ಬೆಂಗಳೂರು: ಜವಾಹರ್ಲಾಲ್ ನೆಹರೂ ತಾರಾಲಯದಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಆಕಾಶಮಂಡಲ ಪ್ರದರ್ಶನ ‘ವಾಯೇಜರ್– ದ ನೆವರ್ ಎಂಡಿಂಗ್ ಜರ್ನಿ’ ವಿಶೇಷ ಆಕರ್ಷಣೆಯಾಗಿದೆ.

ಈ ಆಕಾಶಮಂಡಲ ಪ್ರದರ್ಶನವು, 1977ರಲ್ಲಿ ನಾಸಾ ಉಡಾವಣೆ ಮಾಡಿದ ಎರಡು ವಾಯೇಜರ್ ನೌಕೆಗಳ ಕಥನವನ್ನು ಅತ್ಯಂತ ಪರಿಣಾಮಕಾರಿಯಾಗಿ ವಿವರಿಸುತ್ತದೆ. ಕ್ಷುದ್ರ ಗ್ರಹಗಳ ಪಟ್ಟಿಯನ್ನು ದಾಟಿ ಸೌರವ್ಯೂಹದ ಆಚೆಗಿನ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ ಈ ನೌಕೆಗಳ ಪಯಣವು ಈ ಪ್ರದರ್ಶನದ ವಿಶೇಷ.

ವೀಕ್ಷಕರು ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್ ಗ್ರಹಗಳು ಹಾಗೂ ಅವುಗಳ ಉಪಗ್ರಹಗಳ ದೃಶ್ಯ, ಅನಿಮೇಷನ್ ಕಣ್ತುಂಬಿಕೊಳ್ಳಬಹುದಾಗಿದ್ದು, ವಿಶಿಷ್ಟ ಅನುಭವ ನೀಡಲಿದೆ.

ವಾಯೇಜರ್ ಪ್ರದರ್ಶನ ಅವಧಿ 33 ನಿಮಿಷ. ಇದು 24 ನಿಮಿಷಗಳ ಮುಖ್ಯ ಆಕಾಶ ಪ್ರದರ್ಶನ, ಬಾಹ್ಯಾಕಾಶ ಯುಗಕ್ಕೂ ಮುನ್ನ ನಡೆದ ಗ್ರಹಗಳ ವೀಕ್ಷಣೆ ಮತ್ತು ಆವಿಷ್ಕಾರಗಳ ಇತಿಹಾಸ ವಿವರಿಸುವ 9 ನಿಮಿಷದ ಮುನ್ನುಡಿ ಒಳಗೊಂಡಿದೆ. ಇದರ ಜೊತೆಗೆ, ತಾರಾಲಯ ನಿರ್ಮಿಸುತ್ತಿರುವ ಮುಂಬರುವ ಪ್ರದರ್ಶನ ‘ಚಂದ್ರಯಾನ: ಭಾರತದ ರೋಮಾಂಚಕಾರಿ ಚಂದ್ರ ಪಯಣ’ದ3 ನಿಮಿಷಗಳ ಟ್ರೇಲರ್ ಅನ್ನು ಪ್ರದರ್ಶಿಸಲಾಗುತ್ತದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಗುರುವಾರ ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ‘ವಾಯೇಜರ್ ಅಭಿಯಾನ ಜಗತ್ತು ಮೀರಿ ಜ್ಞಾನ ಅನ್ವೇಷಿಸುವ ಮಾನವಕುಲದ ಅಂತಿಮ ಹುಡುಕಾಟ ಪ್ರತಿನಿಧಿಸುತ್ತದೆ. ನೆಹರೂ ತಾರಾಲಯವು ಇಂತಹ ವಿಶ್ವದರ್ಜೆಯ ಶೈಕ್ಷಣಿಕ ಪ್ರದರ್ಶನಗಳ ಮೂಲಕ ಯುವಜನತೆಯಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುತ್ತಿದೆ’ ಎಂದು ತಿಳಿಸಿದರು.

ತಾರಾಲಯದ ಆಡಳಿತ ಮಂಡಳಿ ಅಧ್ಯಕ್ಷ ಎ. ಎಸ್. ಕಿರಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಪ್ರತಿ ಪ್ರದರ್ಶನದಲ್ಲಿ ಲಭ್ಯವಿರುವ 200 ಆಸನಗಳ ಪೈಕಿ 150 ಆಸನಗಳನ್ನು ‘ಬುಕ್ ಮೈ ಶೋ’ ವೆಬ್ಸೈಟ್ ಮೂಲಕ ಆನ್ಲೈನ್ನಲ್ಲಿ ಕಾಯ್ದಿರಿಸಬಹುದು. ಉಳಿದ 50 ಆಸನಗಳ ಟಿಕೆಟ್ಗಳನ್ನು ಪ್ರತಿ ಪ್ರದರ್ಶನ ಪ್ರಾರಂಭವಾಗುವ ಅರ್ಧ ಗಂಟೆ ಮೊದಲು ಟಿಕೆಟ್ ಕೌಂಟರ್ನಲ್ಲಿ ನೀಡಲಾಗುವುದು ಎಂದು ಜವಾಹರ್ಲಾಲ್ ನೆಹರೂ ತಾರಾಲಯದ ನಿರ್ದೇಶಕ ಬಿ. ಆರ್. ಗುರುಪ್ರಸಾದ್ ತಿಳಿಸಿದ್ದಾರೆ.

ವೀಕ್ಷಣೆ ಯಾವಾಗ

ಇಂಗ್ಲಿಷ್ ಪ್ರದರ್ಶನ: ಬೆಳಿಗ್ಗೆ 10.30, ಸಂಜೆ 4.30, ಸಂಜೆ 5.30
ಕನ್ನಡ ಪ್ರದರ್ಶನ: ಬೆಳಿಗ್ಗೆ 11.30, ಮಧ್ಯಾಹ್ನ 3.30

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.