ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗನಿರೋಧಕದಿಂದಲೂ ವೈರಸ್‌ ತಪ್ಪಿಸಿಕೊಳ್ಳುವ ಸಾಧ್ಯತೆ: ನೂತನ ಸಂಶೋಧನೆ

Last Updated 13 ಜೂನ್ 2021, 6:16 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್‌: ವೈರಸ್‌ನಿಂದ ಸೋಂಕಿತರಾದ ಬಳಿಕ ಅಥವಾ ಲಸಿಕೆ ಪಡೆದ ನಂತರ ಸೃಷ್ಟಿಯಾಗುವ ರೋಗನಿರೋಧಕ ಶಕ್ತಿ ಪ್ರಬಲವಾಗಿರುತ್ತದೆ. ಆದರೆ, ಈ ರೋಗನಿರೋಧಕದಿಂದಲೂ ವೈರಸ್‌ಗಳು ತಪ್ಪಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೊಸ ಸಂಶೋಧನಾ ವರದಿ ತಿಳಿಸಿದೆ.

ವೈರಸ್‌ ಕೋಶಗಳ ಮೂಲಕ ಒಳಗೆ ಪ್ರವೇಶಿಸಿ ದೇಹದಲ್ಲಿ ವ್ಯಾಪಿಸುತ್ತದೆ. ರೋಗನಿರೋಧಕಗಳು ಈ ಸಂದರ್ಭದಲ್ಲಿ ವೈರಸ್‌ಗೆ ಪ್ರತಿರೋಧವೊಡ್ಡುತ್ತವೆ.ವೈರಸ್‌ ಕೋಶಗಳನ್ನು ಪ್ರವೇಶಿಸದಂತೆ ದೇಹನಿರೋಧಕ ಕಾರ್ಯನಿರ್ವಹಿಸುತ್ತದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

ಸಂಶೋಧಕರಾದ ಅಲೆಕ್ಸ್‌ ಸಿಗಾಲ್‌ ಮತ್ತು ಅವರ ತಂಡ ಹೊಸ ಸಾಧ್ಯತೆಗಳ ಬಗ್ಗೆ ಸಂಶೋಧನೆ ನಡೆಸಿದೆ. ವೈರಸ್‌ ದೇಹದಲ್ಲಿ ಪ್ರವೇಶಿಸಿದ ಬಳಿಕ ತನ್ನ ಪ್ರತಿರೂಪಗಳನ್ನು ಸೃಷ್ಟಿಸುತ್ತಾ ಹೋಗುತ್ತದೆ. ವೈರಸ್‌ನ ರೂಪಾಂತರಗಳ (ಅಲ್ಫಾ ಮತ್ತು ಬೀಟಾ) ಬಗ್ಗೆ ಪರೀಕ್ಷೆ ನಡೆಸಿದ ಸಂಶೋಧನಾ ತಂಡವು ರೋಗ ನಿರೋಧಕ ಶಕ್ತಿಯ ಬಗ್ಗೆ ಅಧ್ಯಯನ ನಡೆಸಿದೆ. ಬ್ರಿಟನ್‌ನಲ್ಲಿ ಮೊದಲು ಪತ್ತೆಯಾದ ‘ಅಲ್ಫಾ’ ರೂಪಾಂತರ ತಳಿ ರೋಗನಿರೋಧಕಕ್ಕೆ ಸೂಕ್ಷ್ಮವಾಗಿ ಪ್ರತಿಕ್ರಿಯಿಸಿದೆ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಮೊದಲು ಪತ್ತೆಯಾದ ’ಬೀಟಾ’ ತಳಿ ಕಡಿಮೆ ಪ್ರಮಾಣದಲ್ಲಿ ರೋಗನಿರೋಧಕಕ್ಕೆ ಸ್ಪಂದಿಸಿದೆ.

ನೂರಾರು ವರ್ಷಗಳಿಂದ ಮನುಷ್ಯ ಮತ್ತು ಪ್ರಾಣಿಗಳಲ್ಲಿ ವಿವಿಧ ರೀತಿಯ ವೈರಸ್‌ಗಳು ಕಾಣಿಸಿಕೊಳ್ಳುತ್ತಿವೆ. ವೈರಸ್‌ ಜತೆಗೆ ಬದುಕು ಸಾಗಿಸಲಾಗಿದೆ. ಆದರೆ, ವೈರಸ್‌ ಸಹ ಹಲವು ಸಂದರ್ಭಗಳಲ್ಲಿ ರೋಗನಿರೋಧಕ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುವ ಸಾಧ್ಯತೆಯೂ ಇದೆ. ಕೊರೊನಾ ವೈರಸ್‌ ಮನುಷ್ಯನಲ್ಲಿನ ಕೋಶಗಳನ್ನು ಬದಲಾಯಿಸಿ ಎರಡು ಅಥವಾ ಅದಕ್ಕಿಂತ ಹೆಚ್ಚು ಕೋಶಗಳನ್ನು ಒಗ್ಗೂಡಿಸುತ್ತದೆ. ಈ ‘ಸೂಪರ್‌’ ಕೋಶಗಳ ಮೂಲಕ ವೈರಸ್‌ ಹಬ್ಬುವ ಸಾಧ್ಯತೆ ಇದೆ ಎಂದು ಸಂಶೋಧಕರ ತಂಡ ವರದಿಯಲ್ಲಿ ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT