ಸೋಮವಾರ, ಆಗಸ್ಟ್ 2, 2021
26 °C

ಕೋವಿಡ್‌: ಮನುಷ್ಯರ ಮೇಲೆ ಲಸಿಕೆ‌ ಪ್ರಯೋಗ ಆರಂಭ

ಎಎಫ್‌ಪಿ Updated:

ಅಕ್ಷರ ಗಾತ್ರ : | |

ಲಸಿಕೆ ಪ್ರಯೋಗ– ಸಾಂದರ್ಭಿಕ ಚಿತ್ರ

ಫ್ರಾಂಕ್‌ಫರ್ಟ್‌ ಆ್ಯಮ್‌ ಮೈನ್‌: ಕೊರೊನಾ ಸೋಂಕಿಗೆ ಜರ್ಮನಿಯ ಬಯೋಟೆಕ್‌ ಕಂಪನಿ ಕ್ಯೂರ್‌ವ್ಯಾಕ್‌ ತಯಾರಿಸಿರುವ ವ್ಯಾಕ್ಸಿನ್‌ ಕ್ಯಾಂಡಿಡೇಟ್‌ (ಸಂಭಾವ್ಯ ಲಸಿಕೆ) ಅನ್ನು ಮನುಷ್ಯರ ಮೇಲೆ ಪ್ರಯೋಗಕ್ಕೆ ‘ದಿ ಪೌಲ್‌ ಎರ್ಲಿಕ್‌ ಇನ್‌ಸ್ಟಿಟ್ಯೂಟ್‌’(ಪಿಇಐ) ಅನುಮತಿ ನೀಡಿದೆ. 

‘ಸಂಭಾವ್ಯ ಲಸಿಕೆಯ ಸಕಾರಾತ್ಮಕ ಪರಿಣಾಮ ಹಾಗೂ ದುಷ್ಪರಿಣಾಮಗಳನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಿದ ಬಳಿಕ ಮನುಷ್ಯರ ಮೇಲೆ ಪ್ರಯೋಗಕ್ಕೆ ಕ್ಯೂರ್‌ವ್ಯಾಕ್‌ಗೆ ಅನುಮತಿ ನೀಡಲಾಗಿದೆ’ ಎಂದು ಪಿಇಐ ಪ್ರಕಟಣೆಯಲ್ಲಿ ತಿಳಿಸಿದೆ. 

ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಪ್ರಕಾರ ವಿಶ್ವದಲ್ಲಿ ಪ್ರಸ್ತುತ 11 ಲಸಿಕೆಗಳನ್ನು ಮನುಷ್ಯರ ಮೇಲೆ ಪ್ರಯೋಗಕ್ಕೆ ಒಳಪಡಿಸಲಾಗಿದೆ. ಕ್ಯೂರ್‌ವ್ಯಾಕ್‌ ಕಂಪನಿಯು ವಿದೇಶಿ ಕಂಪನಿಗಳ ಕೈಸೇರದೇ ಇರಲು, ಎರಡು ದಿನಗಳ ಹಿಂದಷ್ಟೇ ಜರ್ಮನಿ ಸರ್ಕಾರ ಕಂಪನಿಯ ಶೇ 23 ಷೇರು ಖರೀದಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು