ಜುಲೈ 27ಕ್ಕೆ ಖಗೋಳ ವಿಸ್ಮಯ: ಕೆಂಪೇರಲಿರುವ ಚಂದ್ರ; ಶತಮಾನದ ಸುದೀರ್ಘ ಗ್ರಹಣ

7

ಜುಲೈ 27ಕ್ಕೆ ಖಗೋಳ ವಿಸ್ಮಯ: ಕೆಂಪೇರಲಿರುವ ಚಂದ್ರ; ಶತಮಾನದ ಸುದೀರ್ಘ ಗ್ರಹಣ

Published:
Updated:
ಚಂದ್ರ ಗ್ರಹಣ 

ವಾಷಿಂಗ್ಟನ್‌ ಡಿ.ಸಿ: ಶತಮಾನದ ಸುದೀರ್ಘ ಚಂದ್ರಗ್ರಹಣ ಇದೇ ಶುಕ್ರವಾರ(ಜು.27) ನಡೆಯಲಿದ್ದು, ಜಗತ್ತಿನ ಹಲವು ಭಾಗಗಳಲ್ಲಿ ಗೋಚರಿಸಲಿದೆ. 

ಸೂರ್ಯ ಮತ್ತು ಭೂಮಿಯ ಸಮಾನಾಂತರ ರೇಖೆಯಲ್ಲಿ ಚಂದ್ರ ಹಾದು ಹೋಗಲಿದೆ. ಭೂಮಿಯು ಚಂದ್ರನ ಮೇಲೆ ಬೀಳುವ ಸೂರ್ಯನ ಬೆಳಕನ್ನು ಮರೆ ಮಾಡುವುದರಿಂದ ಅರೆ ನೆರಳು–ಬೆಳಕಿನ ಆಟದಲ್ಲಿ ಚಂದ್ರ ಕೆಂಪೇರಲಿದೆ. ಒಂದು ಗಂಟೆ ನಲವತ್ತೈದು ನಿಮಿಷಗಳ ದೀರ್ಘಾವಧಿ ಚಂದ್ರಗ್ರಹಣ ಇದಾಗಿರಲಿದೆ.

ಗ್ರಹಣದ ಸಮಯದಲ್ಲಿ ಗಾಢ ಕೆಂಪು ಬಣ್ಣದಲ್ಲಿ ಗೋಚರಿಸಲಿರುವ ಚಂದ್ರನನ್ನು ಕಾಣಲು ಜಗತ್ತಿನಾದ್ಯಂತ ನಕ್ಷತ್ರ ವೀಕ್ಷಕರು ಸಿದ್ಧತೆ ನಡೆಸಿದ್ದಾರೆ. ಭೂಮಿಯನ್ನು ಸುತ್ತುವ ಚಂದ್ರ ಯಾವಾಗಲೂ ಭೂ–ಸೂರ್ಯ ರೇಖೆಯಲ್ಲಿ ಸಂಧಿಸುವುದಿಲ್ಲ. ಹಾಗಾಗಿ 29.53 ದಿನಗಳಲ್ಲಿ ಚಂದ್ರ ಭೂ ಪರಿಭ್ರಮಣೆ ಪೂರೈಸಿದರೂ ಪ್ರತಿ ತಿಂಗಳೂ ಚಂದ್ರಗ್ರಹಣ ಆಗುವುದಿಲ್ಲ.

ಈ ಚಂದ್ರಗ್ರಹಣದ ಸಮಯದಲ್ಲಿ ನಾವು ಚಂದ್ರನ ಮೇಲಿದ್ದರೆ, ಸೂರ್ಯನನ್ನು ಭೂಮಿ ಆವರಿಸುವುದರಿಂದ ಅಲ್ಲಿ ನಮಗೆ ಸಂಪೂರ್ಣ ಸೂರ್ಯ ಗ್ರಹಣ ಗೋಚರಿಸಲಿದೆ ಎಂದು ಆಸ್ಟ್ರೇಲಿಯಾದ ಖಗೋಳ ವಿಜ್ಞಾನಿ ಬ್ರಾಡ್‌ ಟಕ್ಕರ್‌ ವಿವರಿಸಿದ್ದಾರೆ. 

ಉತ್ತರ ಅಮೆರಿಕ ಹೊರತು ಪಡಿಸಿ ಜಗತ್ತಿನ ಬಹುತೇಕ ಎಲ್ಲ ಭಾಗಗಳಿಂದ ಚಂದ್ರಗ್ರಹಣ ಗೋಚರಿಸಲಿದೆ. ಏಷ್ಯಾ, ಆಫ್ರಿಕಾ, ಯುರೋಪ್‌, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನಲ್ಲಿ ಸ್ಪಷ್ಟವಾಗಿ ವೀಕ್ಷಿಸಬಹುದು. 11:54ರ ಬಳಿಕ ಭಾರತದ ಹಲವು ಭಾಗಗಳಲ್ಲಿ ಈ ಖಗೋಳ ವಿಸ್ಮಯವನ್ನು ಸವಿಯಲು ಸಾಧ್ಯವಿದೆ. 

ಜುಲೈ 31ರಂದು ಮಂಗಳ ಗ್ರಹ ಭೂಮಿಯ ಸಮೀಪಕ್ಕೆ ಬರಲಿದೆ.
 

ಬರಹ ಇಷ್ಟವಾಯಿತೆ?

 • 23

  Happy
 • 4

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !