ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ನಕರಾಳು ತಾಂಡಾ, ನಾರಾಯಣದೇವರ ಕೆರೆ, ಕೊಪ್ಪಳ ಜಿಲ್ಲೆಯ ಕಾಸನಕಿಂಡಿ ಹಾಗೂ ಕಾತ್ರೀಕಿ ಗ್ರಾಮಗಳ ಬಳಿ ಇರುವ ತುಂಗಭದ್ರಾ ಹಿನ್ನೀರಿನ ಪ್ರದೇಶದಲ್ಲಿ ಹಕ್ಕಿಗಳ ಆವಾಸ ಸ್ಥಾನಕ್ಕೆ ಧಕ್ಕೆ ಉಂಟಾಗುತ್ತಿದೆ.

ಇಲ್ಲಿನ ಪ್ರದೇಶ ಮರಳಿನಿಂದ ಕೂಡಿರುವುದರಿಂದ ‘ಲಿಟಲ್ ಟರ್ನ್’ ಪಕ್ಷಿಗಳು ಮೊಟ್ಟೆಗಳನ್ನಿಟ್ಟು ಸಂತಾನೋತ್ಪತ್ತಿ ನಡೆಸುತ್ತವೆ. ಈ ಪ್ರದೇಶದಲ್ಲಿ ರೈತರು ಅತಿಯಾದ ರಾಸಾಯನಿಕ ಬಳಕೆ ಮಾಡುವುದರಿಂದ ಜೈವಿಕ ವೈವಿಧ್ಯತೆಗೆ ಧಕ್ಕೆಯಾಗುತ್ತಿದೆ. ಜತೆಗೆ ಹಕ್ಕಿಗಳು ಹಾಗೂ ಅವುಗಳ ಮೊಟ್ಟೆಗಳು ನಾಯಿಗಳ ಪಾಲಾಗುತ್ತಿವೆ.

ಜನರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಪಡೆಯುವ ಉದ್ಧೇಶದಿಂದ ಹಕ್ಕಿಗಳ ಮೊಟ್ಟೆ ಹಾಗೂ ಅವುಗಳ ಆವಾಸ ಸ್ಥಾನಕ್ಕೆ ಹಾನಿಗೊಳಿಸುತ್ತಿದ್ದಾರೆ. ಈ ಸ್ಥಳದಲ್ಲಿ ಅರಣ್ಯ ಸಿಬ್ಬಂದಿ ನಿಯೋಜಿಸಿ, ಹಕ್ಕಿಗಳ ಆವಾಸ ಸ್ಥಾನವನ್ನು ರಕ್ಷಿಸಬೇಕು ಎಂದು ಪಕ್ಷಿ ತಜ್ಞ ವಿಜಯ್ ಇಟ್ಟಿಗಿ ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-25-1449070984

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.