ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Gadget Review | ಮನೆಯ ಕಣ್ಗಾವಲಿಗೆ ‘ಗೊದ್ರೇಜ್‌ ಏಸ್‌ ಪ್ರೊ’

Last Updated 9 ಮಾರ್ಚ್ 2023, 13:06 IST
ಅಕ್ಷರ ಗಾತ್ರ

ಜನರ ಇಂದಿನ ಅಗತ್ಯಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳಿಗೆ ಆದ್ಯತೆ ಹೆಚ್ಚು. ಮನೆ, ಕಚೇರಿ, ತೋಟ... ಹೀಗೆ ಭದ್ರತೆಗಾಗಿ, ನಿಗಾ ವಹಿಸಲು, ಕಳ್ಳತನ ತಡೆಯಲು ಎಲ್ಲೆಡೆಯೂ ಸಿಇಟಿಟಿವಿ ಕ್ಯಾಮೆರಾ ಬಳಸಲಾಗುತ್ತಿದೆ. ಮನೆಯಲ್ಲಿ ಮಕ್ಕಳು, ವೃದ್ಧರ ಮೇಲೆ ನಿಗಾ ಇಡಲು, ಆಗಾಗ್ಗೆ ಅವರಿಗೆ ನೆರವಾಗಲು ವೈಫೈ ಕ್ಯಾಮೆರಾಗಳು ಉಪಯುಕ್ತವಾಗಿವೆ.

ಈಗಂತೂ ಕಡಿಮೆ ಬೆಲೆಗೆ ಗುಣಮಟ್ಟದ ಸಾಧನಗಳು ಸಿಗುತ್ತಿರುವುದರಿಂದ ಎಲ್ಲರೂ ಇವುಗಳನ್ನು ಬಳಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಹಲವು ಕಂಪನಿಗಳ ನಾನಾ ತರದ ಕ್ಯಾಮೆರಾಗಳು ಸಿಗುತ್ತವೆ. ಭದ್ರತೆಗೆ ಸಂಬಂಧಿಸಿದಂತೆ ಸಾಧನಗಳನ್ನು ನೀಡುವಲ್ಲಿ ಮುಂಚೂಣಿ ಕಂಪನಿಗಳಲ್ಲಿ ಒಂದಾಗಿರುವ ಗೊದ್ರೇಜ್‌, ಈಚೆಗಷ್ಟೇ ‘ಗೊದ್ರೇಜ್‌ ಏಸ್‌ ಪ್ರೊ’ (Godrej Ace Pro) ಕ್ಯಾಮೆರಾ ಬಿಡುಗಡೆ ಮಾಡಿದೆ.

ಬಳಕೆ ಹೇಗೆ?
ಗೊದ್ರೇಜ್‌ ಏಸ್‌ ಪ್ರೊ; ಆಂಡ್ರಾಯ್ಡ್‌ ಮತ್ತು ಐಫೋನ್‌ಗೆ ಇದು ಬೆಂಬಲಿಸುತ್ತದೆ. 3ಎಂಪಿ ಕ್ಯಾಮೆರಾ ಎಚ್‌ಡಿ ಗುಣಮಟ್ಟದ ವಿಡಿಯೊ ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಮೊಬೈಲ್‌ಗೆ ‘ಗೊದ್ರೇಜ್‌ ಏಸ್‌’ (Godrej Ace) ಆ್ಯಪ್‌ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಆ್ಯಪ್‌ ಅನ್ನು ಮೊದಲ ಸಾರಿ ವೈಫೈಗೆ ಸಂಪರ್ಕಿಸಬೇಕು. ನಂತರ ಪ್ಲಸ್ ಗುರುತನ್ನು ಒತ್ತಿ, ಕ್ಯಾಮೆರಾ ಹಿಂಭಾಗದಲ್ಲಿರುವ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿದರೆ ಕಣ್ಗಾವಲಿಡಲು ಕ್ಯಾಮೆರಾ ಸಜ್ಜಾಗುತ್ತದೆ.

ಈ ಕ್ಯಾಮೆರಾಕ್ಕೆ ಯಾವಾಗಲೂ ಪವರ್ ಆನ್ ಆಗಿರಬೇಕು. ಮೈಕ್ರೊ ಯುಎಸ್‌ಬಿ ಪವರ್‌ ಅಡಾಪ್ಟರ್‌ ಮೂಲಕ ಪವರ್‌ಗೆ ಸಂಪರ್ಕಿಸಬೇಕು. ಹೀಗಾಗಿ ಕರೆಂಟ್‌ ಹೋದಾಗ ಈ ಕ್ಯಾಮೆರಾ ಆಫ್ ಆಗುತ್ತದೆ. ಆದರೆ, ಇಂದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಯುಪಿಎಸ್‌ ಅಳವಡಿಸಿರುವುದರಿಂದ ಕರೆಂಟ್‌ ಹೋದರೂ ಸಮಸ್ಯೆ ಆಗುವುದಿಲ್ಲ. ಕ್ಯಾಮೆರಾಗೆ ವೈಫೈ ಇಂಟರ್ನೆಟ್ ಸಂಪರ್ಕ ಬೇಕು. ಮೊಬೈಲ್‌ನಲ್ಲಿ ಗೊದ್ರೇಜ್‌ ಏಸ್‌ ಆ್ಯಪ್ ತೆರೆದರೆ, ಮನೆಯೊಳಗಿನ ದೃಶ್ಯಗಳು ಕ್ಯಾಮೆರಾ ಮೂಲಕ ಕಾಣಿಸುತ್ತವೆ. ಬಿಲ್ಟ್‌ ಇನ್‌ ಮೈಕ್‌ ಮತ್ತು ಸ್ಪೀಕರ್‌ ಇರುವುದರಿಂದ ಮನೆಯಲ್ಲಿ ಇರುವವರೊಂದಿಗೆ ಮಾತುಕತೆ ನಡೆಸಬಹುದು. ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡಲು, ಹೋಮ್ ವರ್ಕ್‌ ಮಾಡಲು ಹೇಳಬಹುದು. ಅದಕ್ಕೆ ಮಕ್ಕಳು ಪ್ರತಿಕ್ರಿಯೆ ನೀಡುವುದು ಸಹ ನಮಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಕ್ಯಾಮೆರಾದ ಆ್ಯಂಗಲ್‌ ಅನ್ನು ಆ್ಯಪ್ ಮೂಲಕವೇ ನಿಯಂತ್ರಿಸಬಹುದು. 128ಜಿಬಿವರೆಗೆ ದತ್ತಾಂಶ ಸಂಗ್ರಹಣೆಗೆಯ ಜೊತೆಗೆ ಕ್ಲೌಡ್‌ ಸ್ಟೊರೇಜ್‌ ಆಯ್ಕೆಗಳು ಇದರಲ್ಲಿವೆ.

ಕ್ಯಾಮೆರಾದ ಮೂಲಕ ಸೆರೆಯಾಗುವ ವಿಡಿಯೊವನ್ನು ಬೇರೆಯವರೊಂದಿಗೆ ಶೇರ್ ಮಾಡಿಕೊಳ್ಳಬಹುದು. ಈ ಕ್ಯಾಮೆರಾ ಫಿಷ್‌ ಐನೊಂದಿಗೆ 355 ಡಿಗ್ರಿ ಪ್ಯಾನ್‌ ಮತ್ತು 90 ಡಿಗ್ರಿ ಟಿಲ್ಟ್‌ ಆಗುತ್ತದೆ. ಮೋಷನ್ ಸೆನ್ಸರ್ ಇರುವುದರಿಂದ ವ್ಯಕ್ತಿಗಳು ಚಲಿಸಿದರೆ ಅಥವಾ ಏನಾದರೂ ಅಸಹಜ ಚಲನೆ ಕಂಡುಬಂದರೆ, ಮೊಬೈಲ್ ಆ್ಯಪ್‌ಗೆ ಅಲರ್ಟ್ ನೋಟಿಫಿಕೇಶನ್ ಕಳುಹಿಸುವ ವ್ಯವಸ್ಥೆಯನ್ನೂ ಹೊಂದಿದೆ. ರಾತ್ರಿ ವೇಳೆಯ ದೃಶ್ಯವೂ ಈ ಕ್ಯಾಮೆರಾದ ಮೂಲಕ ಚೆನ್ನಾಗಿ ಕಾಣಿಸುತ್ತದೆ. ಸುಮಾರು 10 ಮೀಟರ್‌ವರೆಗಿನ ದೂರದ ಚಿತ್ರಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಇದರ ಬೆಲೆ ₹2,358. ವಿಡಿಯೊ, ಆಡಿಯೊ ಗುಣಮಟ್ಟ, ನಿರ್ವಹಣೆ ಮತ್ತು ಬೆಲೆಯ ದೃಷ್ಟಿಯಿಂದ ಇದನ್ನು ಪರಿಗಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT