ಮಂಡ್ಯ: ‘ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಅತ್ಯಂತ ವೇಗವಾಗಿ ಪ್ರಗತಿ ಸಾಧಿಸುತ್ತಿದೆ. ಇದಕ್ಕೆ ಎಂಜಿನಿಯರ್ ಮತ್ತು ವಿಜ್ಞಾನಿಗಳ ಕೊಡುಗೆ ಅಪಾರವಾಗಿದೆ’ ಎಂದು ಬೆಂಗಳೂರಿನ ಅಕ್ರಡೈನ್ ಸಂಸ್ಥೆ ಸಂಸ್ಥಾಪಕ ನೀರಜ್ಕುಮಾರ್ ತಿಳಿಸಿದರು.

ತಾಲ್ಲೂಕಿನ ಸುಂಡಹಳ್ಳಿ ಸಮೀಪದ ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ಕಾವೇರಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ಶನಿವಾರ ನಡೆದ 2ನೇ ಅಂತರರಾಷ್ಟ್ರೀಯ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಡ್ರೋನ್ ತಯಾರು ಮಾಡುವ ತಂತ್ರಜ್ಞಾನ ಅತ್ಯವಶ್ಯವಾಗಿದ್ದು, ಈ ಕಾರ್ಯಾಗಾರ ಹೆಚ್ಚಿನ ಅನುಕೂಲವಾಗಲಿದೆ ಎಂದು ಹೇಳಿದರು.

ಇಂಟೆಲ್ ಸಂಸ್ಥೆಯ ಎಂಜಿನಿಯರಿಂಗ್ ವಿಭಾಗದ ನಿರ್ದೇಶಕ ಇಸ್ಮಾಯಿಲ್ ಇಬ್ರಾಹಿಂ ಮಾತನಾಡಿ, ‘ಗ್ರಾಮೀಣ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ನಡೆಸುತ್ತಿರುವ ಕಾರ್ಯಾಗಾರ ಅತ್ಯಂತ ಮಹತ್ವದ್ದಾಗಿದೆ. ಇದರಲ್ಲಿ ಭಾಗವಹಿಸಿರುವುದು ನನಗೂ ಹೆಮ್ಮೆ ಎನಿಸಿದೆ’ ಎಂದರು.

‘ನಾನೂ ಕೂಡ ಗ್ರಾಮೀಣ ಭಾಗದಲ್ಲೇ ವ್ಯಾಸಂಗ ಮಾಡಿ ಟಾಟಾ ಕಂಪನಿ ಸೇರಿದ್ದೆ. ಅದರಲ್ಲಿ ಹಾರ್ಡ್ವೇರ್ ಡಿಸೈನ್, ಸಾಫ್ಟ್ವೇರ್ ಸೆಕ್ಯೂರಿಟಿ ಥಿಯರಿ, ಎಲೆಕ್ಟ್ರೋ ಮ್ಯಾಗ್ನೆಟಿಕ್ಸ್ ಮುಂತಾದ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ದೊರೆಯಿತು. ನಾನು ಬೆಳೆದು ಈಗ ಇಂಟೆಲ್ ಸಂಸ್ಥೆಯಲ್ಲಿ ಉನ್ನತ ಹುದ್ದೆಯಲ್ಲಿದ್ದೇನೆ’ ಎಂದು ಹೇಳಿದರು.

ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕಾರ್ಯದರ್ಶಿ ಸಿ.ಜೆ. ಗಂಗಾಧರಗೌಡ ಮಾತನಾಡಿ, ‘ಶಿಕ್ಷಣವು ತರಗತಿಗಳು ಮತ್ತು ಪ್ರಯೋಗ ಶಾಲೆಯಿಂದಾಚೆಗೆ ಬೆಳೆಯಬೇಕು. ಈ ರೀತಿಯ ಸಮ್ಮೇಳನಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಪರಿಣಿತರೊಡನೆ ಸಂವಾದ ಮಾಡಲು ಜ್ಞಾನವೃದ್ಧಿ ಮಾಡಿ ಕೊಳ್ಳಲು ಸಹಾಯವಾಗುತ್ತದೆ’ ಎಂದರು.

ಕಾವೇರಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಧ್ಯಕ್ಷ ಸಂಗಮೇಶ್ವರ್ ಮಾತನಾಡಿ, ಡಾ.ಅಬ್ದುಲ್ ಕಲಾಂ ಅವರ ವಿಜ್ಞಾನವು ಮಾನವನಿಗೆ, ಮಾನವ ಜಗತ್ತಿಗೆ ದೇವರು ನೀಡಿರುವ ಸಂದರವಾದ ಕೊಡುಗೆ. ಅದನ್ನು ಹಾಳು ಮಾಡಬಾರದು ಎಂದು ಸಲಹೆ ನೀಡಿದರು.

ಮಾನವನ ನಾಗರಿಕತೆಯ ಪ್ರಗತಿಯು ರಸ್ತೆ, ರೈಲು ವಿದ್ಯುತ್ ಮತ್ತು ಇಂಟರ್ನೆಟ್ಗಳ ಕೊಂಡಿಯಿಂದ ಬೆಸೆದುಕೊಂಡಿದೆ. ಈ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯಿಂದ ಕೂಡಿ ವ್ಯವಸ್ಥೆ ಇನ್ನೂ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದೆ ಎಂದು ವಿವರಿಸಿದರು.

ಕಾಲೇಜಿನ ಪ್ರಾಂಶುಪಾಲ ಎ.ಎಸ್. ಶ್ರೀಕಂಠಪ್ಪ, ಎ.ಪಿ. ಸವಿತಾ ಅವರು ವಿವಿಧ ವಿಷಯಗಳ ಕುರಿತು ಮಾತನಾಡಿದರು. ಸಮ್ಮೇಳನದಲ್ಲಿ ವಿವಿಧ ದೇಶಗಳಿಂದ ಸುಮಾರು 60ಕ್ಕೂ ಹೆಚ್ಚು ಸಂಶೋಧನಾರ್ಥಿಗಳು ತಮ್ಮ ಪ್ರಬಂಧಗಳನ್ನು ಮಂಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-40-1898296251

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.