ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19ರಂದು 580 ವರ್ಷಗಳಲ್ಲೇ ಸುದೀರ್ಘವಾದ ಪಾರ್ಶ್ವ ಚಂದ್ರಗ್ರಹಣ ಗೋಚರ

Last Updated 13 ನವೆಂಬರ್ 2021, 15:50 IST
ಅಕ್ಷರ ಗಾತ್ರ

ಕೋಲ್ಕತ್ತ: ಇದೇ 19ರಂದು ಈಶಾನ್ಯ ಭಾರತದಲ್ಲಿ 580 ವರ್ಷಗಳಲ್ಲೇ ಸುದೀರ್ಘವಾದ ಪಾರ್ಶ್ವ ಚಂದ್ರಗ್ರಹಣವು ಗೋಚರಿಸಲಿದೆ ಎಂದು ಖಗೋಳಶಾಸ್ತ್ರಜ್ಞರು ಶನಿವಾರ ತಿಳಿಸಿದ್ದಾರೆ.

ಅರುಣಾಚಲ ಪ್ರದೇಶ ಮತ್ತು ಅಸ್ಸಾಂನ ಕೆಲವು ಪ್ರದೇಶಗಳಲ್ಲಿ ಈ ಅಪರೂಪದ ವಿದ್ಯಮಾನವು ಗೋಚರಿಸಲಿದೆ ಎಂದು ಎಂಪಿ ಬಿರ್ಲಾತಾರಾಲಯದ ಸಂಶೋಧನಾ ಮತ್ತು ಶೈಕ್ಷಣಿಕ ನಿರ್ದೇಶಕ ಡೆಬಿಪ್ರೋಸಾದ್ ದುವಾರಿ ತಿಳಿಸಿದ್ದಾರೆ.

ಭಾಗಶಃ ಗ್ರಹಣ ಮಧ್ಯಾಹ್ನ 12.48ಕ್ಕೆ ಆರಂಭವಾಗಿ ಸಂಜೆ 4.17ಕ್ಕೆ ಅಂತ್ಯವಾಗಲಿದೆ.ಗ್ರಹಣದ ಅವಧಿ 3 ಗಂಟೆ 28 ನಿಮಿಷ 24 ಸೆಕೆಂಡ್‌ಗಳಾಗಿದ್ದು, ಇದು 580 ವರ್ಷಗಳಲ್ಲೇ ಸುದೀರ್ಘವಾದುದು ಎಂದು ದುವಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT