ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರನ ಮೇಲ್ಮೈಯಲ್ಲಿ 1 ಕಿ.ಮೀ ಕ್ರಮಿಸಿದ ’ಚಾಂಗಿ–4‘ನ ರೋವರ್: ಚೀನಾ

Last Updated 8 ಜನವರಿ 2022, 11:58 IST
ಅಕ್ಷರ ಗಾತ್ರ

ಬೀಜಿಂಗ್: ಚಂದ್ರನ ಮತ್ತೊಂದು ಭಾಗದ ಮೇಲ್ಮೈಯಲ್ಲಿ ಇಳಿದಿರುವ ಚೀನಾದ ಗಗನನೌಕೆ ‘ಚಾಂಗಿ–4’ನ ಲ್ಯಾಂಡರ್‌ ಮತ್ತು ರೋವರ್ ‘ಯುಟು–2’, ಮೇಲ್ಮೈಯಲ್ಲಿ 1,003.9 ಮೀಟರ್‌ಗಳಷ್ಟು ದೂರ ಕ್ರಮಿಸುವ ಮೂಲಕ ಇತಿಹಾಸ ನಿರ್ಮಿಸಿದೆ.

‘ಯುಟು–2’ ಕೆಲ ವಸ್ತುಗಳ ಚಿತ್ರಗಳನ್ನು ಸೆರೆ ಹಿಡಿದಿದೆ. ಈ ಚಿತ್ರಗಳು ಅಸ್ಪಷ್ಟವಾಗಿದ್ದು, ಕುತೂಹಲ ಕೆರಳಿಸಿವೆ ಎಂದು ಚೀನಾ ನ್ಯಾಷನಲ್ ಸ್ಪೇಸ್ ಅಡ್ಮಿನಿಸ್ಟ್ರೇಷನ್‌ನ (ಸಿಎನ್‌ಎಸ್‌ಎ) ಹೇಳಿಕೆಯನ್ನು ಉಲ್ಲೇಖಿಸಿ ಕ್ಸಿನ್‌ಹುವಾ ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಇವು ಕಾವೇರಿದ ಚರ್ಚೆಗೂ ಕಾರಣವಾಗಿವೆ ಎಂದು ವರದಿ ಹೇಳಿದೆ.

ಭೂಮಿಯಿಂದ ನೋಡಿದಾಗ ನಮಗೆ ಕಾಣುವ ಚಂದ್ರನ ಪ್ರದೇಶಕ್ಕೆ ಅನೇಕ ದೇಶಗಳು ಗಗನನೌಕೆಗಳನ್ನು ಕಳುಹಿಸಿವೆ. ಆದರೆ, ಕತ್ತಲೆಯಿಂದ ಕೂಡಿರುವ, ಚಂದ್ರನ ಮತ್ತೊಂದು ಭಾಗದ ಕುರಿತು ಅಧ್ಯಯನ ನಡೆಸುವ ಪ್ರಯತ್ನಕ್ಕೆ ಮೊದಲು ಕೈಹಾಕಿದ್ದು ಚೀನಾ.

ಈ ಸಂಬಂಧ ಚೀನಾ ‘ಚಾಂಗಿ–4’ ಹೆಸರಿನ ಗಗನನೌಕೆಯನ್ನು 2018ರ ಡಿಸೆಂಬರ್ 8ರಂದು ಉಡ್ಡಯನ ಮಾಡಿತ್ತು. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಈ ಗಗನನೌಕೆ 2019ರ ಜನವರಿ 3ರಂದು ಇಳಿದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT