ಮಾನವರನ್ನೂ ಸೇರಿದಂತೆ ಜೀವಿಗಳಿಗೆ ಉಷ್ಣಾಘಾತವನ್ನು ತಡೆದುಕೊಳ್ಳುವ ಶಕ್ತಿ ಇದೆಯೇ ಎಂಬುದನ್ನು ವಿಜ್ಞಾನಿಗಳು ಪರಿಶೀಲಿಸಿದ್ದಾರೆ. ಅತಿಯಾದ ಶಾಖವನ್ನು ತಡೆದುಕೊಳ್ಳಲು ಜೀವಿಗಳ ಶರೀರದಲ್ಲಿ ರಕ್ಷಣಾವ್ಯವಸ್ಥೆಯೊಂದು ಕೆಲಸ ಮಾಡುತ್ತದೆ. ವಾತಾವರಣದಲ್ಲಿ ಉಷ್ಣತೆ ಹೆಚ್ಚಿ ಸೆಕೆ ಅತಿಯಾದಾಗ ಆ ಶಾಖ ಜೀವಿಗಳ ಮೇಲೆ ಪ್ರಭಾವ ಬೀರುತ್ತದೆ.