ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ಮಂಕಿಪಾಕ್ಸ್‌: ಕಳೆದ ಎರಡು ದಶಕಗಳಲ್ಲಿ ಕಾಣಿಸಿಕೊಂಡ ಮೊದಲ ಪ್ರಕರಣ

ಅಕ್ಷರ ಗಾತ್ರ

ಟೆಕ್ಸಾಸ್‌: ಅಮೆರಿಕದ ಟೆಕ್ಸಾಸ್‌ನಲ್ಲಿ 'ಮಂಕಿಪಾಕ್ಸ್‌' ಪ್ರಕರಣ ಬೆಳಕಿಗೆ ಬಂದಿದೆ. ಕಳೆದ ಎರಡು ದಶಕದಲ್ಲಿ ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ.

ಈ ಬಗ್ಗೆ ಯುಎಸ್‌ನ ಖಾಯಿಲೆ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರ(ಸಿಡಿಸಿ) ಮಾಹಿತಿ ನೀಡಿದೆ ಎಂದು ವಿಜ್ಞಾನ ಸುದ್ದಿ ತಾಣ 'ಲೈವ್‌ ಸೈನ್ಸ್‌' ವರದಿ ಮಾಡಿದೆ.

ಮಂಕಿಪಾಕ್ಸ್‌ ಸೋಂಕಿತ ವ್ಯಕ್ತಿಯು ಅಮೆರಿಕದ ನಿವಾಸಿಯಾಗಿದ್ದು, ಅವರು ನೈಜೀರಿಯಾದಿಂದ ಎರಡು ದಿನಗಳ ಹಿಂದೆ ಯುಎಸ್‌ಗೆ ಮರಳಿದ್ದರು.

ಸೋಂಕಿತ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರತ್ಯೇಕವಾಗಿ ಇರಿಸಲಾಗಿದೆ. ವಿಮಾನಯಾನದಲ್ಲಿ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿರುವ ಪ್ರಯಾಣಿಕರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ರಾಜ್ಯ ಮಟ್ಟದ ಹಾಗೂ ಸ್ಥಳೀಯ ಆರೋಗ್ಯ ಸಂಸ್ಥೆಗಳು ತೊಡಗಿವೆ.

ಮಂಕಿಪಾಕ್ಸ್‌ನ ಕೇವಲ ಒಂದು ಪ್ರಕರಣದಿಂದ ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಕ್ತಿಯ ಉಸಿರಾಟದ ಮೂಲಕ ಮಂಕಿಪಾಕ್ಸ್‌ ಹರಡುತ್ತದೆ. ಆದರೆ, ಕೋವಿಡ್‌ ಕಾರಣದಿಂದ ವಿಮಾನ ಪ್ರಯಾಣದಲ್ಲಿ ಎಲ್ಲರೂ ಮಾಸ್ಕ್‌ ಧರಿಸಿರುತ್ತಾರೆ. ಆ ಹಿನ್ನೆಲೆಯಲ್ಲಿ ಬೇರೆಯವರಿಗೆ ಮಂಕಿಪಾಕ್ಸ್‌ ಹರಡಿರುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಸಿಡಿಸಿ ತಿಳಿಸಿದೆ.

ಮಂಕಿಪಾಕ್ಸ್‌ ಸೋಂಕು ಸಿಡುಬು ವರ್ಗಕ್ಕೆ ಸೇರಿದ ಕಾಯಿಲೆ. ಇದು ಆಫ್ರಿಕಾದ ದಟ್ಟಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಮಂಕಿಪಾಕ್ಸ್‌ ವೈರಣು ಇಲಿ, ಮೊಲಗಳಂತಹ ಪ್ರಾಣಿಗಳಲ್ಲಿ ಅಧಿಕವಾಗಿ ಪತ್ತೆಯಾಗುತ್ತದೆ. ಇದೊಂದು ಅಪರೂಪದ ಸಾಂಕ್ರಾಮಿಕವೆಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಮಂಕಿಪಾಕ್ಸ್‌ (ಎಂಪಿಎಕ್ಸ್‌)- 2003

ಘಾನದ ಕಾಡು ಇಲಿಗಳನ್ನು ಸಾಕುವ ಉದ್ದೇಶದಿಂದ ಅಮೆರಿಕಕ್ಕೆ ಆಮದು ಮಾಡಿಕೊಳ್ಳಲಾಗಿತ್ತು. ಈ ಇಲಿಗಳಿಂದ ಸೋಂಕು ಹರಡಿದ್ದು ಪತ್ತೆಯಾಗಿತ್ತು. ಈ ಇಲಿಗಳ ಸಂಪರ್ಕಕ್ಕೆ ಬಂದ ಉತ್ತರ ಅಮೆರಿಕದ ಪ್ರೇರಿ ಕಾಡು ಇಲಿಗಳಿಗೆ ಈ ಸೋಂಕು ತಗುಲಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT