ದೇಹದ ಕೊಲೆಸ್ಟ್ರಾಲ್ ಕರಗಿಸಲು ಜನ ಒದ್ದಾಡುತ್ತಿರುವುದು ಈಗ ಸಾಮಾನ್ಯ ವಿಷಯ. ಆದರೆ ಅದು ಅಂದುಕೊಂಡಷ್ಟು ಸುಲಭದ ಮಾತಲ್ಲ! ಅದು ನಮ್ಮ ನಿಮ್ಮೆಲ್ಲರ ಕಥೆಯಾದರೆ. ನಮ್ಮ ಜೀವಕೋಶಗಳೊಳಗೆ ಸೂಕ್ಷ್ಮಮಟ್ಟದಲ್ಲಿ ಬೇರೆಯದೇ ಕಥೆ ಜರುಗುತ್ತಿದೆ ನೋಡಿ; ಅದುವೇ ಕ್ಯಾನ್ಸರ್ಕೋಶಗಳು ಕೊಲೆಸ್ಟ್ರಾಲ್ಗಾಗಿ ಬಯಕೆ ಹೊತ್ತು ಕುಳಿತಿವೆ ಎನ್ನುವುದು.

ಹೌದು, ಕ್ಯಾನ್ಸರ್ ರೋಗಿಗಳ ದೇಹದಲ್ಲಿ ಕ್ಯಾನ್ಸರ್ ಗಡ್ಡೆಗಳು ಬೆಳೆಯಲು ಕೊಲೆಸ್ಟ್ರಾಲ್ ಅನ್ನು ಬಳಸಿಕೊಳ್ಳಲು ಪಟ್ಟುಹಿಡಿದು ಕುಳಿತಿರುತ್ತವೆಯಂತೆ. ಕೆಲವು ಗಡ್ಡೆಗಳಂತು ತಮಗೆ ಎಷ್ಟು ಸಾಧ್ಯವೋ ಅಷ್ಟೂ, ಆರೋಗ್ಯಕರ ಕೋಶಗಳಿಗಿಂತಲೂ ಹೆಚ್ಚಿನ ಕೊಲೆಸ್ಟ್ರಾಲ್ ಅನ್ನು ಬಳಸಿಕೊಳ್ಳುವ ದಾಹ ಪಡೆದಿರುತ್ತವಂತೆ!

ಆದರೆ ಮೊನ್ನೆ, ಸ್ಯಾನ್ಫೋರ್ಡ್ ಬರ್ನ್ಹ್ಯಾಮ್ ಪ್ರೆಬೀಸ್ ಸಂಸ್ಥೆಯ ವಿಜ್ಞಾನಿಗಳು ಈ ಕ್ಯಾನ್ಸರ್ಗಡ್ಡೆಗಳ ಈ ಕೊಲೆಸ್ಟ್ರಾಲ್ ಬಯಕೆಯನ್ನು ಪತನಗೊಳಿಸಿ, ಅದರ ಕಥೆಯನ್ನು ಬದಲಿಸಿರುವ ವರದಿಯು ‘ಸೈನ್ಸ್ ಅಡ್ವಾನ್ಸಸ್ ಪತ್ರಿಕೆ’ಯಲ್ಲಿ ವರದಿ ಆಗಿದೆ.

ಈ ಕ್ರಿಯೆಯಲ್ಲಿ ಕಿಣ್ವಗಳು ತೊಡಗಿವೆ ಎನ್ನುವುದು ಈಗಾಗಲೇ ತಿಳಿದ್ದಿದ್ದರಿಂದ ಅವರು ಆ ಕಿಣ್ವಗಳಾದ ‘ಫಾಸ್ಫೋಇನ್ಸೋಸಿಟೈಡ್ಸ್’ ಮತ್ತು ‘ಕೈನೇಸ್ ಕಿಣ್ವಗಳು’ (PI5P4Ks)ಅನ್ನು ಅಧ್ಯಯನ ಮಾಡಿದ್ದಾರೆ. ನಮ್ಮ ದೇಹದಲ್ಲಿರುವ ಕೊಲೆಸ್ಟ್ರಾಲ್, ಎಲ್ಲ ಜೀವಕೋಶಗಳ ಸುತ್ತ ಚಲಿಸಬೇಕಾದರೂ ಈ ಕಿಣ್ವಗಳ ಅಗತ್ಯವಿದೆ. ನಮ್ಮ ದೇಹದಲ್ಲಿರುವ ಪ್ರತಿ ಅಂಗಗಳಿಗೂ ಪ್ರತಿ ಕಾರ್ಯಗಳಿಗೂ ಈ ಕೊಲೆಸ್ಟರಾಲಿನ ಅವಶ್ಯಕತೆಯಿದೆ. ಹಾಗಾಗಿ ಕೊಲೆಸ್ಟ್ರಾಲ್ ನಮ್ಮ ದೇಹದ ತುಂಬೆಲ್ಲಾ ಚಲಿಸುತ್ತಲೇ ಇರಬೇಕು. ಆದರೆ ಈ ಕಿಣ್ವಗಳಿಲ್ಲದೇ ಕೊಲೆಸ್ಟ್ರಾಲ್ ಚಲಿಸುವುದಿಲ್ಲ.

ಇನ್ನು ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿಯೇ ರಕ್ಷಾಕವಚವಾಗಿ ಕೆಲವು ಜೀನ್ಗಳಿವೆ. ಅಂತೆಯೇ ಕ್ಯಾನ್ಸರ್ಕೋಶಗಳನ್ನು ಅಡಗಿಸಬಲ್ಲ ಜೀನೊಂದಿದೆ. ಅದುವೇ ‘ಟಿಪಿ53’ (TP53). ಇದನ್ನು ‘ಜೀನೋಮು ರಕ್ಷಕರು’ ಎನ್ನುತ್ತೇವೆ. ಇವು ಪ್ರತಿ ಜೀವಕೋಶಗಳಲ್ಲಿಯೂ ಇರುತ್ತವೆ. ಕ್ಯಾನ್ಸರ್ಗೆ ತುತ್ತಾಗಿರುವ ಕೋಶಗಳಲ್ಲಿಯೂ ಇರುತ್ತವೆ. ಆದರೆ, ಕ್ಯಾನ್ಸರ್ ಗಡ್ಡೆಗಳಲ್ಲಿರುವ ಈ ಜೀನುಗಳು ಮ್ಯುಟೇಷನ್ ಅಥವಾ ರೂಪಾಂತರಕ್ಕೆ ಒಳಗಾಗಿಬಿಡುತ್ತವೆ; ಮತ್ತು ಅವಕ್ಕೆ ಬೇಕಿರುವ ಕೊಲೆಸ್ಟ್ರಾಲ್ ಅನ್ನು ತಾವೇ ಉತ್ಪಾದಿಸಿಕೊಂಡು ಬಿಡುತ್ತವೆ. ಕೈನೇಸ್ ಕಿಣ್ವಗಳನ್ನು ಕೋಶಗಳಿಂದ ಡಿಲೀಟ್ ಮಾಡಿದರೆ ಕ್ಯಾನ್ಸರ್ಗಡ್ಡೆಗಳು ಬೆಳೆಯುವುದು ಅಸಾಧ್ಯ; ರೋಗಿಯೂ ಪ್ರತಿಶತ 100ರಷ್ಟು ಪ್ರಾಣಹಾನಿಯಿಂದ ಸುರಕ್ಷಿತ ಎನ್ನುವುದು ವಿಜ್ಞಾನಿಗಳಿಗೆ ಈಗಾಗಾಲೇ ತಿಳಿದಿತ್ತು. ಆದರೆ ಹೇಗೆ ಎಂದು ಅರ್ಥವಾಗಿರಲಿಲ್ಲ.

ಈ ಒಗಟನ್ನು ಬಿಡಿಸಿದ ವಿಜ್ಞಾನಿಗಳಿಗೆ, ಈ ಕಿಣ್ವಗಳು ಕೊಲೆಸ್ಟ್ರಾಲ್ ಅನ್ನು ಸಾಗಿಸುತ್ತಿದ್ದು, ಕ್ಯಾನ್ಸರ್ ಬೆಳವಣಿಗೆಯಲ್ಲಿ ಕೊಲೆಸ್ಟ್ರಾಲ್ ತೊಡಗಿಕೊಂಡಿರುವುದು ಗೊತ್ತಾಗಿದೆ. ಹಾಗಾಗಿ ಈ ಕಿಣ್ವವನ್ನೇ ಡಿಲೀಟ್ ಮಾಡಿಬಿಟ್ಟರೆ ಕ್ಯಾನ್ಸರ್ಗಡ್ಡೆಗಳಿಗೆ ಬೇಕಾಗಿರುವ ಕೊಲೆಸ್ಟ್ರಾಲ್ ದೊರಕುವುದಿಲ್ಲ ಎನ್ನುವುದು ಇವರ ಉಪಾಯ. ಅದಕ್ಕಾಗಿ ಈ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವ ಕಿಣ್ವಗಳ ಹರಿವನ್ನು ನಿಯಂತ್ರಣದಲ್ಲಿಟ್ಟರೆ ಕೊಲೆಸ್ಟ್ರಾಲ್ ದಟ್ಟಣೆ ಉಂಟಾಗುತ್ತದೆ. ಅರ್ಥಾತ್, ಅವು ಚಲಿಸದೆ ಕೋಶಕೇಂದ್ರದ ಬಳಿಯಲ್ಲಿಯೇ ಉಳಿದಿರುತ್ತದೆ. ಕ್ಯಾನ್ಸರ್ಕೋಶಗಳ ಬೆಳವಣಿಗೆಗೆ ಸಿಗುವುದಿಲ್ಲ. ಆಗ ಅವುಗಳ ಬೆಳವಣಿಗೆಗೆ ಬ್ರೇಕ್ ಬೀಳುತ್ತದೆ!

