ಚಿತ್ರದುರ್ಗ: ‘ವಿಜ್ಞಾನಕ್ಕೆ ಸಂಬಂಧಿಸಿದ ಬಹಳಷ್ಟು ವಿಚಾರಗಳು ಗಂಭೀರವಾಗಿವೆ. ಆದ್ದರಿಂದ ಲೇಖನ ಬರೆಯುವಾಗ ಬಹಳ ಎಚ್ಚರಿಕೆ ವಹಿಸಬೇಕು’ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಹಿರಿಯ ವಿಜ್ಞಾನಿ ಶ್ರೀನಾಥ್ ರತ್ನಾಕರ ತಿಳಿಸಿದರು.

ನಗರದ ಐಎಂಎ ಹಾಲ್ನಲ್ಲಿ ಚಿತ್ರದುರ್ಗ ಸೈನ್ಸ್ ಫೌಂಡೇಷನ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ನಿಂದ ಭಾನುವಾರ ಆಯೋಜಿಸಿದ್ದ ವಿಜ್ಞಾನ ಲೇಖಕ ಎಚ್.ಎಸ್.ಟಿ.ಸ್ವಾಮಿ ಅವರ ನಾ ಕಂಡ ಖಗೋಳ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ವೈಚಾರಿಕ ಲೇಖನ ಬರೆಯುವಾಗ ಗುಂಡಿಗೆಯಿರಬೇಕು. ವಿಷಯವನ್ನು ಹೇಳುವಾಗ ಯಾರ ಮನಸ್ಸಿಗೂ ನೋವಾಗದಂತೆ ಎಚ್ಚರವಹಿಸಬೇಕು. ಗ್ರಹ, ನಕ್ಷತ್ರ, ಗ್ಯಾಲಕ್ಸಿಗೆ ಸಂಬಂಧಿಸಿದ ಲೇಖನಗಳಿರುವ ನಾ ಕಂಡ ಖಗೋಳ ಪುಸ್ತಕ ಮನೆ ಮನೆಗೆ ತಲುಪಬೇಕು’ ಎಂದರು.

‘ಜಾತಿ, ವರ್ಗ ಹೇಗೆ ವರ್ಗಿಕರಣವಾಗಿದೆಯೋ ಅದೇ ರೀತಿ ವಿಜ್ಞಾನದಲ್ಲಿಯೂ ವರ್ಗಿಕರಣವಾಗಿದೆ. ವಿಜ್ಞಾನವೆಂದರೆ ಮತ್ತೊಬ್ಬರ ನಂಬಿಕೆ, ಧಾರ್ಮಿಕ ಆಚರಣೆಗಳ ವಿರುದ್ಧವಾಗಿರಬಾರದು. ವಿಜ್ಞಾನಿಯಾದ ಕೂಡಲೇ ಅಹಂ ಬೇಡ. ಸದಾ ಎಚ್ಚರಿಕೆಯಿಂದಿರಬೇಕು’ ಎಂದು ತಿಳಿಸಿದರು.

‘ಮಕ್ಕಳಲ್ಲಿ ವೈಜ್ಞಾನಿಕ ಚಿಂತನೆ ಮೂಡಿಸಬೇಕಿದೆ. ವಿಜ್ಞಾನಕ್ಕೆ ಸಂಬಂಧಿಸಿದ 278 ಲೇಖನಗಳಿರುವ ಈ ಪುಸ್ತಕ ಪ್ರತಿಯೊಂದು ಶಾಲೆಗೂ ತಲುಪಬೇಕು. ಪ್ರತಿ ಜಿಲ್ಲೆಯಲ್ಲಿಯೂ ಇಂತಹ ಚಟುವಟಿಕೆಗಳು ಹೆಚ್ಚಾಗಬೇಕು’ ಎಂದರು.

‘ಆದಿ ಮಾನವನಿಂದ ಹಿಡಿದು ಆಧುನಿಕ ಮಾನವ ಇಷ್ಟೊಂದು ಸೌಲಭ್ಯಗಳನ್ನು ಪಡೆಯುತ್ತಿದ್ದಾನೆ ಎಂದರೇ ಅದಕ್ಕೆ ವಿಜ್ಞಾನ ಕಾರಣ. ವಿಜ್ಞಾನದಿಂದ ಮಾತ್ರ ಮೂಢನಂಬಿಕೆ ಓಡಿಸಿ ಸಮಾಜವನ್ನು ಸರಿದಾರಿಗೆ ತೆಗೆದುಕೊಂಡು ಹೋಗಲು ಸಾಧ್ಯವಿದೆ’ ಎಂದು ಫೌಂಡೇಷನ್ ಅಧ್ಯಕ್ಷ ಜಿ.ಎನ್.ಮಲ್ಲಿಕಾರ್ಜುನಪ್ಪ ತಿಳಿಸಿದರು.

‘ಯಾವುದು ವಿಜ್ಞಾನ, ಯಾವುದು ಅಲ್ಲ ಎನ್ನುವುದನ್ನು ಮೊದಲು ಎಲ್ಲರೂ ತಿಳಿಯಬೇಕು. ಬದುಕಿನ ಎಲ್ಲಾ ಮುಖಗಳಲ್ಲೂ ವಿಜ್ಞಾನ ಹಾಸು ಹೊಕ್ಕಾಗಿದೆ. ಎಲ್ಲಿ ವಿಜ್ಞಾನವಿರುವುದಿಲ್ಲವೋ ಅಲ್ಲಿ ಸತ್ಯವಿಲ್ಲ. ವಿಜ್ಞಾನವೆಂದರೆ ಏನು ಎನ್ನುವುದನ್ನು ತಿಳಿದುಕೊಳ್ಳಬೇಕು. ನಾ ಕಂಡ ಖಗೋಳ ಪುಸ್ತಕದಲ್ಲಿ ಸರಳ, ನೇರ, ಸಂವಹನವಿದೆ’ ಎಂದರು.

‘ಪುಸ್ತಕ ಜ್ಞಾನವನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾಯಿಸಬೇಕು. ಲೇಖಕ, ಕಲಾವಿದ ಬೆಳೆಯಬೇಕಾದರೆ ಕಲೆ ಬಹಳ ಮುಖ್ಯ. ಸ್ವಾಮಿ ಅವರಿಗೆ ವಿಜ್ಞಾನದ ಲೇಖನ ಬರೆಯುವ ಕಲೆ ಸಿದ್ಧಿಸಿದೆ. ಗ್ರಂಥಾಲಯದಲ್ಲಿ ಆಕರ ಗ್ರಂಥವಾಗುವ ಎಲ್ಲಾ ಅರ್ಹತೆ ಈ ಪುಸ್ತಕಕ್ಕಿದೆ’ ಎಂದು ತಿಳಿಸಿದರು.

‘ವಿಜ್ಞಾನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ಚಿತ್ರದುರ್ಗದಲ್ಲಿ ಸಾಕಷ್ಟು ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಾ ಬರುತ್ತಿದೆ. ಖಗೋಳ ವಿಜ್ಞಾನದಲ್ಲಿ ವಿದ್ಯಾರ್ಥಿಗಳು ಹೆಚ್ಚು ಆಸಕ್ತಿ ವಹಿಸಬೇಕು. ಇಂತಹ ಕೃತಿಗಳು ಎಲ್ಲರ ಕೈ ಸೇರಲಿ’ ಎಂದು ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್ ಹೇಳಿದರು.

ಲೇಖಕ ಎಚ್.ಎಸ್.ಟಿ.ಸ್ವಾಮಿ, ಸೈನ್ಸ್ ಫೌಂಡೇಷನ್ ಉಪಾಧ್ಯಕ್ಷ ಚಳ್ಳಕೆರೆ ಯರ್ರಿಸ್ವಾಮಿ, ನಿರ್ದೇಶಕ ಈ.ರುದ್ರಮುನಿ, ಖಜಾಂಚಿ ಕೆ.ವಿ.ನಾಗಲಿಂಗರೆಡ್ಡಿ, ವ್ಯವಸ್ಥಾಪಕ ಡಿ. ಗೋಪಾಲಸ್ವಾಮಿ ನಾಯಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-44-815230114

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.