ಮಂಗಳೂರು: ಸುರತ್ಕಲ್ನಲ್ಲಿರುವ ಕರ್ನಾಟಕ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯ (ಎನ್ಐಟಿಕೆ) ಸಂಶೋಧಕರು ಮೂಳೆ ಕಸಿಯಲ್ಲಿ ಬಳಸಬಹುದಾದ ಜೀವನಿರೋಧಕ (ಆ್ಯಂಟಿ ಮೈಕ್ರೋಬಿಯಲ್) ಲೇಪನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ.

ಇದು, ಸುಧಾರಿತವಾಗಿದ್ದು ಜೈವಿಕವಾಗಿ ಸಕ್ರಿಯವಾದ, ದೀರ್ಘ ಬಾಳಿಕೆ ಬರುವ ಹಾಗೂ ನಿರ್ದಿಷ್ಟ ಭಾಗದ ಅವಶ್ಯಕತೆಗೆ ತಕ್ಕಂತೆ ಮಾರ್ಪಾಡು ಮಾಡಬಹುದಾಗಿದೆ.

‘ಸೊಂಟ ಮತ್ತು ಮೊಣಕಾಲುಗಳ ಕೀಲು ಮೂಳೆ ಕಸಿ ಶಸ್ತ್ರಚಿಕಿತ್ಸೆಯ ಫಲಿತಾಂಶ ಸುಧಾರಣೆಗೆ ಇದು ಪ್ರಯೋಜನಕಾರಿ. 'ಮೇಕ್ ಇನ್ ಇಂಡಿಯಾ' ಅಡಿಯಲ್ಲಿ ಪೇಟೆಂಟ್ ಪಡೆದ ಈ ದೇಸಿ ತಂತ್ರಜ್ಞಾನ ಬಯೋಮೆಡಿಕಲ್ ಎಂಜಿನಿಯರಿಂಗ್ನಲ್ಲಿ ಮಹತ್ವದ ಮೈಲುಗಲ್ಲು’ ಎಂದು ಸಂಶೋಧಕರು ತಿಳಿಸಿದ್ದಾರೆ.

ಮೂಳೆ ಕಸಿ ಮಾಡಿಸಿಕೊಳ್ಳುವ ರೋಗಿಗಳ ಸ್ಥಿತಿ ಸುಧಾರಿಸುವಲ್ಲಿ ಇದೊಂದು ಮಹತ್ವದ ಹೆಜ್ಜೆ. ಎನ್ಐಟಿಕೆ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಸುಧಾಕರ್ ಸಿ. ಜಂಬಗಿ ಮತ್ತು ಸಂಶೋಧನಾ ವಿದ್ಯಾರ್ಥಿ ದೀಪ್ ಶಂಕರ್ ಇದನ್ನು ಅಭಿವೃದ್ಧಿಪಡಿಸಿದ್ದಾರೆ.

‘ಮೂಳೆ ಕಸಿ ಬಳಿಕ ಸೋಂಕು ತಗಲುವಿಕೆ, ಜೋಡಿಸಿದ ಕೀಲು ಮೂಳೆಗಳು ಸಡಿಲಗೊಳ್ಳುವುದು ಮುಂತಾದ ಸವಾಲುಗಳನ್ನು ಈ ಹೊಸ ತಂತ್ರಜ್ಞಾನ ಬಗೆಹರಿಸಲಿದೆ. ಈ ಲೇಪನವನ್ನು ಅತ್ಯುತ್ತಮವಾದ ಹೈ ವೆಲಾಸಿಟಿ ಆಕ್ಸಿ-ಫ್ಯುಯೆಲ್ (ಎಚ್ವಿಒಎಫ್) ಥರ್ಮಲ್ ಸ್ಪ್ರೇ ಮೂಲಕ ಮೂಳೆ ಕಸಿಗೆ ಬಳಸುವ ಸಾಧನಗಳ ಮೇಲೆ ನೇರವಾಗಿ ಅನ್ವಯಿಸಬಹುದು. ಇದು ಆ ಭಾಗಕ್ಕೆ ನಿರ್ದಿಷ್ಟವಾಗಿ ಜೀವನಿರೋಧಕ ರಕ್ಷಣೆ ಒದಗಿಸುತ್ತದೆ’ ಎಂದು ಸಂಶೋಧಕರು ತಿಳಿಸಿದ್ದಾರೆ.

‘ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಂಪ್ರದಾಯಿಕ ಮೂಳೆ ಕಸಿ ವಿಧಾನಗಳಿಗೆ ಹೋಲಿಸಿದರೆ ಈ ಹೊಸ ತಂತ್ರಜ್ಞಾನವು ಭರವಸೆದಾಯಕ. ವೆಚ್ಚವನ್ನೂ ಇದು ಕಡಿತಗೊಳಿಸಬಲ್ಲುದು. ಸಂಶೋಧನಾ ತಂಡವು ಈ ತಂತ್ರಜ್ಞಾನದ ಕ್ಲಿನಿಕಲ್ ಬಳಕೆ ಮತ್ತು ವಾಣಿಜ್ಯ ಬಳಕೆಯ ಕುರಿತು ಕಾರ್ಯೋನ್ಮುಖವಾಗಿದೆ. ಇದನ್ನು ಮಾರುಕಟ್ಟೆಗೆ ತಲುಪಿಸಲು ಡೀಪ್-ಟೆಕ್ ನವೋದ್ಯಮವನ್ನೂ ಆರಂಭಿಸಲಾಗಿದೆ. ಸ್ಥಳೀಯ ಬಯೋಮೆಡಿಕಲ್ ತಂತ್ರಜ್ಞಾನವನ್ನು ಉತ್ತೇಜಿಸುವುದು ಮತ್ತು ದೇಶದ ಜನರಿಗೆ ಕೈಗೆಟಕುವ ದರಲ್ಲಿ ಸುಧಾರಿತ ಆರೋಗ್ಯ ಪರಿಹಾರೊಪಾಯ ತಲುಪಿಸುವುದು ಮುಖ್ಯ ಉದ್ದೇಶ’ ಎಂದು ಎನ್ಐಟಿಕೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-51-709965780

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.