ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಮೇಲ್ಮೈನಲ್ಲಿ ನೀರಿನ ಕಣ ಪತ್ತೆ

Last Updated 12 ಆಗಸ್ಟ್ 2021, 20:01 IST
ಅಕ್ಷರ ಗಾತ್ರ

ನವದೆಹಲಿ: ಚಂದ್ರನ ಮೇಲ್ಮೈನಲ್ಲಿ ನೀರಿನ ಕಣಗಳು ಇರುವುದನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-2 ಚಂದ್ರ ಪರಿಭ್ರಮಣ ಉಪಗ್ರಹವು ಪತ್ತೆ ಮಾಡಿದೆ ಎಂದು ಅಧ್ಯಯನ ವರದಿ ಹೇಳಿದೆ.

ಚಂದ್ರಯಾನ-2 ಕಾರ್ಯಕ್ರಮದ ಲ್ಯಾಂಡರ್ ನೌಕೆಯು ಚಂದ್ರನ ಮೇಲ್ಮೈನಲ್ಲಿ ಇಳಿಯಲು ವಿಫಲವಾಗಿತ್ತು. ಆದರೆ ಆರ್ಬಿಟರ್ ಉಪಗ್ರಹವು ಯಶಸ್ವಿಯಾಗಿ ಕಕ್ಷೆ ಸೇರಿತ್ತು. ಈ ಉಪಗ್ರಹವು ಪೂರ್ವಯೋಜನೆಯಂತೆ ಕೆಲಸ ಮಾಡುತ್ತಿದ್ದು, ದತ್ತಾಂಶಗಳನ್ನು ರವಾನೆ ಮಾಡುತ್ತಿದೆ. ಈ ದತ್ತಾಂಶಗಳನ್ನು ಆಧರಿಸಿ ನಡೆಸಲಾದ ಅಧ್ಯಯನವು, ‘ಚಂದ್ರನ ಮೇಲ್ಮೈನಲ್ಲಿ ನೀರಿನ ಕಣಗಳನ್ನು ಪತ್ತೆಮಾಡಲಾಗಿದೆ’ ಎಂದು ಹೇಳಿದೆ.

‘ಆರ್ಬಿಟರ್‌ ಉಪಗ್ರಹದಲ್ಲಿ ಇನ್ಫ್ರಾರೆಡ್ ಸ್ಪೆಕ್ಟ್ರೋಮೀಟರ್‌ ಇದ್ದು. ಅದು ಕಳುಹಿಸುವ ದತ್ತಾಂಶವನ್ನು ವಿಶ್ಲೇಷಿಸಲಾಗಿದೆ. ಚಂದ್ರನ ಮೇಲ್ಮೈನ ಕೆಲವು ಶಿಲೆಗಳಲ್ಲಿ ನೀರಿನ ಕಣಗಳು ಇರುವುದು ಪತ್ತೆಯಾಗಿದೆ’ ಎಂದು ಇಸ್ರೊ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT