ಮಾನವ ಕುಲವು ಸಾವಿರಾರು ವರ್ಷಗಳಿಂದ ಆಕಾಶವನ್ನು ನೋಡಿ ಕುತೂಹಲದಿಂದ ಪ್ರಶ್ನೆಗಳನ್ನು ಕೇಳುತ್ತಿದೆ: ‘ನಕ್ಷತ್ರಗಳು ಹೇಗೆ ಹುಟ್ಟುತ್ತವೆ?’, ‘ಚಂದ್ರನ ಮೇಲೆ ಏನಿದೆ?’, ‘ಮಂಗಳ ಗ್ರಹದಲ್ಲಿ ಜೀವಿಗಳಿವೆಯೇ?’

1969ರಲ್ಲಿ ಚಂದ್ರನ ಮೇಲೆ ಮೊದಲು ಮಾನವ ಕಾಲಿಟ್ಟಿದ್ದು ವೈಜ್ಞಾನಿಕ ಇತಿಹಾಸದ ಮಹತ್ವದ ಘಟ್ಟವಾಗಿದೆ. ಇತ್ತೀಚಿನ ಮಂಗಳ ಗ್ರಹದ ಮಿಷನ್ಗಳು ಮತ್ತು ಸ್ಪೇಸ್ಎಕ್ಸ್ನಂತಹ ಖಾಸಗಿ ಸಂಸ್ಥೆಗಳ ಪ್ರಯತ್ನಗಳು ಬಾಹ್ಯಾಕಾಶ ಸಂಶೋಧನೆಯನ್ನು ಹೊಸ ಹಾದಿಯಲ್ಲಿ ಸಾಗಿಸುತ್ತಿವೆ.

ಖಭೌತ ವಿಜ್ಞಾನದ ಮಹತ್ವ: ಖಭೌತ ವಿಜ್ಞಾನವು (ಆ್ಯಸ್ಟ್ರೋಫಿಸಿಕ್ಸ್) ಬ್ರಹ್ಮಾಂಡದ ಮೂಲ, ರಚನೆ ಮತ್ತು ವಿಕಾಸವನ್ನು ತಿಳಿಯಲು ಸಹಾಯ ಮಾಡುತ್ತದೆ. ಜೊತೆಗೆ, ಬ್ಲ್ಯಾಕ್ಹೋಲ್ಗಳು, ನೆಬ್ಯುಲಾ, ಗ್ಯಾಲಕ್ಸಿಗಳು ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ವಿವರಿಸುತ್ತದೆ. ಉಪಗ್ರಹ ತಂತ್ರಜ್ಞಾನ, ಜಿಪಿಎಸ್, ಹವಾಮಾನ ಮುನ್ಸೂಚನೆ, ಸಂವಹನ ವ್ಯವಸ್ಥೆ– ಇವೆಲ್ಲವೂ ಆ್ಯಸ್ಟ್ರೋಫಿಸಿಕ್ಸ್ಗೆ ಸಂಬಂಧಪಟ್ಟ ವಿಷಯಗಳಾಗಿವೆ.

ತಾತ್ವಿಕ ಅಂಶ ಮತ್ತು ಪ್ರಾಯೋಗಿಕ ಅನ್ವಯ: ಕ್ವಾಂಟಮ್ ಮೆಕ್ಯಾನಿಕ್ಸ್, ಸಾಪೇಕ್ಷತಾವಾದ (ರಿಲೇಟಿವಿಟಿ), ಕಾಸ್ಮಾಲಜಿ, ಬ್ರಹ್ಮಾಂಡದ ವಿಸ್ತರಣೆ, ಡಾರ್ಕ್ ಮ್ಯಾಟರ್ ಮತ್ತು ಡಾರ್ಕ್ ಎನರ್ಜಿ ಅಂತಹವುಗಳು ತಾತ್ವಿಕ ಅಂಶಗಳಾದರೆ, ಉಪಗ್ರಹ ಸಂವಹನ (ಮೊಬೈಲ್, ಇಂಟರ್ನೆಟ್, ಜಿಪಿಎಸ್), ಹವಾಮಾನ ಅಧ್ಯಯನ (ಚಂಡಮಾರುತ, ಮಳೆ, ಹವಾಮಾನ ಬದಲಾವಣೆ), ರಕ್ಷಣಾ ಕ್ಷೇತ್ರ (ಉಪಗ್ರಹಗಳ ಮೇಲೆ ನಿಗಾ, ಕ್ಷಿಪಣಿ ತಂತ್ರಜ್ಞಾನ), ಆರೋಗ್ಯ ಕ್ಷೇತ್ರ (ಎಂಆರ್ಐ, ಸಿ.ಟಿ ಸ್ಕ್ಯಾನ್ ಇತ್ಯಾದಿ) ಖಭೌತ ವಿಜ್ಞಾನದ ಪ್ರಮುಖ ಪ್ರಾಯೋಗಿಕ ಅನ್ವಯಗಳು. ಹೀಗಾಗಿ, ಆ್ಯಸ್ಟ್ರೋಫಿಸಿಕ್ಸ್ ಕ್ಷೇತ್ರವು ಬಾಹ್ಯಾಕಾಶದ ಅಧ್ಯಯನವಷ್ಟೇ ಅಲ್ಲ, ಅದು ಮಾನವನ ಜೀವನದ ಗುಣಮಟ್ಟವನ್ನು ಸುಧಾರಿಸುವ ಶಕ್ತಿಯನ್ನೂ ಹೊಂದಿದೆ.

ಬೋಧಿಸುವ ವಿಷಯಗಳು ಹೀಗಿವೆ: ಕ್ಲ್ಯಾಸಿಕಲ್ ಮೆಕ್ಯಾನಿಕ್ಸ್, ಎಲೆಕ್ಟ್ರೊಮ್ಯಾಗ್ನೆಟಿಸಂ, ಕ್ವಾಂಟಮ್ ಮೆಕ್ಯಾನಿಕ್ಸ್ ಆ್ಯಂಡ್ ರಿಲೇಟಿವಿಟಿ, ಸ್ಟೆಲಾರ್ ಸ್ಟ್ರಕ್ಚರ್ ಆ್ಯಂಡ್ ಎವಲ್ಯೂಷನ್, ಕಾಸ್ಮಾಲಜಿ ಆ್ಯಂಡ್ ಸ್ಪೇಸ್ ಟೈಮ್ ಫಿಸಿಕ್ಸ್, ಅಬ್ಸರ್ವೇಷನಲ್ ಟೆಕ್ನಿಕ್ಸ್ (ಟೆಲಿಸ್ಕೋಪ್, ಸ್ಪೆಕ್ಟ್ರೋಸ್ಕೋಪಿ), ಕಾಂಪ್ಯುಟೇಷನಲ್ ಆ್ಯಸ್ಟ್ರೋಫಿಸಿಕ್ಸ್ ಆ್ಯಂಡ್ ಡೇಟಾ ಅನಾಲಿಸಿಸ್.

ಇತ್ತೀಚಿನ ಭಾರತೀಯ ಮಿಷನ್ಗಳಾದ ಚಂದ್ರಯಾನ– 3 (ಚಂದ್ರನ ಮೇಲಿನ ಯಶಸ್ವಿ ಲ್ಯಾಂಡಿಂಗ್) ಮತ್ತು ಆದಿತ್ಯ- ಎಲ್1 ಸೌರ ಮಿಷನ್ ಭಾರತವನ್ನು ಜಾಗತಿಕ ಬಾಹ್ಯಾಕಾಶ ಸಂಶೋಧನೆಯಲ್ಲಿ ಪ್ರಮುಖ ಸ್ಥಾನಕ್ಕೆ ತಂದು ನಿಲ್ಲಿಸಿವೆ.

ಇಂದಿನ ಆ್ಯಸ್ಟ್ರೋಫಿಸಿಕ್ಸ್ ಬರೀ ಭೌತವಿಜ್ಞಾನ ಮತ್ತು ಗಣಿತಕ್ಕೆ ಸೀಮಿತವಾಗಿಲ್ಲ. ಕೃತಕ ಬುದ್ಧಿಮತ್ತೆ (ಎಐ), ಮಷೀನ್ ಲರ್ನಿಂಗ್ ಮತ್ತು ಬಿಗ್ ಡೇಟಾ ವಿಶ್ಲೇಷಣೆಗಳೊಂದಿಗೆ ಸಂಶೋಧನೆಗೆ ಹೊಸ ದಾರಿಗಳನ್ನು ತೆರೆಯುತ್ತಿದೆ.

ಸುಮಾರು ಶೇ 95ರಷ್ಟು ಕಾರ್ಬನ್ ಡೈಆಕ್ಸೈಡ್ ಇರುವ ಮಂಗಳ ಗ್ರಹದ ವಾಯುವು ಮಾನವನಿಗೆ ವಿಷಕಾರಿಯಾಗಿದೆ. ಆದರೂ ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ.

ಬಾಹ್ಯಾಕಾಶ ಪ್ರವಾಸದಲ್ಲಿ ಸ್ಪೇಸ್ಎಕ್ಸ್, ಬ್ಲೂ ಆರಿಜಿನ್ನಂತಹ ಸಂಸ್ಥೆಗಳು ಮುಂದಾಳತ್ವ ವಹಿಸುತ್ತಿವೆ. ಹೊಸ ಶಕ್ತಿ ಮೂಲಗಳ ಅನ್ವೇಷಣೆ, ಬ್ರಹ್ಮಾಂಡದಲ್ಲಿ ಜೀವನದ ಮೂಲವನ್ನು ಅರಿಯುವ ಪ್ರಯತ್ನಗಳ ಮೂಲಕ ಈ ಕ್ಷೇತ್ರವು ಗಮನಸೆಳೆಯುತ್ತಿದೆ.

ಕೇವಲ ಕನಸುಗಳನ್ನು ಕಾಣುತ್ತಾ, ನಕ್ಷತ್ರಗಳನ್ನು ನೋಡುತ್ತಾ ನಿಲ್ಲಬೇಡಿ. ಏಕೆಂದರೆ, ಆ್ಯಸ್ಟ್ರೋಫಿಸಿಕ್ಸ್ ವಿಜ್ಞಾನಿಗಳಿಗಷ್ಟೇ ಸೀಮಿತವಾಗಿಲ್ಲ; ಅದು ಮಾನವಕುಲದ ಭವಿಷ್ಯವನ್ನು ರೂಪಿಸುವ ಪ್ರಮುಖ ಕ್ಷೇತ್ರವಾಗಿದೆ.

ಭಾರತದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು ಹಾಗೂ ಸಂಶೋಧನಾ ಕೇಂದ್ರಗಳು ಇವೆ. ಇಷ್ಟೇ ಅಲ್ಲದೆ ಉತ್ತಮ ಉದ್ಯೋಗಾವಕಾಶಗಳು ಸಹ ಲಭ್ಯವಿದ್ದು, ವಿಜ್ಞಾನ, ಗಣಿತ ಹಾಗೂ ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ವೃತ್ತಿ ಆಯ್ಕೆಯಾಗಬಹುದು.

ಕ್ಷೇತ್ರದ ವ್ಯಾಪ್ತಿ

• ಇಸ್ರೊ, ನಾಸಾ, ಯುರೋಪಿಯನ್ ಸ್ಪೇಸ್ ಏಜೆನ್ಸಿಯಂತಹ (ಇಎಸ್ಎ) ಸಂಸ್ಥೆಗಳಲ್ಲಿ ಅಂತರಿಕ್ಷ ಸಂಶೋಧನೆ

• ವಿಶ್ವವಿದ್ಯಾಲಯಗಳು ಮತ್ತು ಸಂಶೋಧನಾ ಕೇಂದ್ರಗಳಲ್ಲಿ ಬೋಧನೆ ಹಾಗೂ ಸಂಶೋಧನೆ

• ಡೇಟಾ ಸೈನ್ಸ್ ಮತ್ತು ಹೈ-ಪರ್ಫಾರ್ಮೆನ್ಸ್ ಕಂಪ್ಯೂಟಿಂಗ್– ಬಾಹ್ಯಾಕಾಶ ಡೇಟಾ ವಿಶ್ಲೇಷಣೆ

• ಜನರಿಗೆ ಬ್ರಹ್ಮಾಂಡದ ಬಗ್ಗೆ ಅರಿವು ಮೂಡಿಸುವುದು

ಉದ್ಯೋಗಾವಕಾಶ

• ಸಂಶೋಧನಾ ಸಂಸ್ಥೆಗಳಲ್ಲಿ ಆ್ಯಸ್ಟ್ರೋಫಿಸಿಸ್ಟ್/ಸ್ಪೇಸ್ ಸೈಂಟಿಸ್ಟ್

• ನಕ್ಷತ್ರಾಲಯಗಳಲ್ಲಿ ಅಬ್ಸರ್ವೇಟರಿ ಸೈಂಟಿಸ್ಟ್, ಬಾಹ್ಯಾಕಾಶ ಡೇಟಾ ವಿಶ್ಲೇಷಣೆ

• ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರು

• ಉಪಗ್ರಹ, ರಾಕೆಟ್ ತಂತ್ರಜ್ಞಾನ, ಎಐ ಆಧಾರಿತ ಅಂತರಿಕ್ಷ ಸಂಶೋಧನೆ

• ಕಾರ್ಪೊರೇಟ್ ಕ್ಷೇತ್ರದ ಅವಕಾಶಗಳು

• ಆ್ಯಸ್ಟ್ರೋಫೋಟೊಗ್ರಾಫರ್

• ಇನ್ನಿತರ ಸಂಶೋಧನೆಗಳು

ಇತ್ತೀಚಿನ ವರದಿಗಳ ಪ್ರಕಾರ, ಆ್ಯಸ್ಟ್ರೋಫಿಸಿಕ್ಸ್ ಸಂಬಂಧಿತ ಉದ್ಯೋಗಗಳು ಸಾಮಾನ್ಯ ಉದ್ಯೋಗಗಳಿಗಿಂತ ವೇಗವಾಗಿ ಬೆಳೆಯುತ್ತಿವೆ.

ಪ್ರಮುಖ ಕಾಲೇಜುಗಳು

• ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆ್ಯಸ್ಟ್ರೋಫಿಸಿಕ್ಸ್, ಬೆಂಗಳೂರು

• ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ, ತಿರುವನಂತಪುರ

• ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಅಸ್ಟ್ರಾನಮಿ ಆ್ಯಂಡ್ ಆ್ಯಸ್ಟ್ರೋಫಿಸಿಕ್ಸ್, ಪುಣೆ

• ಟಾಟಾ ಇನ್ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್, ಮುಂಬೈ

• ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಜಿನಿಯರಿಂಗ್ ಫಿಸಿಕ್ಸ್)

ಕೋರ್ಸ್ಗಳು

• ಬಿಟೆಕ್, ಎಂಟೆಕ್ (ಏರೋಸ್ಪೇಸ್, ಸ್ಪೇಸ್ ಟೆಕ್ನಾಲಜಿ, ಎಂಜಿನಿಯರಿಂಗ್ ಫಿಸಿಕ್ಸ್)

• ಬಿ.ಎಸ್ಸಿ (ಆ್ಯಸ್ಟ್ರೋಫಿಸಿಕ್ಸ್)

• ಬಿ.ಎಸ್ಸಿ (ಆ್ಯಸ್ಟ್ರೋಫಿಸಿಕ್ಸ್- ಆನರ್ಸ್)

• ಎಂ.ಎಸ್ಸಿ (ಆ್ಯಸ್ಟ್ರೋಫಿಸಿಕ್ಸ್)

• ಪಿಎಚ್.ಡಿ (ಆ್ಯಸ್ಟ್ರೋಫಿಸಿಕ್ಸ್)

ಪ್ರವೇಶ ಪರೀಕ್ಷೆಗಳು: ಐಐಟಿ-ಜೆಇಇ, ಕೆಸಿಇಟಿ, ಐಐಟಿ-ಜೆಎಎಮ್, ಬಿಟ್ಸಾಟ್ ...

ಲೇಖಕ: ಶಿಕ್ಷಣ ತಜ್ಞ ಮತ್ತು ವೃತ್ತಿ ಸಲಹೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.