ಚಂದ್ರನು ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹ ಮತ್ತು ಭೂಮಿಗೆ ಬಹಳ ಹತ್ತಿರವಿರುವ ಒಂದು ಆಕಾಶಕಾಯ. ಆಗಸದಲ್ಲಿ ಇದೊಂದು ಆಕರ್ಷಕ ವಸ್ತು. ಪ್ರಾಚೀನ ಕಾಲದಿಂದಲೂ ಚಂದ್ರ ಮಾನವರನ್ನು ಆಕರ್ಷಿಸಿದ್ದಾನೆ! ಖಗೋಲವಿಜ್ಞಾನದ ಅನ್ವೇಷಣೆಗಳು ಮಾನವ ದೃಷ್ಟಿಗೆ ನಿಲುಕಬಲ್ಲ ವಸ್ತುಗಳ ವೀಕ್ಷಣೆಗೆ ಮಾತ್ರ ಸೀಮಿತವಾಗಿದ್ದಾಗ ಚಂದ್ರನು ದೇವತೆಗಳಲ್ಲೊಬ್ಬ ಎಂದು ಪರಿಗಣಿಸಲಾಗುತ್ತಿತ್ತು. ದೂರದರ್ಶಕದಂತಹ ಉಪಕರಣಗಳ ಆವಿಷ್ಕಾರವಾದ ನಂತರ ವಿಜ್ಞಾನದ ಪರಿಶೋಧನೆಗಳು ಮುಂದುವರಿದು, ಚಂದ್ರನನ್ನು ಕುರಿತು ಹೆಚ್ಚು ಹೆಚ್ಚು ಮಾಹಿತಿಗಳು ಬರತೊಡಗಿದವು. ಚಂದ್ರನು ಭೂಮಿಯ ಸುತ್ತ ಸರಾಸರಿ 384,400 ಕಿಲೋಮೀಟರ್ ದೂರದಲ್ಲಿ ತನ್ನ ಕಕ್ಷೆಯಲ್ಲಿ ಸುತ್ತುತ್ತಿರುತ್ತಾನೆ, ಸುಮಾರು 29.5 ದಿನಗಳಲ್ಲಿ ಭೂಮಿಯ ಸುತ್ತ ಒಂದು ಸುತ್ತು ಹಾಕುತ್ತಾನೆ ಎಂದು ಕಂಡು ಹಿಡಿಯಲಾಗಿದೆ.

ಒಮ್ಮೆ ಕೇವಲ ಕಲ್ಪನೆಯಾಗಿದ್ದ ಅಂತರಿಕ್ಷಯಾನಗಳು, ನಂತರದಲ್ಲಿ ವಾಸ್ತವದಲ್ಲಿ ಪ್ರಾರಂಭವಾದಾಗ ಚಂದ್ರನ ಕುರಿತ ಅಧ್ಯಯನಗಳಿಗೆ ಹೊಸ ಆಯಾಮ ದೊರಕಿಸಿ ಕೊಟ್ಟವು. 1969ರಲ್ಲಿ, ಗಗನಯಾತ್ರಿಗಳಾದ ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಎಡ್ವಿನ್ ಬಜ್ ಆಲ್ಡ್ರಿನ್ ಅಪೊಲೊ ಗಗನನೌಕೆಯ ಮೂಲಕ ಚಂದ್ರನನ್ನು ತಲುಪಿ ಅದರ ಮೇಲೆ ನಡೆದಾಡಿ ದಾಖಲೆ ನಿರ್ಮಿಸಿದರು. ಅನಂತರ ಅಭಿವೃದ್ಧಿಯಾದ ರೋಬೊಟಿಕ್ ಕಾರ್ಯಾಚರಣೆಗಳ ಮೂಲಕ ಖಗೋಳವಿಜ್ಞಾನಿಗಳು ಚಂದ್ರನ ಸಂಯೋಜನೆ, ಮೂಲ ಮತ್ತು ಇತಿಹಾಸದ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕಿದರು.

