ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ಅತ್ಯಾಧುನಿಕ ನೌಕೆ ಮೂಲಕ 22 ಉಪಗ್ರಹ ಉಡಾವಣೆ

Last Updated 27 ಫೆಬ್ರುವರಿ 2022, 12:44 IST
ಅಕ್ಷರ ಗಾತ್ರ

ಬೀಜಿಂಗ್‌ (ಪಿಟಿಐ): ಚೀನಾವು ತನ್ನ ಅತ್ಯಾಧುನಿಕ ನ್ಯೂ ಲಾಂಗ್‌ ಮಾರ್ಚ್‌–8 ರಾಕೆಟ್‌ ಮೂಲಕ 22 ಉಪಗ್ರಹಗಳನ್ನು ಭಾನುವಾರ ನಭಕ್ಕೆ ಸೇರಿಸಿದೆ.

ಈ ಮೂಲಕ ಒಂದೇ ರಾಕೆಟ್‌ ಮೂಲಕ ಅತಿಹೆಚ್ಚು ಉಪಗ್ರಹಗಳನ್ನು ಅಂತರಿಕ್ಷಕ್ಕೆ ಹಾರಿಬಿಟ್ಟ ದೇಶೀಯ ದಾಖಲೆ ಬರೆದಿದೆ.

ದಕ್ಷಿಣ ಹೈನಾನ್ ಪ್ರಾಂತ್ಯದ ವೆನ್ಚಾಂಗ್ ಬಾಹ್ಯಾಕಾಶ ನೌಕೆ ಉಡಾವಣಾ ಕೇಂದ್ರದಿಂದ ಬೆಳಿಗ್ಗೆ 11.06 ಗಂಟೆಗೆ ಉಪಗ್ರಹಗಳ ಉಡಾವಣೆ ಮಾಡಲಾಯಿತು ಎಂದು ಸರ್ಕಾರಿ ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ವಾಣಿಜ್ಯ ಸೇವೆಗಳಿಗೆ ಸಂಬಂಧಿಸಿದ ನಿಯಂತ್ರಣ, ಸಮುದ್ರ ಪರಿಸರದ ಮೇಲ್ವಿಚಾರಣೆ, ಕಾಡ್ಗಿಚ್ಚು ತಡೆಗಟ್ಟುವಿಕೆ ಮತ್ತು ವಿಪತ್ತು ತಗ್ಗಿಸುವಿಕೆಗಾಗಿ ಉಪಗ್ರಹಗಳ ಬಳಕೆ ಮಾಡಲಾಗುತ್ತದೆ.

ಇದು ಲಾಂಗ್‌ ಮಾರ್ಚ್‌ ಕ್ಯಾರಿಯರ್‌ ರಾಕೆಟ್‌ನ 409ನೇ ಉಡಾವಣೆಯಾಗಿದೆ ಎಂದು ಸುದ್ದಿ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT