ಅದು ಕಾರ್ಗಿಲ್ ಯುದ್ಧದ ಸಂದರ್ಭ. ಪಾಕಿಸ್ತಾನದ ಸೇನಾ ನೆಲೆಗಳ ಬಗ್ಗೆ ಜಿಪಿಎಸ್ (ಜಾಗತಿಕ ಪಥದರ್ಶಕ ಉಪಗ್ರಹ ವ್ಯವಸ್ಥೆಯ) ಮಾಹಿತಿ ನೀಡುವಂತೆ ಭಾರತವು ಅಮೆರಿಕವನ್ನು ಕೋರಿತ್ತು. ಆದರೆ, ಅಮೆರಿಕ ನಿರಾಕರಿಸಿತ್ತು. ದೇಶೀಯ ಪಥದರ್ಶಕ ವ್ಯವಸ್ಥೆಯೊಂದರ ಅಗತ್ಯವಿದೆ ಎಂದು ಭಾರತ ಮನಗಂಡಿದ್ದು ಆಗಲೇ. ಸ್ವದೇಶಿ ಪಥದರ್ಶಕ ಉಪಗ್ರಹ ವ್ಯವಸ್ಥೆ ರೂಪಿಸಲು ಅದೇ ನಾಂದಿಯಾಯಿತು. ಅದರ ಅಭಿವೃದ್ಧಿಯ ಜವಾಬ್ದಾರಿ ಹೊತ್ತುಕೊಂಡಿದ್ದು ಇಸ್ರೊ. 2013ರ ನಂತರ ತನ್ನದೇ ಆದ ಪಥದರ್ಶಕ ವ್ಯವಸ್ಥೆ ರೂಪಿಸಲು ಭಾರತಕ್ಕೆ ಸಾಧ್ಯವಾಗಿದ್ದರೂ ಅದು ಪೂರ್ಣವಾಗಿ ಕಾರ್ಯಾರಂಭ ಮಾಡಿಲ್ಲ.

ಆರಂಭದಿಂದಲೂ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಿಸುತ್ತಲೇ ಬಂದ ಈ ಯೋಜನೆಗೆ, ಈಗ ಗಂಭೀರ ಸ್ವರೂಪದ ಹಿನ್ನಡೆಯೇ ಆಗಿದೆ. ದೀರ್ಘಕಾಲದ ನಿರ್ಲಕ್ಷ್ಯ, ತಾಂತ್ರಿಕ ವೈಫಲ್ಯಗಳು, ಅವಧಿ ಮೀರಿದ ಉಪಗ್ರಹಗಳು ಮತ್ತು ಬದಲಿ ಉಪಗ್ರಹಗಳ ಉಡಾವಣೆ ವಿಳಂಬದಿಂದಾಗಿ ‘ನಾವಿಕ್’ ಕಾರ್ಯಾರಂಭ ಸ್ಥಗಿತಗೊಳಿಸುವ ಹಂತ ತಲುಪಿದೆ.

‘ನಾವಿಕ್’ ಅನ್ನು ವಿಮಾನಯಾನ, ನೌಕಾಯಾನ, ಸಾರಿಗೆ ವ್ಯವಸ್ಥೆ, ಸೇನೆ, ಪ್ರಕೃತಿ ವಿಕೋಪ ಇನ್ನಿತರ ತುರ್ತು ಪರಿಸ್ಥಿತಿಗಳಲ್ಲಿ ಬಳಸಲಾಗುತ್ತಿದೆ. ಉಪಗ್ರಹಗಳು ನಿಷ್ಕ್ರಿಯವಾಗುತ್ತಿರುವುದರಿಂದ, ಇದು ದೇಶದ ಸ್ಪರ್ಧಾತ್ಮಕತೆ, ಆರ್ಥಿಕತೆ ಮತ್ತು ರಕ್ಷಣಾ ವಲಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಂಭವ ಇದೆ. ಗಗನಯಾನ, ಬಾಹ್ಯಾಕಾಶದಲ್ಲಿ ತನ್ನದೇ ಆದ ನಿಲ್ದಾಣವನ್ನು ಹೊಂದುವ ಬೃಹತ್ ಯೋಜನೆಗಳೆಡೆಗೆ ಇಸ್ರೊ ಅತಿಯಾದ ಒತ್ತು ನೀಡಿದ್ದರಿಂದ ನಾವಿಕ್ನಂಥ ಪ್ರಮುಖ ಹಾಗೂ ಯುದ್ಧದಂಥ ಬಿಕ್ಕಟ್ಟಿನ ಸಂದರ್ಭಗಳಲ್ಲಿ ಅತ್ಯಗತ್ಯವಾದ ಯೋಜನೆಗೆ ಹಿನ್ನಡೆ ಉಂಟಾಗಿದೆ ಎನ್ನುವ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260324-51-511301681

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.