ನವದೆಹಲಿ: ಭಾರತದ ಚೊಚ್ಚಲ ಮಾನವಸಹಿತ ಗಗನಯಾನ ಬಾಹ್ಯಾಕಾಶ ಕಾರ್ಯಕ್ರಮವನ್ನು 2027ರ ಮೊದಲ ತ್ರೈಮಾಸಿಕದಲ್ಲಿ ಕಾರ್ಯಗತಗೊಳಿಸಲು ಇಸ್ರೊ ನಿರ್ಧರಿಸಿದೆ.

ಈ ಮೊದಲು ನಿಗದಿ ಮಾಡಲಾಗಿದ್ದ ಸಮಯಕ್ಕಿಂತ ಐದು ವರ್ಷ ತಡವಾಗಿ ಈ ಮಹತ್ವಾಕಾಂಕ್ಷೆ ಯೋಜನೆ ಅನುಷ್ಠಾನಗೊಳ್ಳಲಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಇಸ್ರೊ ಅಧ್ಯಕ್ಷ ವಿ.ನಾರಾಯಣನ್,‘ಮಾನವಸಹಿತ ಗಗನಯಾನ ಬಹಳ ಸಂಕೀರ್ಣವಾದ ಯೋಜನೆ. ಇದಕ್ಕೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಸಂಸ್ಥೆ ಅಭಿವೃದ್ಧಿಪಡಿಸುತ್ತಿರುವ ಕಾರಣ ಯೋಜನೆಯನ್ನು ಮುಂದೂಡಲಾಗಿದೆ’ ಎಂದರು.

‘ಗಗನಯಾನ ಕಾರ್ಯಕ್ರಮದ ಭಾಗವಾಗಿ, ಮೊದಲ ಮಾನವರಹಿತ ಗಗನನೌಕೆಯನ್ನು ಈ ವರ್ಷಾಂತ್ಯಕ್ಕೆ ಉಡ್ಡಯನ ಮಾಡಲಾಗುತ್ತದೆ. ಮುಂದಿನ ವರ್ಷ ಮಾನವರಹಿತ ಎರಡು ಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ಹೇಳಿದರು.

‘ಗಗನಯಾನಿಗಳನ್ನು ಒಳಗೊಂಡ ಮೊದಲ ಗಗನಯಾನ ಯೋಜನೆಯನ್ನು 2027ರ ಮೊದಲ ತ್ರೈಮಾಸಿಕದಲ್ಲಿ ಕಾರ್ಯಗತಗೊಳಿಸುವ ಗುರಿ ಹೊಂದಲಾಗಿದೆ. ಇದಕ್ಕೂ ಮುನ್ನ, ಮಾನವನನ್ನೇ ಹೋಲುವ ‘ವ್ಯೋಮಮಿತ್ರ’ ರೊಬಾಟ್ಅನ್ನು ಬಾಹ್ಯಾಕಾಶಕ್ಕೆ ಕಳಿಸಲಾಗುವುದು. ನಂತರ, ಗಗನಯಾನಿಗಳನ್ನು ಹೊತ್ತ ಗಗನನೌಕೆಯನ್ನು ಕೆಳ ಭೂ ಕಕ್ಷೆಗೆ ಉಡ್ಡಯನ ಮಾಡಲಾಗುತ್ತದೆ’ ಎಂದು ವಿವರಿಸಿದರು.

‘ಭೂಮಿಯಿಂದ 400 ಕಿ.ಮೀ ದೂರದ ಕೆಳ ಭೂಕಕ್ಷೆಗೆ ಗಗನಯಾನಿಗಳನ್ನು ಕರೆದೊಯ್ದು, ಸುರಕ್ಷಿತವಾಗಿ ಮರಳಿ ಭೂಮಿಗೆ ಕರೆತರುವುದು ಗಗನಯಾನ ಕಾರ್ಯಕ್ರಮದ ಉದ್ದೇಶ. ಇದಕ್ಕಾಗಿ ‘ಪರಿಸರ ನಿಯಂತ್ರಣ ಮತ್ತು ಜೀವ ರಕ್ಷಕ ವ್ಯವಸ್ಥೆ’ಯನ್ನು (ಎನ್ವಿರಾನ್ಮೆಂಟ್ ಕಂಟ್ರೋಲ್ ಅಂಡ್ ಲೈಫ್ ಸಪೋರ್ಟ್ ಸಿಸ್ಟಮ್– ಇಸಿಎಲ್ಎಸ್ಎಸ್) ಅಭಿವೃದ್ಧಿಪಡಿಸಲಾಗುತ್ತಿದೆ’ ಎಂದರು.

‘ಮಾನವಸಹಿತ ಗಗನಯಾನ ಬಹು ಸಂಕೀರ್ಣವಾದ ಯೋಜನೆ. ಇದಕ್ಕೆ ಅಗತ್ಯವಿರುವ ತಂತ್ರಜ್ಞಾನದ ಅಭಿವೃದ್ಧಿ ಶೇ 90ರಷ್ಟು ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾರ್ಯ ನಡೆಯುತ್ತಿದೆ. ಈ ಯೋಜನೆಯಲ್ಲಿ ನಾವು ಯಶಸ್ಸು ಸಾಧಿಸಿದಲ್ಲಿ, ರಷ್ಯಾ, ಅಮೆರಿಕ ಹಾಗೂ ಚೀನಾ ನಂತರ, ಮಾನವನನ್ನು ಸ್ವತಂತ್ರವಾಗಿ ಬಾಹ್ಯಾಕಾಶಕ್ಕೆ ಕಳುಹಿಸಿದ ನಾಲ್ಕನೇ ರಾಷ್ಟ್ರ ಎಂಬ ಹೆಗ್ಗಳಿಕೆ ಭಾರತದದ್ದಾಗಲಿದೆ’ ಎಂದು ಹೇಳಿದರು.

‘ಉಪಗ್ರಹಗಳನ್ನು ಬೇರ್ಪಡಿಸುವ ಹಾಗೂ ಜೋಡಿಸುವ ಪ್ರಯೋಗ (ಸ್ಪೇಡೆಕ್ಸ್) ಯಶಸ್ವಿಯಾಗಿದೆ. ಸ್ಪೇಡೆಕ್ಸ್–2 ಕುರಿತು ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ನಾರಾಯಣನ್ ತಿಳಿಸಿದರು.

2018ರಲ್ಲಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗಗನಯಾನ ಯೋಜನೆ ಘೋಷಿಸಿದ್ದರು ಹಾಗೂ ಯೋಜನೆ ಅನುಷ್ಠಾನಕ್ಕೆ 2022ರ ಗುರಿ ನಿಗದಿ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.