ಬೆಂಗಳೂರು: ನಗರದ ಮಿದುಳು ತಜ್ಞರು, ಮನೋವೈದ್ಯರು ಮತ್ತು ನರವಿಜ್ಞಾನಿಗಳನ್ನು ಒಳಗೊಂಡ ತಂಡವೊಂದು ಮನೋವೈದ್ಯಕೀಯ ಅಸ್ವಸ್ಥತೆಗಳನ್ನು ವಿಶ್ಲೇಷಿಸಲು ‘ಕಾಮ್–ಬ್ರೈನ್’ ಡಿಜಿಟಲ್ ಮಾಹಿತಿ ಭಂಡಾರವನ್ನು ಅಭಿವೃದ್ಧಿ ಪಡಿಸಿದ್ದಾರೆ.

ಮಾನಸಿಕ ಅಸ್ವಸ್ಥತೆಗಳಿಂದ ಬಳಲುತ್ತಿರುವ ರೋಗಿಗಳ ಮಿದುಳಿನ ರಚನೆ ಮತ್ತು ಅದರ ಕಾರ್ಯಾಚರಣೆ ಬಗ್ಗೆ ಎಲ್ಲ ಮಾಹಿತಿಯನ್ನು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸುವ, ವ್ಯವಸ್ಥಿತವಾಗಿ ದಾಖಲಿಸುವ ಭಾರತದ ಮೊಟ್ಟಮೊದಲ ಪ್ರಯತ್ನ ಇದಾಗಿದೆ.

ರೋಹಿಣಿ ನಿಲೇಕಣಿ ಸೆಂಟರ್ ಫಾರ್ ಬ್ರೈನ್ ಆ್ಯಂಡ್ ಮೈಂಡ್ನ (ಸಿಬಿಎಂ) ಸಂಶೋಧಕರು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಹಾಗೂ ರಾಷ್ಟ್ರೀಯ ಜೈವಿಕ ವಿಜ್ಞಾನ ಕೇಂದ್ರ (ಎನ್ಸಿಬಿಎಸ್)– ಟಿಐಎಫ್ಆರ್ ಸಹಯೋಗದಲ್ಲಿ ಹತ್ತು ವರ್ಷಗಳಿಂದ ಸಂಶೋಧನೆ ನಡೆಸಿ, ‘ಕಾಮ್-ಬ್ರೈನ್’ ಅಭಿವೃದ್ಧಿಪಡಿಸಿದ್ದಾರೆ. ನಗರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಈ ಡಿಜಿಟಲ್ ಮಾಹಿತಿ ಭಂಡಾರ ಅನಾವರಣ ಮಾಡಿದ್ದಾರೆ.

‘ನರಮನೋವೈದ್ಯಕೀಯ ಅಸ್ವಸ್ಥತೆಗಳನ್ನು ಅಧ್ಯಯನ ಮಾಡುವ ಗುರಿ ಹೊಂದಿರುವ ಭಾರತದ ಯಾವುದೇ ವೈದ್ಯರು ಮತ್ತು ಸಂಶೋಧಕರು, ಈ ಬಹುಮಾದರಿ ಡಿಜಿಟಲ್ ಭಂಡಾರದ ನೆರವು ಪಡೆಯಬಹುದಾಗಿದೆ. ಇದರಿಂದಾಗಿ ರೋಗದ ಆಕ್ರಮಣ, ಪ್ರಗತಿ ಮತ್ತು ಅದಕ್ಕೆ ಸಂಬಂಧಿಸಿರುವ ಜೈವಿಕ ಬದಲಾವಣೆಗಳು ಹಾಗೂ ರೋಗದ ಲಕ್ಷಣಗಳ ನಡುವಿನ ಪರಸ್ಪರ ಸಂಬಂಧಗಳನ್ನು ನಿಖರವಾಗಿ ಅರ್ಥ ಮಾಡಿಕೊಳ್ಳಬಹುದು’ ಎಂದು ಸಿಬಿಎಂ ಸಂಶೋಧಕರು ತಿಳಿಸಿದರು.

‘ಕಾಮ್-ಬ್ರೈನ್ ಅಡಿ ನಡೆಸಿದ ಸಂಶೋಧನೆಗಳು ಮಾನಸಿಕ ಅಸ್ವಸ್ಥತೆಗಳ ಕುರಿತಾದ ತಿಳಿವಳಿಕೆಯನ್ನು ಅರ್ಥೈಸುವಲ್ಲಿ ಅಪಾರ ಸಾಮರ್ಥ್ಯವನ್ನು ಹೊಂದಿವೆ. ರೋಗ ನಿವಾರಣೆ ವಿಧಾನವನ್ನು ಗುರುತಿಸಲು ಮತ್ತು ವ್ಯಕ್ತಿಗತ ಚಿಕಿತ್ಸೆಗಳನ್ನು ಯೋಜಿಸುವಲ್ಲಿ ಸಹಾಯ ಮಾಡುತ್ತದೆ’ ಎಂದರು.

ಚಿಕಿತ್ಸೆಗೆ ಸಹಕಾರಿ: ‘ಕಾಮ್–ಬ್ರೈನ್ ಅಡಿ ಸಂಗ್ರಹಿಸಲಾದ ದತ್ತಾಂಶವು ಪರಿಣಾಮಕಾರಿ ಚಿಕಿತ್ಸೆಯ ಅಭಿವೃದ್ಧಿಗೆ ನಮಗೆ ಸಹಾಯ ಮಾಡುತ್ತದೆ’ ಎಂದು ಎನ್ಸಿಬಿಎಸ್ನ ನಿರ್ದೇಶಕ ಪ್ರೊ.ಎಲ್.ಎಸ್. ಶಶಿಧರ್ ಹೇಳಿದರು.

‘ಸಾಂಪ್ರದಾಯಿಕ ರೋಗನಿರ್ಣಯ ಚೌಕಟ್ಟುಗಳನ್ನು ಮೀರಿದ, ತೀವ್ರ ಮನೋವೈದ್ಯಕೀಯ ಕಾಯಿಲೆಗಳ ಜೈವಿಕ ಗುರುತುಗಳನ್ನು ಗುರುತಿಸುವುದು ಈ ಯೋಜನೆಯ ಪ್ರಾಥಮಿಕ ಗುರಿಯಾಗಿದೆ. ಇದರ ಜತೆಗೆ, ರೋಗದ ಮೂಲಭೂತ ಜೈವಿಕ ಕಾರ್ಯವಿಧಾನಗಳನ್ನು ಗುರುತಿಸಲು ನಾವು ಪ್ರಯತ್ನಿಸುತ್ತೇವೆ’ ಎಂದು ಸಿಬಿಎಂ– ನಿಮ್ಹಾನ್ಸ್ನ ಸಂಯೋಜಕರಾದ ಪ್ರೊ.ವೈ.ಸಿ. ಜನಾರ್ದನ ರೆಡ್ಡಿ ಮಾಹಿತಿ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-4-302653491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.