ್ಯೂಯಲ್ ಸಿಮ್ ಬಳಕೆಗೆ ಅವಕಾಶವಿದೆ.
ಮಿಡ್‌ನೈಟ್ ಬ್ಲ್ಯಾಕ್, ಸೀ ಬ್ಲೂ ಹಾಗೂ ನೇಚರ್ ಗ್ರೀನ್ ಮೂರು ಬಣ್ಣಗಳಲ್ಲಿ ರೆಡ್‌ಮಿ 9ಐ ಸಿಗಲಿದೆ. ಸೆಪ್ಟೆಂಬರ್ 18ರಿಂದ ಫ್ಲಿಪ್‌ಕಾರ್ಟ್ ಹಾಗೂ ಎಂಐ ಸ್ಟೋರ್‌ಗಳಲ್ಲಿ ಫೋನ್ ಲಭ್ಯವಿರಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.