ಚಿತ್ರದುರ್ಗ: ‘ಹಿಂದಿನ ಕಾಲದಲ್ಲಿ ಔಷಧೀಯ ಸಂಶೋಧನೆಗೆ ವರ್ಷಗಳೇ ಕಳೆಯುತ್ತಿದ್ದವು. ಈಗ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದಿಂದ ಸಮಯ ಉಳಿತಾಯದ ಜತೆಗೆ ಶೀಘ್ರ ಫಲಿತಾಂಶ ದೊರೆಯುತ್ತಿದೆ’ ಎಂದು ಎಸ್ಜೆಎಂ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ.ಗುಡಸಿ ತಿಳಿಸಿದರು.

ನಗರದ ಎಸ್ಜೆಎಂ ಔಷಧ ವಿದ್ಯಾಲಯದಲ್ಲಿ ಶುಕ್ರವಾರ ಆಯೋಜಿಸಿದ್ದ ಐ-ಕ್ಲಾಪ್ ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ತಂತ್ರಜ್ಞಾನ ಬಳಕೆಯಿಂದ ಔಷಧಿಯನ್ನು ವೇಗವಾಗಿ ಕಂಡುಹಿಡಿಯಲಾಗುತ್ತಿದೆ. ಇಂತಹ ಹೊಸ ವಿಚಾರಗಳ ವಿನಿಮಯ ವಿಚಾರ ಸಂಕಿರಣದಲ್ಲಿ ಆಗಲಿದೆ’ ಎಂದರು.

‘ಮುಂಬರುವ ದಿನಗಳಲ್ಲಿ ನ್ಯಾನೋ ಪ್ಲಾಸ್ಟಿಕ್ ಮತ್ತು ಮಾದಕ ದ್ರವ್ಯಗಳು ಜನರನ್ನು ಅನಾರೋಗ್ಯದ ಕಡೆಗೆ ಒಯ್ಯುತ್ತವೆ’ ಎಂದು ಚಿತ್ರದುರ್ಗದ ವೈದ್ಯಕೀಯ ಕಾಲೇಜಿನ ಡೀನ್ ಡಾ.ಬಿ.ವೈ.ಯುವರಾಜ್ ಹೇಳಿದರು.

‘ಹಿಂದಿನ ಕಾಲದಲ್ಲಿ ಹಿರಿಯರು ಅಡುಗೆ ಮನೆಯನ್ನೇ ಔಷಧಾಲಯವನ್ನಾಗಿ ಮಾಡಿಕೊಂಡಿದ್ದರು. ಕರೋನಾ ಸಮಯದಲ್ಲಿ ಔಷಧಿ ತಜ್ಞರ ಕಾರ್ಯ ನಿಜಕ್ಕೂ ಸ್ಮರಣೀಯ’ ಎಂದು ಎಸ್ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಬಸವಕುಮಾರ ಸ್ವಾಮೀಜಿ ತಿಳಿಸಿದರು.

‘ಶಿಕ್ಷಣ ಮುಗಿಸಿದ ನಂತರ ಮುಂದೇನು ಏನು ಎಂಬ ಚಿಂತೆ ವಿದ್ಯಾರ್ಥಿಗಳಿಗೆ ಕಾಡುತ್ತದೆ. ತಂತ್ರಜ್ಞಾನ ಆಧರಿತ ಕೌಶಲ ರೂಢಿಸಿಕೊಳ್ಳದಿದ್ದರೆ ವೃತ್ತಿ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗುವುದಿಲ್ಲ’ ಎಂದು ಎಸ್ಜೆಎಂ ವಿಶ್ವವಿದ್ಯಾಲಯದ ಕುಲಸಚಿವ ಗಣಾಚಾರಿ ಹೇಳಿದರು.

ಪ್ರಾಂಶುಪಾಲ ಡಾ.ಟಿ.ಎಸ್.ನಾಗರಾಜ, ಸಹಾಯಕ ಔಷಧ ನಿಯಂತ್ರಕ ಸಿ.ಎಚ್.ಗಿರೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-44-223334680

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.