ಮೊದಲು ಹೇಳಿದ ‘ಟಿಪಿ53’ (TP53) ರಕ್ಷಕಜೀನುಗಳು ಸುಮಾರು ಅರ್ಧದಷ್ಟು ಕ್ಯಾನ್ಸರ್ಕೋಶಗಳಲ್ಲಿ ರೂಪಾಂತರವಾಗಿಬಿಟ್ಟಿರುತ್ತವೆ.ಅರ್ಥಾತ್, ಅವುಗಳಿಗೆ ಬೇಕಾದ ಕೊಬ್ಬನ್ನು ಆ ಕೋಶಗಳೇ ಉತ್ಪಾದಿಸಿಕೊಳ್ಳುತ್ತವೆ. ಸ್ತನಕ್ಯಾನ್ಸರ್ ಕೋಶಗಳಲ್ಲಿ ಈ ರೂಪಾಂತರ ಇತರೆ ಕ್ಯಾನ್ಸರ್ಗಳಿಗಿಂತ ಸುಮಾರು ಪ್ರತಿಶತ 20-40ರಷ್ಟು ಹೆಚ್ಚು ಇರುತ್ತವೆಯಂತೆ. ಹಾಗಾಗಿ ಸ್ತನಕ್ಯಾನ್ಸರ್ ರೋಗಿಗಳಲ್ಲಿ ಈ ರೂಪಾಂತರವನ್ನು ತಡೆಯುವುದು ರಿಯಾನ್ ಮತ್ತು ಸಂಗಡಿಗರ ಮುಖ್ಯ ಉದ್ದೇಶ.

ಸದ್ಯ ಇಲಿಗಳು ಹಾಗೂ ಮಾನವ ಕ್ಯಾನ್ಸರ್ಕೋಶಗಳನ್ನು ಮೇಲೆ ಪ್ರಯೋಗ ಮಾಡಿದಾಗ ಜೀನೋಮು ರಕ್ಷಕರೆಂದು ಕರೆಸಿಕೊಂಡಿರುವ ಟಿಪಿ53 ಜೀನುಗಳನ್ನು ಕಳೆದುಕೊಳ್ಳುತ್ತಿದ್ದಂತೆ ನಾಲ್ಕರಿಂದ ಎಂಟು ತಿಂಗಳೊಳಗೆ ಕ್ಯಾನ್ಸರ್–ರೋಗಿ ಇಲಿಗಳು ಸಾಯುತ್ತವೆ ಎಂದು ಗೊತ್ತಾಗಿದೆ.

ಜೀವಕೋಶಗಳಲ್ಲಿ ‘ಲೈಸೋಸೋಮು’ ಎನ್ನುವ ಸಣ್ಣ ಭಾಗಗಳಿದ್ದು ಅವು ಕೊಲೆಸ್ಟ್ರಾಲ್ ಅನ್ನು ಸಂಗ್ರಹಿಸಿಕೊಂಡಿರುತ್ತವೆ. ಕೊಲೆಸ್ಟ್ರಾಲ್ ಸಾಗಾಣಿಕೆಯೇ ಮುಖ್ಯ ಕೆಲಸವಾಗಿರುವ ಕೈನೇಸು ಕಿಣ್ವಗಳು, ನ್ಯೂಕ್ಲಿಯಸ್ ಬಳಿಯಿರುವ ಲೈಸೋಸೋಮುಗಳನ್ನೆಲ್ಲಾ ಜೀವಕೋಶದ ಹೊರಭಾಗಕ್ಕೆ ಸಾಗಿಸಿಬಿಡುತ್ತದೆ. ಕ್ಯಾನ್ಸರ್ ಕೋಶಗಳಿಗೆ ಕೊಲೆಸ್ಟ್ರಾಲ್ ಸಿಗಬೇಕಾದರೆ ಅವುಗಳಿರುವ ಜಾಗ ಬಹಳ ಮುಖ್ಯ. ಜೀವಕೋಶದ ಹೊರಗಿದ್ದಾಗ ಅಲ್ಲಿರುವ ರಿಸೆಪ್ಟಾರ್ ಪ್ರೊಟೀನುಗಳು, ಕಿಣ್ವಗಳು ಹಾಗೂ ಇವುಗಳನ್ನು ಸ್ವೀಕರಿಸುವ ಅಣುಗಳು (Signalling Molecules), ಜೀವಕೋಶಗಳಿಗೆ ಏನು ಮಾಡಬೇಕೆಂದು ನಿರ್ದೇಶಿಸುತ್ತವೆ. ರಿಸೆಪ್ಟಾರ್ ಪ್ರೋಟೀನುಗಳೆಂದರೆ ಸಿಕ್ಕ ಮಾಹಿತಿಯನ್ನು ಬಳಸಿಕೊಂಡು ಜೀವಕೋಶಗಳು ಹೇಗೆ ವರ್ತಿಸಬೇಕೆನ್ನುವುದನ್ನು ನಿಯಂತ್ರಿಸುವ ಪ್ರೋಟೀನುಗಳು.

ಸಾಮಾನ್ಯವಾಗಿ ಎಲ್ಲಾ ಜೀವಕೋಶಗಳಲ್ಲಿ ಬೆಳವಣಿಗೆ, ಚಯಾಪಚಯ ಕ್ರಿಯೆ, ಪ್ರೊಟೀನಿನ ಉತ್ಪಾದನೆ ಇವೆಲ್ಲವನ್ನೂ ನಿಯಂತ್ರಿಸುವುದು ‘ರ್ಯಾಪಾಮೈಸಿನ್ ಕಾಂಪ್ಲೆಕ್ಸ್ 1’ ಎನ್ನುವ ಮತ್ತೊಂದು ಕಿಣ್ವ. ಕ್ಯಾನ್ಸರ್ಕೋಶಗಳಲ್ಲಿ ಈ ಕಿಣ್ವಗಳು ಅತಿಯಾಗಿ ಸಕ್ರಿಯವಾಗಿಬಿಡುತ್ತವೆ. ಆಗ ಕೋಶಗಳು ಯಥೇಚ್ಛವಾಗಿ ಬೆಳವಣಿಗೆಯಾಗಲು ಆರಂಭವಾಗುತ್ತದೆ. ಕ್ಯಾನರ್ ಎಂದರೆ ಕೋಶಗಳ ಅನಿಯಂತ್ರಿತ ಬೆಳವಣಿಗೆಯಲ್ಲವೇ. ಈಗ ಸಿಗ್ನಲಿಂಗ್ ಅಣುಗಳು ‘ಕೋಶಗಳ ಬೆಳವಣಿಗೆ’ ಎಂದು ಸಂದೇಶ ಕೊಟ್ಟರೆ, ರಿಸೆಪ್ಟಾರುಗಳು ಅದನ್ನು ಜೀವಕೋಶಗಳಿಗೆ ಹೇಳಿ ಅನಿಯಂತ್ರಿತವಾಗಿ ಬೆಳೆಯುವಂತೆ ಮಾಡುತ್ತವೆ.

ಒಟ್ಟಾರೆ, ಲೈಸೋಸೋಮುಗಳು ‘ರ್ಯಾಪಾಮೈಸಿನ್ ಕಾಂಪ್ಲೆಕ್ಸ್ 1’ರಿಂದ ದೂರ ಉಳಿಯಬೇಕು. ಆಗ ರಿಸೆಪ್ಟಾರುಗಳಿಗೆ ಬೇಕಾದ ಆಹಾರ ಸಿಗದಂತಾಗಿ ‘ಬೆಳವಣಿಗೆ’ ಸಂದೇಶಗಳು ತಗ್ಗುತ್ತವೆ. ಕ್ಯಾನ್ಸರ್ ಕೋಶಗಳ ಬೆಳವಣಿಗೆಯೂ ತಗ್ಗುತ್ತವೆ. ಹಾಗಾಗಿ ಈ ಕೈನೇಸು ಕಿಣ್ವಗಳನ್ನು ಬಂಧಿಸುವುದು ಹಾಗೂ ‘ರ್ಯಾಪಾಮೈಸಿನ್ ಕಾಂಪ್ಲೆಕ್ಸ್ 1’ರ ಮೇಲೆ ಗಮನ ಇಡಬೇಕಾದದ್ದು ಈ ಚಿಕಿತ್ಸೆಯ ಮುಖ್ಯ ಭಾಗ ಎನ್ನುತ್ತಾರೆ, ಸಂಶೋಧಕರಾದ ರಿಯಾನ್ ಮತ್ತು ಎಮರ್ಲಿಂಗ್.

ಅಂತೂ ಈ ಪ್ರಕ್ರಿಯೆಯಲ್ಲಿ ಯಾವ ಕಿಣ್ವಗಳನ್ನು ಬಂಧಿಸಬೇಕು ಎಂದು ಅರ್ಥವಾಗಿರುವುದರಿಂದ, ಈಗ ಕ್ಯಾನ್ಸರ್–ಔಷಧದ ತಯಾರಿಕೆ ಸುಲಭವಾಗಿರುವುದು ಸಂತಸದ ಸಂಗತಿ!v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-51-470599493

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.