ಗುರುವಾರ , ಅಕ್ಟೋಬರ್ 1, 2020
27 °C
ಡಿಆರ್‌ಡಿಒ ಅಭಿನಂದಿಸಿದ ರಕ್ಷಣಾ ಸಚಿವ

ಡಿಆರ್‌ಡಿಒ: ಎಚ್‌ಎಸ್‌ಟಿಡಿವಿ ಪರೀಕ್ಷಾರ್ಥ ಹಾರಾಟ ಯಶಸ್ವಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶೀಯವಾಗಿ ಅಭಿವೃದ್ಧಿಪಡಿಸಿದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ ವೆಹಿಕಲ್‌(ಎಚ್‌ಎಸ್‌ಟಿಡಿವಿ – ಶಬ್ದಾತೀತ ತಂತ್ರಜ್ಞಾನ ಪ್ರಾತ್ಯಕ್ಷಿಕೆ ವಾಹನ) ಪರೀಕ್ಷಾರ್ಥ ಹಾರಾಟ  ಸೋಮವಾರ ಯಶಸ್ವಿಯಾಗಿದೆ. ಇದು ಭವಿಷ್ಯದ ವೈಮಾನಿಕ ವೇದಿಕೆಗಳಿಗೆ  ಮತ್ತು ಭವಿಷ್ಯದ ದೂರಗಾಮಿ ಕ್ಷಿಪಣಿ ವ್ಯವಸ್ಥೆಗೆ ಶಕ್ತಿ ತುಂಬುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಹೈಪರ್‌ಸೋನಿಕ್ ಪ್ರೊಪಲ್ಷನ್ ತಂತ್ರಜ್ಞಾನ ಆಧಾರಿತವಾಗಿ ಈ ಎಚ್ಎಸ್‌ಟಿಡಿವಿ ವಾಹನವನ್ನು ಅಭಿವೃದ್ಧಿಗೊಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಡಿಆರ್‌ಡಿಒ ಸಂಸ್ಥೆಯನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರು ಅಭಿನಂದಿಸಿ ಟ್ವೀಟ್‌ ಮಾಡಿದ್ದಾರೆ. ‘ಇದೊಂದು ದೇಶದ ಹೆಗ್ಗುರುತಿನ ಸಾಧನೆ‘ ಎಂದು ಬಣ್ಣಿಸಿದ್ದಾರೆ.

‘ಪ್ರಧಾನಿಯವರ ದೂರದೃಷ್ಟಿಯ ‘ಆತ್ಮನಿರ್ಭರ ಭಾರತ‘ ಯೋಜನೆಯನ್ನು ಸಾಕಾರಗೊಳಿಸುವ ಈ ಹೆಗ್ಗುರುತಿನ ಸಾಧನೆ ಮಾಡಿರುವ ಡಿಆರ್‌ಡಿಒ ಸಂಸ್ಥೆಯನ್ನು ಅಭಿನಂದಿಸುತ್ತೇನೆ. ಈ ಮಹತ್ತರವಾದ ಸಾಧನೆಗೆ ದೇಶವೇ ಹೆಮ್ಮೆ ಪಡುತ್ತದೆ‘ ಎಂದು ರಾಜನಾಥ್ ಸಿಂಗ್ ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇದರ ವೇಗ ಗಂಟೆಗೆ 3,836 ಮೈಲಿಗಳು.

‘ಎಚ್‌ಎಸ್‌ಟಿಡಿವಿಯ ಯಶಸ್ವಿ ಪರೀಕ್ಷಾ ಹಾರಾಟದ ಮೂಲಕ ಭಾರತವು ಹೆಚ್ಚು ಸಂಕೀರ್ಣ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಪ್ರದರ್ಶಿಸುವಂತಾಗಿದೆ. ಇದು ದೇಶೀಯ ರಕ್ಷಣಾ ಉದ್ಯಮದ ಸಹಭಾಗಿತ್ವದಲ್ಲಿ ಮುಂದಿನ ಪೀಳಿಗೆಯ ಹೈಪರ್ಸಾನಿಕ್ ವಾಹನಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ‘ ಎಂದು ಡಿಆರ್‌ಡಿಒ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು