ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತರುವ ರೀತಿಯಲ್ಲಿ, ಇಸ್ರೊ ಮುಖ್ಯಸ್ಥರಾದ ಡಾ. ವಿ ನಾರಾಯಣನ್ ಅವರು ಎಪ್ರಿಲ್ 18ರ ಶನಿವಾರದಂದು ಭಾರತದ ಮಹತ್ವಾಕಾಂಕ್ಷಿ ಜಿ20 ಉಪಗ್ರಹ 2027ರಲ್ಲಿ ಬಾಹ್ಯಾಕಾಶ ತಲುಪಲಿದೆ ಎಂದು ಘೋಷಿಸಿದರು. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ), ಇಸ್ರೊ ಮತ್ತು ಏರೋನಾಟಿಕಲ್ ಸೊಸೈಟಿ ಆಫ್ ಇಂಡಿಯಾದ ವಿಜ್ಞಾನಿಗಳೊಡನೆ ಇಂಜಿನಿಯರಿಂಗ್ ಸ್ಟಾಫ್ ಕಾಲೇಜ್ ಆಫ್ ಇಂಡಿಯಾದಲ್ಲಿ ಆಯೋಜಿಸಿದ ಸಂವಾದದಲ್ಲಿ ಮಾತನಾಡುವ ಸಂದರ್ಭದಲ್ಲಿ ಡಾ. ನಾರಾಯಣನ್ ಈ ರೋಮಾಂಚಕ ವಿಚಾರವನ್ನು ಹಂಚಿಕೊಂಡರು. ಈ ಮೂಲಕ ಭಾರತ ಮತ್ತೊಮ್ಮೆ ಬಾಹ್ಯಾಕಾಶ ಅನ್ವೇಷಣೆಯಲ್ಲಿ ಜಗತ್ತಿನ ನಂಬಿಕಾರ್ಹ ಸಹಯೋಗಿಯಾಗಿರುವುದನ್ನು ಸಾಬೀತುಪಡಿಸಿದೆ.

ಹಾಗಾದರೆ ಈ ಜಿ20 ಉಪಗ್ರಹ ಎಂದರೇನು? ನಮ್ಮ ನಿಮ್ಮಂತಹ ಸಾಮಾನ್ಯ ಜನರು ಈ ಕುರಿತು ಏಕೆ ಚಿಂತಿಸಬೇಕು? ಸರಳವಾಗಿ ಹೇಳುವುದಾದರೆ, ಇದು ಎಲ್ಲ ಜಿ-20 ಸದಸ್ಯ ರಾಷ್ಟ್ರಗಳ ಪರವಾಗಿ ಭಾರತ ಅಭಿವೃದ್ಧಿ ಪಡಿಸಿರುವ ಉಪಗ್ರಹವಾಗಿದೆ. ಜಿ-20 ಗುಂಪು ಅಮೆರಿಕ, ಚೀನಾ, ಯುಕೆ, ಜಪಾನ್, ಜರ್ಮನಿ ಸೇರಿದಂತೆ ಜಗತ್ತಿನ ಬೃಹತ್ ಆರ್ಥಿಕತೆಗಳನ್ನು ಒಳಗೊಂಡಿದೆ. ಈ ದೇಶಗಳು ಜಿ-20 ಗುಂಪಿನ ಸದಸ್ಯ ರಾಷ್ಟ್ರಗಳಾಗಿದ್ದರೂ, ಭಾರತ ಉಪಗ್ರಹದ ವಿನ್ಯಾಸ, ನಿರ್ಮಾಣ ಮತ್ತು ಉಡಾವಣೆಯಲ್ಲಿ ನಾಯಕನ ಪಾತ್ರ ನಿರ್ವಹಿಸುತ್ತಿದೆ. ಭಾರತ ಒಂದು ಅದ್ಧೂರಿ ಭೋಜನಕೂಟವನ್ನು ಆಯೋಜಿಸಿ, ಎಲ್ಲರನ್ನೂ ಊಟಕ್ಕೆ ಆಹ್ವಾನಿಸಿದ್ದು, ಇದರ ಮುಖ್ಯ ಬಾಣಸಿಗರು ಭಾರತೀಯರೇ ಆಗಿರುವುದಕ್ಕೆ ಈ ಬೆಳವಣಿಗೆಯನ್ನು ಹೋಲಿಸಬಹುದು.
.ISRO: ಸಣ್ಣ ಉಪಗ್ರಹ ಉಡ್ಡಯನ ವಾಹನಗಳ ಮೂರನೇ ಹಂತದ ಪರೀಕ್ಷೆ ನಡೆಸಿದ ಇಸ್ರೊ.PHOTOS | ಇಸ್ರೊ ಐತಿಹಾಸಿಕ ಸಾಧನೆ; ಶ್ರೀಹರಿಕೋಟಾದಿಂದ 100ನೇ ಉಡ್ಡಯನ ಯಶಸ್ವಿ.
ಈ ಉಪಗ್ರಹ ಒಂದು ದೊಡ್ಡ ಗುರಿಯನ್ನು ಹೊಂದಿದೆ. ಅದೇನೆಂದರೆ, ಒಂದಲ್ಲ ಒಂದು ಸಮಸ್ಯೆಯಿಂದ ಬಾಧಿತವಾಗಿರುವ ನಮ್ಮ ಭೂಮಿಯ ಮೇಲೆ ಸದಾ ಒಂದು ಕಣ್ಣಿಡುವುದು. ಈ ಉಪಗ್ರಹ ಹವಾಮಾನ ಬದಲಾವಣೆಯ ಅಧ್ಯಯನ, ವಾಯು ಮಾಲಿನ್ಯದ ಗಮನಿಸುವಿಕೆ, ಮತ್ತು ಜಗತ್ತಿನಾದ್ಯಂತ ಹವಾಮಾನ ಮಾದರಿಗಳ ಮೇಲ್ವಿಚಾರಣೆ ನಡೆಸಲಿದೆ. ಪ್ರತಿ ಚಳಿಗಾಲದಲ್ಲಿ ದೆಹಲಿ ಹೊಗೆ, ಮಾಲಿನ್ಯಕ್ಕೆ ಸಿಲುಕಿ ಉಸಿರು ಕಟ್ಟುವುದು, ರೈತರು ಅಕಾಲಿಕ ಮಳೆಯ ಕುರಿತು ಚಿಂತೆಗೊಳಗಾಗುವುದು, ಮತ್ತು ಉಷ್ಣ ಅಲೆಗಳು ಪ್ರಾಣಾಂತಿಕವಾಗುವ ಈ ಕಾಲಘಟ್ಟದಲ್ಲಿ, ಈ ಉಪಗ್ರಹ ಒದಗಿಸುವ ಮಾಹಿತಿಗಳು ಕೇವಲ ಪರದೆಯ ಮೇಲಿನ ಅಂಕಿಅಂಶಗಳಷ್ಟೇ ಅಲ್ಲ. ಇವು ಜೀವ ರಕ್ಷಣೆ, ಕೃಷಿ ರಕ್ಷಣೆಗೆ ನೆರವಾಗಿ, ನೈಸರ್ಗಿಕ ವಿಕೋಪಗಳು ಸಂಭವಿಸುವ ಮುನ್ನವೇ ಸರ್ಕಾರಕ್ಕೆ ಸಿದ್ಧತೆ ನಡೆಸಲು ನೆರವಾಗಲಿವೆ.

ಈಗ, ಈ ಉಪಗ್ರಹ ಕಾರ್ಯಾಚರಿಸುವುದು ಹೇಗೆ ಎನ್ನುವುದನ್ನು ಗಮನಿಸೋಣ. ಉಪಗ್ರವನ್ನು ವಿಜ್ಞಾನಿಗಳು ಭೂಮಿಯಿಂದ 720 ಕಿಲೋಮೀಟರ್ ಎತ್ತರದಲ್ಲಿರುವ 'ಸನ್ ಸಿಂಕ್ರೊನಸ್ ಆರ್ಬಿಟ್' ಎನ್ನುವ ಕಕ್ಷೆಗೆ ಅಳವಡಿಸಲಿದ್ದಾರೆ. ಅಂದರೆ, ಈ ಉಪಗ್ರಹ ಪ್ರತಿದಿನವೂ ಬಹುತೇಕ ಒಂದೇ ಸಮಯದಲ್ಲಿ ಭೂಮಿಯ ಒಂದೇ ಸ್ಥಳದ ಮೇಲ್ಭಾಗದಲ್ಲಿ ಹಾದುಹೋಗಲಿದೆ. ಓರ್ವ ಅಂಚೆಪೇದೆ ಪ್ರತಿದಿನವೂ ಒಂದೇ ಸಮಯದಲ್ಲಿ ನಿಮ್ಮ ಬೀದಿಗೆ ಬರುವುದನ್ನು ಊಹಿಸಿಕೊಳ್ಳಿ. ಆತನಿಗೆ ಇಂದು ಬಂದಾಗ ನಿನ್ನೆಗಿಂತ ಏನೇನು ಬದಲಾವಣೆ ಉಂಟಾಗಿದೆ ಎನ್ನುವುದು ಸುಲಭವಾಗಿ ತಿಳಿಯುತ್ತದೆ. ಇದೇ ರೀತಿ ವಿಜ್ಞಾನಿಗಳು ಪ್ರತಿದಿನವೂ ಕಾಡುಗಳು, ನದಿಗಳು, ನಗರಗಳು, ಮತ್ತು ಗಾಳಿಯ ಗುಣಮಟ್ಟದ ಬದಲಾವಣೆಗಳನ್ನು ಗಮನಿಸಲು ಸಾಧ್ಯವಾಗುತ್ತದೆ. ಈ ಉಪಗ್ರಹ ಭೂಮಿಯ ಸುತ್ತಲೂ 98.269 ಡಿಗ್ರಿ ಬಾಗುವಿಕೆಯಲ್ಲಿ ಪರಿಭ್ರಮಣೆ ನಡೆಸಲಿದ್ದು, ಇದು ಬಹುತೇಕ ಸಂಪೂರ್ಣ ಭೂಮಿಯನ್ನೇ ವ್ಯಾಪಿಸಲು ಸಾಧ್ಯವಾಗುತ್ತದೆ. ಇದು ಪ್ರತಿಯೊಂದು ಸ್ಥಳಕ್ಕೂ ಪ್ರತಿ 48 ದಿನಗಳಿಗೊಮ್ಮೆ ಭೇಟಿ ನೀಡಲು ಸಾಧ್ಯವಾಗುತ್ತದೆ.

ಈ ಉಪಗ್ರಹ ನಾಲ್ಕು ಶಕ್ತಿಶಾಲಿ ಉಪಕರಣಗಳನ್ನು ಬಳಸುತ್ತಿದ್ದು, ಪ್ರತಿಯೊಂದು ಉಪಕರಣವೂ ವಿಶೇಷ ಕಾರ್ಯಗಳನ್ನು ನಿರ್ವಹಿಸುತ್ತದೆ. ಎನ್ಸ್ಯಾಕ್ (EnSAC) ಸೆನ್ಸರ್ ನಮ್ಮ ವಾತಾವರಣದಲ್ಲಿ ತೇಲುತ್ತಿರುವ ಅಪಾಯಕಾರಿ ಉಳಿಕೆ ಅನಿಲಗಳ ಮಟ್ಟವನ್ನು ಅಳೆಯುತ್ತದೆ. ಈ ಅನಿಲಗಳೇ ವಾಯು ಮಾಲಿನ್ಯ ಮತ್ತು ಜಾಗತಿಕ ತಾಪಮಾನ ಏರಿಕೆಗೆ ಬಹುದೊಡ್ಡ ಕಾರಣಕರ್ತರಾಗಿವೆ. ಇನ್ನು ಹೈಮ್ಯಾಥ್ಸ್ (HyMATHS) ಉಪಕರಣ ತಾಪಮಾನ ಮತ್ತು ಆರ್ದ್ರತೆಯನ್ನು ಗಮನಿಸಿ, ಹವಾಮಾನ ಮುನ್ಸೂಚನೆಯನ್ನು ಉತ್ತಮಗೊಳಿಸಲಿದೆ. ಇದರಿಂದ ರೈತರು ಮತ್ತು ಜನಸಾಮಾನ್ಯರಿಗೆ ತಮ್ಮ ಕಾರ್ಯಗಳನ್ನು ಯೋಜಿಸಲು ಸುಲಭವಾಗುತ್ತದೆ. ಇನ್ನು ಪೋಲ್ಸ್ಯಾಕ್ (POLSAC) ಸೆನ್ಸರ್ ಮೋಡಗಳು, ಧೂಳು ಮತ್ತು ಏರೋಸಾಲ್ಗಳು ಎನ್ನುವ ಸಣ್ಣ ಕಣಗಳನ್ನು ಗಮನಿಸಿ, ಮಳೆ ಸಮಯಕ್ಕೆ ಸರಿಯಾಗಿ ಬರುತ್ತದೋ ಇಲ್ಲವೋ ಎನ್ನುವುದನ್ನು ನಿರ್ಧರಿಸಲು ನೆರವಾಗುತ್ತದೆ. ಅಂತಿಮವಾಗಿ, ಸ್ಯಾಕ್ಎಫ್ಎಫ್ (SCAFF) ಉಪಕರಣ ಭೂಮಿ, ಕಾಡುಗಳ ಛಾಯಾಚಿತ್ರ ತೆಗೆದು, ಕಾಡ್ಗಿಚ್ಚನ್ನೂ ಆರಂಭಿಕ ಹಂತದಲ್ಲೇ ಗುರುತಿಸಲಿದೆ. ಇದು ಲಕ್ಷಾಂತರ ಮರಗಳು ಮತ್ತು ವನ್ಯಜೀವಿಗಳನ್ನು ಉಳಿಸಲು ನೆರವಾಗಲಿದೆ.

ಡಾ. ನಾರಾಯಣನ್ ತನ್ನ ಉಪನ್ಯಾಸದಲ್ಲಿ ಭಾರತದ ಹೆಮ್ಮೆಯ ಸಾಧನೆಗಳನ್ನೂ ಸ್ಮರಿಸಿದರು. ಭಾರತ ಒಂದೇ ರಾಕೆಟ್ ಮೂಲಕ, ಯಾವುದೇ ಅವಘಡವೂ ಉಂಟಾಗದಂತೆ 104 ಉಪಗ್ರಹಗಳನ್ನು ಕಕ್ಷೆಗೆ ಜೋಡಿಸಿ ಜಗತ್ತೇ ನಿಬ್ಬೆರಗಾಗುವಂತಹ ಸಾಧನೆ ನಿರ್ಮಿಸಿದ್ದನ್ನೂ ನಾರಾಯಣನ್ ಸ್ಮರಿಸಿದರು. ಇಸ್ರೊ ಈಗಾಗಲೇ 34 ದೇಶಗಳ 433 ಉಪಗ್ರಹಗಳನ್ನು ತನ್ನ ವಾಣಿಜ್ಯಿಕ ಯೋಜನೆಗಳ ಅಡಿಯಲ್ಲಿ ಉಡಾವಣೆಗೊಳಿಸಿದ್ದು, ಭಾರತದ ನೆಲದಿಂದ ಉಡಾವಣೆಗೊಂಡ ಅತ್ಯಂತ ಹೆಚ್ಚು ತೂಕದ ಉಪಗ್ರಹವೂ ವಾಣಿಜ್ಯಿಕ ಉಪಗ್ರಹವೇ ಆಗಿತ್ತು. ಇದು ಭಾರತಕ್ಕೆ ಮಹತ್ವದ ವಿದೇಶೀ ವಿನಿಮಯ ಸಂಪಾದಿಸಿ ಕೊಟ್ಟಿತ್ತು.

ಭವಿಷ್ಯದ ದೊಡ್ಡ ಚಿತ್ರಣವನ್ನು ಗಮನಿಸುವುದಾದರೆ, ಇಸ್ರೊ 2040ರ ವೇಳೆಗೆ ಚಂದ್ರನ ಮೇಲೆ ಓರ್ವ ಭಾರತೀಯನನ್ನು ಕಳುಹಿಸುವ ಗುರಿ ಹೊಂದಿದೆ ಎಂದು ಇಸ್ರೊ ಮುಖ್ಯಸ್ಥರು ಹೇಳಿದ್ದಾರೆ. ಒಂದು ವೇಳೆ ಈ ಕನಸು ನನಸಾದರೆ, ಭಾರತ ಇನ್ನು ರಾಕೆಟ್ ತಂತ್ರಜ್ಞಾನ, ಉಪಗ್ರಹಗಳು, ಅವುಗಳ ಬಳಕೆ, ಮತ್ತು ಮಾನವ ಬಾಹ್ಯಾಕಾಶ ಯೋಜನೆಗಳಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾಗಳಂತಹ ದೇಶಗಳ ಮಟ್ಟಕ್ಕೆ ನಿಲ್ಲಲಿದೆ. ಅವರು ಇಸ್ರೊದ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಕನಸಾದ 2047ಕ್ಕೆ 'ವಿಕಸಿತ ಭಾರತ' ಸಾಧಿಸುವ ಗುರಿಗೆ ಸಮೀಕರಿಸಿದ್ದು, ಬಾಹ್ಯಾಕಾಶ ಕೇವಲ ನಕ್ಷತ್ರಗಳಿಗೆ ಸೀಮಿತವಲ್ಲ. ಬದಲಿಗೆ ಒಂದು ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣಕ್ಕೂ ಪೂರಕ ಎನ್ನುವುದನ್ನು ವಿವರಿಸಿದರು. ಇಸ್ರೊ ಸಮುದ್ರಯಾನ ಯೋಜನೆಗಾಗಿ 2.2 ಮೀಟರ್ ವ್ಯಾಸ ಮತ್ತು 100 ಮಿಲಿಮೀಟರ್ ದಪ್ಪನೆಯ ಟೈಟಾನಿಯಂ ನೌಕೆಯನ್ನೂ ಅಭಿವೃದ್ಧಿ ಪಡಿಸುತ್ತಿದ್ದು, ಇದು ಭಾರತೀಯರನ್ನು ಆಳ ಸಮುದ್ರಕ್ಕೆ ಕರೆದೊಯ್ಯಲಿದೆ.

ಜಿ20 ಉಪಗ್ರಹ 2032ರ ತನಕ ಸೇವೆ ಸಲ್ಲಿಸುವ ನಿರೀಕ್ಷೆಗಳಿದ್ದು, ಇದು ಬಾಹ್ಯಾಕಾಶದಲ್ಲಿ ತೇಲುವ ಒಂದು ಯಂತ್ರಕ್ಕಿಂತ ಎಷ್ಟೋ ಹೆಚ್ಚಿನದಾಗಿದೆ. ಇದು ಮಾನವ ಜನಾಂಗಕ್ಕೆ ಭಾರತದ ಹೆಮ್ಮೆಯ ಉಡುಗೊರೆಯಾಗಿದ್ದು, ವಿಜ್ಞಾನವನ್ನು ಬುದ್ಧಿವಂತಿಕೆಯಿಂದ ಬಳಸಿದರೆ ಅದು ದೇಶಗಳನ್ನು ಒಗ್ಗೂಡಿಸಬಲ್ಲದು ಎನ್ನುವುದಕ್ಕೆ ಸೂಕ್ತ ಉದಾಹರಣೆಯಾಗಿದೆ. ಕನಸು ಕಾಣುವ ಪ್ರತಿಯೊಂದು ಭಾರತೀಯ ಮಗುವಿಗೆ, ಮಳೆಯ ಕುರಿತು ಚಿಂತಿಸುವ ಪ್ರತಿಯೊಬ್ಬ ರೈತನಿಗೆ, ಮಲಿನವಾದ ಗಾಳಿಯಲ್ಲಿ ಕಷ್ಟಪಟ್ಟು ಉಸಿರಾಡುವ ಪ್ರತಿಯೊಬ್ಬ ನಾಗರಿಕನಿಗೆ, ಈ ಉಪಗ್ರಹ ಒಂದು ಮೌನ ಭರವಸೆಯನ್ನು ಒಯ್ಯಲಿದೆ. ಅದೇನೆಂದರೆ, ಉತ್ತಮ ಮಾಹಿತಿ, ಉತ್ತಮ ನಿರ್ಧಾರಗಳು, ಮತ್ತು ಸುರಕ್ಷಿತ ನಾಳೆಗಳು.

ಒಂದು ಕಾಲದಲ್ಲಿ ತೃತೀಯ ಜಗತ್ತಿನ ರಾಷ್ಟ್ರ ಎಂದು ಕರೆಸಿಕೊಳ್ಳುತ್ತಿದ್ದ ಭಾರತ ಇಂದು ಜಗತ್ತಿಗಾಗಿ ಆಗಸವನ್ನು ಬೆಳಗಲು ಸಜ್ಜಾಗಿದೆ. ಜಿ20 ಯೋಜನೆ ಕೇವಲ ಇಸ್ರೊದ ಯಶಸ್ಸು ಮಾತ್ರವಲ್ಲ. ಇದು ಆಗಸದತ್ತ ದೃಷ್ಟಿ ನೆಟ್ಟು ಕನಸು ಕಂಡ ಪ್ರತಿಯೊಬ್ಬ ಭಾರತೀಯನ ಹೃದಯಕ್ಕೂ ಹತ್ತಿರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.