ಚಂದ್ರಗ್ರಹವು ಸುಮಾರು 4.5 ಶತಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು ಎಂದು ವಿಜ್ಞಾನಿಗಳು ಲೆಕ್ಕ ಹಾಕಿದ್ದಾರೆ. ಅವರ ಪ್ರಕಾರ ಬಹುಶಃ ಆರಂಭಿಕ ಭೂಮಿ ಹಾಗೂ ಮಂಗಳನ ಗಾತ್ರದ ಒಂದು ಆಕಾಶಕಾಯಗಳ ನಡುವೆ ಸಂಭವಿಸಿದ ಬೃಹತ್ ಡಿಕ್ಕಿಯ ಪರಿಣಾಮವಾಗಿ ಉದ್ಭವಿಸಿದ ವಸ್ತುಗಳಿಂದ ಚಂದ್ರನ ಉಗಮವಾಗಿರಬೇಕು ಎಂದು ಊಹಿಸಲಾಗಿದೆ. ಚಂದ್ರನಿಗೆ ಭೂಮಿಯ ಗುರುತ್ವಾಕರ್ಷಣೆಯ ಕೇವಲ ಆರನೆಯ ಒಂದು ಭಾಗ ಮಾತ್ರ ಇದೆ. ಅದರಿಂದ ಗಗನಯಾತ್ರಿಗಳು ಚಂದ್ರನ ಮೇಲೆ ಸುಲಭವಾಗಿ ಬಹು ಎತ್ತರಕ್ಕೆ ಜಿಗಿಯಬಲ್ಲರು ಎಂದು ಕಂಡುಹಿಡಿಯಲಾಗಿದೆ.

ಈ ಸಂಶೋಧನೆಗಳು, ಚಂದ್ರನು ಆಕಾಶದಲ್ಲಿ ರಾತ್ರಿ ವಿವಿಧ ಆಕಾರದಲ್ಲಿ ತಿಂಗಳಿನಲ್ಲಿ ಹದಿನೈದು ದಿನ ಮಾತ್ರ ಗೋಚರಿಸುವ ಒಂದು ಸುಂದರವಾದ ವಸ್ತು ಮಾತ್ರವಲ್ಲ, ಅದು ಭೂಮಿಯ ಪ್ರಮುಖ ಒಡನಾಡಿ, ಭೂಮಿಯ ಸಂಗಾತಿ ಎಂದು ತಿಳಿಸಿವೆ. ಚಂದ್ರ ಅನೇಕ ಭೂವೈಜ್ಞಾನಿಕ ಸಂಗತಿಗಳನ್ನು ಕೂಡ ನಿಯಂತ್ರಿಸುತ್ತದೆ; ಸಮುದ್ರದ ಉಬ್ಬರವಿಳಿತಗಳೂ ಸೇರಿದಂತೆ ಭೂಮಿಯ ಮೇಲಣ ಹಲವು ನೈಸರ್ಗಿಕ ಪ್ರಕ್ರಿಯೆಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ವಿಜ್ಞಾನಿಗಳು ಈಗಾಗಲೇ ಕಂಡುಹಿಡಿದಿದ್ದಾರೆ. ಅಗಾಧವಾದ ವಿಶ್ವವನ್ನು ಹಾಗೂ ಸೌರವ್ಯೂಹವನ್ನು ಅರ್ಥಮಾಡಿಕೊಳ್ಳಲು ಈ ಸಂಶೋಧನೆಗಳು ಸಹಾಯ ಮಾಡಿದವು. ಅಂತೆಯೇ ಚಂದ್ರನ ಬಗ್ಗೆ ಹಾಗೂ ಸೂರ್ಯನ ಬಗ್ಗೆ ಇನ್ನಷ್ಟು ಕುತೂಹಲ ಮತ್ತು ಪರಿಶೋಧನೆಯನ್ನು ಪ್ರೇರೇಪಿಸುತ್ತಲೇ ಇವೆ. ಇಷ್ಟೆಲ್ಲ ಸಂಶೋಧನೆಗಳನ್ನು ನಡೆಸಿದ ಖಗೋಳವಿಜ್ಞಾನಿಗಳ ಜ್ಞಾನತೃಷೆ ಇನ್ನೂ ನಿಂತಿಲ್ಲ.

ಬಹಳ ಹಿಂದಿನಿಂದ ಈ ವಿಶಾಲ ವಿಶ್ವದಲ್ಲಿ ನಾವು ಅಂತರಿಕ್ಷದಲ್ಲಿ ಕಾಣುವ ಒಂದೇ ಸೂರ್ಯ ಹಾಗೂ ಚಂದ್ರರಿದ್ದಾರೆ ಎಂಬ ನಂಬಿಕೆ ಇತ್ತು. ಆದರೆ ಈಗ ವಿಶ್ವ ಅನಂತವಾದುದು. ಅದರಲ್ಲಿ ಹಲವಾರು ಸೌರವ್ಯೂಹಗಳಿವೆ. ಪ್ರತಿಯೊಂದು ಸೌರವ್ಯೂಹದಲ್ಲಿಯೂ ಪ್ರತ್ಯೇಕ ಸೂರ್ಯ–ಚಂದ್ರಗ್ರಹಗಳಿವೆ ಎಂದು ತಿಳಿದುಬಂದಿದೆ. ಆದರೆ ಇಂದು ಲಭ್ಯವಿರುವ ಯಾವುದೇ ಉಪಕರಣಗಳಿಗೆ ಅವುಗಳನ್ನು ಗುರುತಿಸುವ ಸಾಮರ್ಥ್ಯವಿಲ್ಲ ಅಷ್ಟೆ. ಈ ಸೌರವ್ಯೂಹದಲ್ಲಿ ಭೂಮಿಗೆ ಆತನ ಸುತ್ತ ಸುತ್ತುತ್ತಿರುವ ಒಬ್ಬನೇ ಚಂದ್ರ ಇದ್ದಾನೆ. ಅಂದರೆ ಭೂಮಿಗೆ ಚಂದ್ರ ಒಂದೇ ನೈಸರ್ಗಿಕ ಉಪಗ್ರಹ.

ಈಗ ಖಗೋಳವಿಜ್ಞಾನಿಗಳು ವಿವಿಧ ಗಗನಯಾನ, ಆಕಾಶಯಾನಗಳ ಮೂಲಕ ಹಲವು ಹೊಸ ಮಾಹಿತಿಗಳನ್ನು ಕಂಡು ಹಿಡಿಯುತ್ತಿದ್ದಾರೆ. ಇತ್ತೀಚೆಗೆ ಅಮೆರಿಕದ ನಾಸಾ ಅಭಿವೃದ್ಧಿ ಪಡಿಸಿದ ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ (ಜೆಡಬ್ಲೂಎಸ್ಟಿ) ಮೂಲಕ 2025ರಲ್ಲಿ ನಡೆಸಿದ ಶೋಧಗಳಿಂದ ಸೌರವ್ಯೂಹದಲ್ಲಿ ಭೂಮಿಗೆ ಚಂದ್ರ ಒಂದೇ ಉಪಗ್ರಹವಾದರೂ ಇನ್ನಿತರ ಗ್ರಹಗಳಿಗೆ ಹಲವಾರು ಚಂದ್ರಗಳಿವೆ ಎಂಬುದನ್ನು ದೃಢೀಕರಿಸಿದ್ದಾರೆ. ಹಲವು ಹೊಸ ಹೊಸ ಚಂದ್ರರನ್ನು ಕಂಡುಹಿಡಿದಿದ್ದಾರೆ. ಇದುವರೆಗಿನ ಸಂಶೋಧನೆಗಳ ಪ್ರಕಾರ ಶನಿ ಮತ್ತು ಗುರುಗ್ರಹಗಳು ಅತಿ ಹೆಚ್ಚು ಚಂದ್ರರನ್ನು ಒಳಗೊಂಡಿವೆ ಎಂದೂ ಈ ಸಂಶೋಧನೆಗಳು ಹೇಳುತ್ತಿವೆ.

ಇದುವರೆಗೆ ಶನಿಗ್ರಹಕ್ಕೆ 146 ಚಂದ್ರರಿದ್ದಾರೆ ಎಂದು ದಾಖಲಿಸಲಾಗಿತ್ತು. ಅವುಗಳಲ್ಲಿ ‘ಟೈಟನ್’ ಮತ್ತು ‘ಎನ್ಸೆಲಾಡಸ್’ ಎಂಬವು ದೊಡ್ಡ ಗಾತ್ರದವು; ಉಳಿದವು ಚಿಕ್ಕವು ಎಂದು ದಾಖಲಿಸಲಾಗಿದೆ. ಶನಿಗ್ರಹಕ್ಕೆ ಮೊದಲು ಕಂಡುಹಿಡಿದಿದ್ದ 146 ಚಂದ್ರರ ಜೊತೆ ಇನ್ನೂ 128 ಚಂದ್ರರನ್ನು ಕಂಡಿರುವುದಾಗಿ 2025ರ ಫೆಬ್ರುವರಿ ತಿಂಗಳಿನಲ್ಲಿ ‘ನಾಸಾ’ ಪ್ರಕಟಿಸಿದೆ. ಎಂದರೆ ಶನಿಗ್ರಹಕ್ಕೆ ಒಟ್ಟು 274 ಚಂದ್ರರಿದ್ದಾರೆ ಎಂದಂತಾಯಿತು! ಇದು ಸೌರವ್ಯೂಹದ ಯಾವುದೇ ಗ್ರಹಕ್ಕಿಂತ ಹೆಚ್ಚು ಚಂದ್ರರನ್ನು ಹೊಂದಿರುವ ವಿಶಿಷ್ಟವಾದ ಗ್ರಹ.

ಶನಿಗ್ರಹದ ಸುತ್ತ ಇರುವ ಚಂದ್ರರ ಮೂಲ, ಗಾತ್ರ ಮತ್ತು ಕಕ್ಷೆಯ ಲಕ್ಷಣಗಳನ್ನು ಆಧರಿಸಿ ಈ ಚಂದ್ರರನ್ನು ವರ್ಗೀಕರಿಸುವುದೂ ಸಾಧ್ಯವಾಗಿದೆ. ಅವುಗಳಲ್ಲಿ ನಿಶ್ಚಿತ ಗಾತ್ರವನ್ನು ಹೊಂದಿರುವ ಕೆಲವನ್ನು ನಿಯಮಿತ ಚಂದ್ರ ಎಂದೂ, ನಿಯಮಿತ ಗಾತ್ರವಿಲ್ಲದ ಇನ್ನುಳಿದವುಗಳನ್ನು ಅನಿಯಮಿತ ಚಂದ್ರರು ಎಂದು ವರ್ಗೀಕರಿಸಲಾಗಿದೆ. ಅವೆಲ್ಲವೂ ಶನಿಗ್ರಹದ ಸುತ್ತ ನಿರ್ದಿಷ್ಟ ಕಕ್ಷೆಯಲ್ಲಿ ನಿರ್ದಿಷ್ಟ ದಿಕ್ಕಿನಲ್ಲಿ ಸುತ್ತುತ್ತಿರುತ್ತವೆಂದೂ, ವಿವಿಧ ಬಗೆಯ ಅನಿಲ ಅಥವಾ ದೂಳಿನಿಂದ ಕೂಡಿರುವುವೆಂದೂ ವಿವರಿಸಲಾಗಿದೆ.

ಈಗ ಕಂಡುಹಿಡಿಯಲಾದ 128 ಚಂದ್ರರಲ್ಲಿ ಬಹುತೇಕವು ಚಿಕ್ಕದಾಗಿದ್ದು ಅನಿಯಮಿತ ಗಾತ್ರ ಹೊಂದಿವೆ. ಅವುಗಳ ಕಕ್ಷೆಯು ಕೂಡ ಅಸಾಮಾನ್ಯವಾಗಿವೆ. ಅವುಗಳಲ್ಲಿ ಕೆಲವು ಶನಿಗ್ರಹದ ತಿರುಗುವಿಕೆಗೆ ವಿರುದ್ಧವಾಗಿ ಹಿಮ್ಮುಖ ಚಲನೆಯನ್ನು ಕೂಡ ಹೊಂದಿವೆ. ಬಹುಶಃ ಈ ಸಣ್ಣ ಚಂದ್ರಗಳು ಶನಿಯ ಸುತ್ತ ಬಾಹ್ಯಾಕಾಶದಲ್ಲಿ ಉಂಟಾದ ಘರ್ಷಣೆಗಳ ಪರಿಣಾಮವಾಗಿ ಉದ್ಭವಿಸಿರಬೇಕು ಎಂದು ಊಹಿಸಲಾಗಿದೆ.

ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್ ಆಗಸದಲ್ಲಿ ಹೊಸ ಹೊಸ ಆಕಾಶಕಾಯಗಳನ್ನು ನಕ್ಷತ್ರಗಳನ್ನು ಗುರುತಿಸುತ್ತಲೇ ಇದೆ. ಅವುಗಳಲ್ಲಿ ವಿವಿಧ ಗ್ರಹಗಳ ಸುತ್ತ ಸುತ್ತುತ್ತಿರುವ ಚಂದ್ರನಂತಹ ಉಪಗ್ರಹಗಳೂ ಸೇರಿವೆ. ಬುಧ ಮತ್ತು ಶುಕ್ರಗ್ರಹಗಳನ್ನು ಹೊರತು ಪಡಿಸಿ ಇನ್ನಿತರ ಎಲ್ಲ ಗ್ರಹಗಳಿಗೂ ಚಂದ್ರರಿದ್ದಾರೆ ಎಂಬ ಅತ್ಯಂತ ವಿಸ್ಮಯಕರ ಸಂಗತಿಯನ್ನು ಕೂಡ ಕಂಡು ಹಿಡಿಯಲಾಗಿದೆ. ಬಾಹ್ಯಾಕಾಶ ಸಂಶೋಧನೆಗಳು ಮುಂದುವರಿದಂತೆಲ್ಲ ಇನ್ನಷ್ಟು ಮಾಹಿತಿಗಳು ದೊರಕಬಹುದೇನೋ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.