ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಸಾದಿಂದ ‘ವಿಕ್ರಮ್‌’ಗೆ ಸಂದೇಶ

ವಿಕ್ರಮ್‌ ಚಿತ್ರ ಸೆರೆಹಿಡಿದು ಕಳುಹಿಸಲಿದೆ ನಾಸಾ
Last Updated 12 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಚಂದ್ರನ ನೆಲದ ಮೇಲಿರುವ ‘ವಿಕ್ರಮ್‌’ ಲ್ಯಾಂಡರ್‌ ಜತೆಗೆ ಸಂಪರ್ಕಸಾಧಿಸಲು ಇಸ್ರೊ ವಿಜ್ಞಾನಿಗಳು ಪ್ರಯತ್ನ ಮುಂದುವರಿಸಿರುವ ಬೆನ್ನಲ್ಲೇ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಕೂಡ ಈ ಕಾರ್ಯದಲ್ಲಿ ಕೈ ಜೋಡಿಸಿದೆ.

ಕಳೆದ ಶನಿವಾರ ಮುಂಜಾನೆ ಚಂದ್ರನ ನೆಲದ ಮೇಲೆ ‘ವಿಕ್ರಮ್‌’ ಲ್ಯಾಂಡಿಂಗ್‌ ಆಗುವ ಸಂದರ್ಭದಲ್ಲಿ ಮಾಸ್ಟರ್‌ ಕಂಟ್ರೋಲ್‌ ಕೇಂದ್ರದ ಜತೆ ನಿಯಂತ್ರಣ ಕಡಿದುಕೊಂಡಿತು. ಆ ಬಳಿಕ ಸಂಪರ್ಕ ಸಾಧಿಸಲು ಭಾರತೀಯ ವಿಜ್ಞಾನಿಗಳು ನಿರಂತರ ಪ್ರಯತ್ನ ನಡೆಸುತ್ತಲೇ ಇದ್ದಾರೆ. ಈವರೆಗೂ ಯಾವುದೇ ಸಕಾರಾತ್ಮಕ ಸೂಚನೆಯೂ ಸಿಕ್ಕಿಲ್ಲ. ಇದೀಗ ಭಾರತದ ನೆರವಿಗೆ ನಾಸಾ ಬಂದಿದೆ.

ನಾಸಾದ ಆರ್ಬಿಟರ್‌ವೊಂದು ಚಂದ್ರನ ಸುತ್ತ ಪರಿಭ್ರಮಣ ನಡೆಸುತ್ತಿದೆ. ಈ ಆರ್ಬಿಟರ್‌ ‘ವಿಕ್ರಮ್‌’ ಚಿತ್ರವನ್ನು ಸೆರೆ ಹಿಡಿಯಲಿದೆ. ಸೆ. 17 ಕ್ಕೆ ಆರ್ಬಿಟರ್‌ ವಿಕ್ರಮ್‌ ಇರುವ ಸ್ಥಳದ ಮೇಲೆ ಹಾದು ಹೋಗಲಿದೆ. ಚಿತ್ರವನ್ನು ಇಸ್ರೋ ಜತೆ ಹಂಚಿಕೊಳ್ಳಲಿದ್ದೇವೆ ’ ಎಂದು ನಾಸಾದ ವಕ್ತಾರರೊಬ್ಬರು ಅಮೆರಿಕ ದೈನಿಕ ‘ದಿ ನ್ಯೂಯಾರ್ಕ್‌ ಟೈಮ್ಸ್‌’ಗೆ ಮಾಹಿತಿ ನೀಡಿದ್ದಾರೆ.

400 ಮೀಟರ್ ಇದ್ದಾಗ ಸಂಪರ್ಕ ಕಡಿತ: ಲ್ಯಾಂಡರ್‌ ಚಂದ್ರನ ನೆಲಕ್ಕೆ 2.1 ಕಿ.ಮೀ ಇದ್ದಾಗ ಸಂಪರ್ಕ ಕಡಿದುಕೊಂಡಿತು ಎಂದು ಇಲ್ಲಿಯವರೆಗೆ ವ್ಯಾಖ್ಯಾನಿಸಲಾಗಿತ್ತು. ಆದರೆ, ಚಂದ್ರನ ನೆಲಕ್ಕೆ 400 ಮೀಟರ್‌ಗಳಷ್ಟು ಸಮೀಪ ಇದ್ದಾಗ ಸಂಪರ್ಕ ಕಡಿದುಕೊಂಡಿತು ಎಂದು ಇಸ್ರೊ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT